ಮೃತ ಪೊಲೀಸ್ ಪೇದೆ‌ ಕುಟುಂಬಕ್ಕೆ 1 ಲಕ್ಷ‌ ರೂ. ಚೆಕ್ ವಿತರಿಸಿದ ಪ್ರಿಯಾಂಕ್ ಖರ್ಗೆ

ಇತ್ತೀಚೆಗೆ ಅಕ್ರಮ‌ ಮರಳು ತಪಾಸಣೆ ಸಂದರ್ಭದಲ್ಲಿ ಟ್ರಾಕ್ಟರ್ ಗೆ ಸಿಲುಕಿ ಸಾವನಪ್ಪಿದ ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸ್ ಠಾಣೆಯ ಮುಖ್ಯ ಪೇದೆ ಮಯೂರ್ ಚವ್ಹಾಣ ಅವರ ಚೌಡಾಪೂರ್ ತಾಂಡಾ ನಿವಾಸಕ್ಕೆ ಮಂಗಳವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

Written by - Manjunath N | Last Updated : Jun 20, 2023, 04:01 PM IST
  • ತಮ್ಮ ಪಕ್ಷದ ವತಿಯಿಂದ 1 ಲಕ್ಷ‌ ರೂ. ಚೆಕ್ ಮೃತ ಮಯೂರ್ ಚವ್ಹಾಣ ಅವರ ಪತ್ನಿ ನಿರ್ಮಲಾ ಅವರಿಗೆ ವಿತರಿಸಿದರು.
  • ಸರ್ಕಾರದಿಂದ ಸಿಗಬೇಕಾದ ಎಲ್ಲಾ ಸೌಲಭ್ಯ ಕಲ್ಪಿಸಲಾಗುವುದು. ಧೈರ್ಯದಿಂದಿರಿ, ಆತ್ಮ ವಿಶ್ವಾಸ ಕಳೆದುಕೊಳ್ಳಬೇಡಿ.
  • ಸರ್ಕಾರ ನಿಮ್ಮೊಂದಿಗಿದೆ ಎಂದು ಕುಟುಂಬಸ್ಥರಿಗೆ ಸಚಿವರು ಮತ್ತು ಶಾಸಕರು ಸಾಂತ್ವನ ನುಡಿಗಳನ್ನಾಡಿದರು.
ಮೃತ ಪೊಲೀಸ್ ಪೇದೆ‌ ಕುಟುಂಬಕ್ಕೆ 1 ಲಕ್ಷ‌ ರೂ. ಚೆಕ್ ವಿತರಿಸಿದ ಪ್ರಿಯಾಂಕ್ ಖರ್ಗೆ title=

ಕಲಬುರಗಿ:ಇತ್ತೀಚೆಗೆ ಅಕ್ರಮ‌ ಮರಳು ತಪಾಸಣೆ ಸಂದರ್ಭದಲ್ಲಿ ಟ್ರಾಕ್ಟರ್ ಗೆ ಸಿಲುಕಿ ಸಾವನಪ್ಪಿದ ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸ್ ಠಾಣೆಯ ಮುಖ್ಯ ಪೇದೆ ಮಯೂರ್ ಚವ್ಹಾಣ ಅವರ ಚೌಡಾಪೂರ್ ತಾಂಡಾ ನಿವಾಸಕ್ಕೆ ಮಂಗಳವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಇದನ್ನೂ ಓದಿ: ಲೈಂಗಿಕತೆಗೆ ನಕಾರ ಹೇಳುವುದು ಕ್ರೌರ್ಯ, ಆದರೆ ಅಪರಾಧವಲ್ಲ, ಕರ್ನಾಟಕ ಹೈಕೋರ್ಟ್ ಆದೇಶ

ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಎಂ.ವೈ.ಪಾಟೀಲ ಜೊತೆ ಸೇರಿ ತಮ್ಮ ಪಕ್ಷದ ವತಿಯಿಂದ 1 ಲಕ್ಷ‌ ರೂ. ಚೆಕ್ ಮೃತ ಮಯೂರ್ ಚವ್ಹಾಣ ಅವರ ಪತ್ನಿ ನಿರ್ಮಲಾ ಅವರಿಗೆ ವಿತರಿಸಿದರು.

ಸರ್ಕಾರದಿಂದ ಸಿಗಬೇಕಾದ ಎಲ್ಲಾ ಸೌಲಭ್ಯ ಕಲ್ಪಿಸಲಾಗುವುದು. ಧೈರ್ಯದಿಂದಿರಿ, ಆತ್ಮ ವಿಶ್ವಾಸ ಕಳೆದುಕೊಳ್ಳಬೇಡಿ. ಸರ್ಕಾರ ನಿಮ್ಮೊಂದಿಗಿದೆ ಎಂದು ಕುಟುಂಬಸ್ಥರಿಗೆ ಸಚಿವರು ಮತ್ತು ಶಾಸಕರು ಸಾಂತ್ವನ ನುಡಿಗಳನ್ನಾಡಿದರು.

ಇದನ್ನೂ ಓದಿ: ಧಮ್ಮಿದ್ದರೆ ಪ್ರತಿಯೊಬ್ಬರಿಗೆ 15 ಕೆಜಿ ಅಕ್ಕಿ ಕೊಡಿ: ಬಸವರಾಜ ಬೊಮ್ಮಾಯಿ

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಮೃತ ಮಯೂರ್ ಚವ್ಹಾಣ ಕುಟುಂಬಕ್ಕೆ ಪೊಲೀಸ್ ಇಲಾಖೆಯಿಂದ 30 ಲಕ್ಷ ರೂ. ಪರಿಹಾರ ನೀಡಲಾಗುವುದು. ಜೊತೆಗೆ ಸೇವಾ ವಿಮೆ, ಗ್ರಾಜುಟಿ ಸೇರಿದಂತೆ ಇತರೆ 10 ಲಕ್ಷ ರೂ. ಕುಟುಂಬಕ್ಕೆ ಸಿಗಲಿದೆ. ಸರ್ಕಾರದ ನಿಯಮಾವಳಿಯಂತೆ ಕುಟುಂಬದ‌ ಓರ್ವ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಲಾಗುವುದು. ಮಕ್ಕಳ ವಿಧ್ಯಾಬ್ಯಾಸದ ಬಗ್ಗೆಯೂ ಸರ್ಕಾರ ಗಮನಹರಿಸಲಿದೆ ಎಂದರು.

ಮರಳು ಮಾಫಿಯಾಗೆ ಕಡಿವಾಣ:

ಜಿಲ್ಲೆಯಲ್ಲಿ ಅಕ್ರಮ ಮರಳು ಮಾಫಿಯಾಗೆ ಕಡಿವಾಣ ಹಾಕಲಾಗುವುದು. ನಮ್ಮ ಸರ್ಕಾರ ಬಂದು 1 ತಿಂಗಳಾಗಿದೆ. ಜಿಲ್ಲೆಯಲ್ಲಿನ ಅಕ್ರಮ ಮರಳುಗಾರಿಕೆ, ಗಣಿಗಾರಿಕೆ, ಜೂಜು ಅಡ್ಡೆ ತಡೆಯಲು ಈಗಾಗಲೆ ಹೆಜ್ಜೆ ಇಟ್ಟಿದ್ದೇವೆ. ಈ ಪ್ರಕರಣ ಸ್ಟಾಕ್ ಯಾರ್ಡ್ ನಿಂದ ಮರಳು ತರುವಾಗ ಘಟಿಸಿದೆ. ಇದರಲ್ಲಿ ಯಾರೇ ತಪ್ಪಿತಸ್ಥರಿದ್ದರು ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಶಾಸಕರಾದ ಎಂ.ವೈ.ಪಾಟೀಲ, ಎಸ್.ಪಿ. ಇಶಾ ಪಂತ್, ತಹಶೀಲ್ದಾರ ಸಂಜೀವಕುಮಾರ ದಾಸರ್ ಮತ್ತಿತರು ಇದ್ದರು.

;

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News