ಮತದಾನದ ಆಧಾರದಲ್ಲಿ ಇದು ದೇಶದಲ್ಲೇ ಅತಿ ಚಿಕ್ಕ ಸಂಸದೀಯ ಕ್ಷೇತ್ರ

1957 ರಿಂದ 1967 ರವರೆಗೆ, ನಲ್ಲ ಕೋಯಾ ತಂಗಲ್ (ಕಾಂಗ್ರೆಸ್) ಸಂಸತ್ತಿನ ಸದಸ್ಯರಾಗಿದ್ದರು.

Last Updated : Apr 5, 2019, 07:34 AM IST
ಮತದಾನದ ಆಧಾರದಲ್ಲಿ ಇದು ದೇಶದಲ್ಲೇ ಅತಿ ಚಿಕ್ಕ ಸಂಸದೀಯ ಕ್ಷೇತ್ರ title=

ನವದೆಹಲಿ: ಲಕ್ಷದ್ವೀಪ ಲೋಕಸಭಾ ಕ್ಷೇತ್ರವು ಒಂದು ವಿಶಿಷ್ಟವಾದ ಸಂಸದೀಯ ಕ್ಷೇತ್ರವಾಗಿದೆ. ಈ ಕ್ಷೇತ್ರವನ್ನು ಪರಿಶಿಷ್ಟ ಪಂಗಡಗಳಿಗೆ ಮೀಸಲಿರಿಸಲಾಗಿದೆ. ಏಪ್ರಿಲ್ 11 ರಂದು ಮೊದಲ ಹಂತದಲ್ಲಿ ಇಲ್ಲಿ ಮತದಾನ ನಡೆಯಲಿದೆ. 2014 ರ ಪ್ರಕಾರ, ಮತದಾರರ ಸಂಖ್ಯೆಯ ಆಧಾರದ ಮೇಲೆ ಇದು ದೇಶದಲ್ಲಿ ಅತಿ ಚಿಕ್ಕ ಸಂಸದೀಯ ಕ್ಷೇತ್ರವಾಗಿದೆ. 

1967 ರಲ್ಲಿ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಚುನಾವಣೆ ನಡೆಸಲಾಯಿತು. ಇದಕ್ಕೆ ಮುಂಚೆ,  ಇಲ್ಲಿ ಪ್ರತಿನಿಧಿಯು ಅಧ್ಯಕ್ಷರಿಂದ ಆಯ್ಕೆಯಾಗುತ್ತಿದ್ದರು. 1957 ರಿಂದ 1967 ರವರೆಗೆ, ನಲ್ಲ ಕೋಯಾ ತಂಗಲ್ (ಕಾಂಗ್ರೆಸ್) ಸಂಸತ್ತಿನ ಸದಸ್ಯರಾಗಿದ್ದರು. ಸ್ವತಂತ್ರ ಅಭ್ಯರ್ಥಿ ಮೊದಲ ಚುನಾವಣೆಯಲ್ಲಿ ಜಯಗಳಿಸಿದರು.

1967 ರಿಂದ 2004 ರವರೆಗೆ ಕಾಂಗ್ರೆಸ್ನ ಪಿ.ಎಂ. ಸಯೀದ್ ಇಲ್ಲಿಂದ ಸತತ ಎಂಟು ಚುನಾವಣೆಗಳಲ್ಲಿ ಜಯಗಳಿಸಿದ್ದಾರೆ. 2004 ರಲ್ಲಿ ಅವರು ಕೇವಲ 71 ಮತಗಳಿಂದ ಸೋಲನ್ನನುಭವಿಸಿದರು. 2014 ರ ಚುನಾವಣೆಯಲ್ಲಿ ಕಾಂಗ್ರೆಸ್ ಮೊಹಮ್ಮದ್ ಹಮ್ಮುದುಲ್ಲಾ ಸಯೀದ್ ಅವರನ್ನು ಸೋಲಿಸಿ ಎನ್ಸಿಪಿ ಅಭ್ಯರ್ಥಿ ಜಯಗಳಿಸಿದ್ದಾರೆ. ಈ ಚುನಾವಣೆಯಲ್ಲಿ ಎನ್ಸಿಪಿ ಮೊಹಮ್ಮದ್ ಫೈಝಲ್ ಅವರಿಗೆ ಟಿಕೆಟ್ ನೀಡಿದ್ದರೆ, ಕಾಂಗ್ರೆಸ್ ಮೊಹಮ್ಮದ್ ಹಮ್ದುಲ್ಲಾ ಸಯೀದ್ ಅವರನ್ನು ತನ್ನ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಸಿಪಿಎಂ ಶೆರೀಫ್ ಖಾನ್ ಅವರನ್ನು ಕಣಕ್ಕಿಳಿಸಿದೆ.

2014 ರ ಅಂಕಿಅಂಶಗಳ ಪ್ರಕಾರ, ಇಲ್ಲಿ 24,489 ಸ್ತ್ರೀ ಮತದಾರರು ಮತ್ತು 25,433 ಪುರುಷ ಸೇರಿದಂತೆ ಒಟ್ಟು 49,922 ಮತದಾರರಿದ್ದಾರೆ. 50,000 ಕ್ಕಿಂತ ಹೆಚ್ಚು ಮುಸ್ಲಿಂ ಜನಸಂಖ್ಯೆ ಇದೆ. 2011 ರ ಜನಗಣತಿಯ ಪ್ರಕಾರ, 67,000 ಜನಸಂಖ್ಯೆಯಲ್ಲಿ 42,000 ಜನರು 15 ವರ್ಷದಿಂದ 59 ವರ್ಷ ವಯಸ್ಸಿನವರಾಗಿದ್ದಾರೆ.
 

Trending News