ನವದೆಹಲಿ: ದೇಶದಲ್ಲಿ ಪ್ರತಿನಿತ್ಯ ಕೋಟ್ಯಾಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಇದರಲ್ಲಿ ಎಸಿ ವರ್ಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಯಾಣಿಸುತ್ತಿದ್ದರೆ, ರೈಲಿನ ಸಾಮಾನ್ಯ ವರ್ಗದಲ್ಲೂ ಹೆಚ್ಚು ಜನರು ಪ್ರಯಾಣಿಸುತ್ತಾರೆ. ಎಸಿ ವರ್ಗದಲ್ಲಿ, ಪ್ರಯಾಣಿಕರು ರೈಲಿನೊಳಗೆ ಆಹಾರ ಪದಾರ್ಥಗಳನ್ನು ಪಡೆಯುತ್ತಾರೆ ಮತ್ತು ಚಹಾ-ನೀರು ಮಾರಾಟಗಾರರು ಸಹ ಕಾಲಕಾಲಕ್ಕೆ ಬರುತ್ತಾರೆ. ಆದರೆ ಸಾಮಾನ್ಯ ವರ್ಗದ ಪ್ರಯಾಣಿಕರಿಗೆ ಯಾವುದೇ ಸೌಲಭ್ಯ ಸಿಗುತ್ತಿರಲಿಲ್ಲ. ಅವರಿಗೆ ರೈಲಿನಲ್ಲಿ ಪ್ಯಾಂಟ್ರಿ ಕಾರಿನ ಸೌಲಭ್ಯವೂ ಇಲ್ಲ. ಅಂಥವರಿಗೆ ಪರಿಹಾರ ನೀಡಲು ರೈಲ್ವೆ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಹೌದು, ಇನ್ಮುಂದೆ ಅವರಿಗೆ ಕೇವಲ 20 ರೂಪಾಯಿಗೆ ಹೊಟ್ಟೆತುಂಬಾ ಊಟ ಸಿಗಲಿದೆ. ಇದಕ್ಕಾಗಿ ವಾಯುವ್ಯ ರೈಲ್ವೆ ಹೊಸ ಉಪಕ್ರಮವನ್ನು ಆರಂಭಿಸಿದೆ.
ವಿಷಯ ಏನು?
ಎಸ್ ಕ್ಲಾಸ್ ಜೊತೆಗೆ ಇದೀಗ ಸಾಮಾನ್ಯ ವರ್ಗದ ಪ್ರಯಾಣಿಕರು ಸಹ ತಮ್ಮ ಊಟದ ಬಗ್ಗೆ ಚಿಂತಿಸಬೇಕಾಗಿಲ್ಲ. ಇದಕ್ಕಾಗಿ ಅಜ್ಮೀರ್, ಉದಯಪುರ ಸೇರಿದಂತೆ ಹಲವು ರೈಲು ನಿಲ್ದಾಣಗಳಲ್ಲಿ ಸಾಮಾನ್ಯ ವರ್ಗದ ಪ್ರಯಾಣಿಕರಿಗೆ ಕೈಗೆಟಕುವ ದರದಲ್ಲಿ ಆಹಾರವನ್ನು ನೀಡಲು ವಾಯುವ್ಯ ರೈಲ್ವೆ ಕ್ರಮ ಕೈಗೊಂಡಿದೆ. ವಿಶೇಷವೆಂದರೆ ಸಾಮಾನ್ಯ ವರ್ಗದ ಕೋಚ್ಗಳು ನಿಲ್ಲುವ ಸ್ಥಳಗಳಲ್ಲಿ ಈ ಅಗ್ಗದ ದರದ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ.
ಇದನ್ನೂ ಓದಿ-ಪಿಎಂ ಕಿಸಾನ್ 14ನೇ ಕಂತಿಗೂ ಮುನ್ನ ರೈತರಿಗೆ ಸಿಹಿ ಸುದ್ದಿ ಪ್ರಕಟಿಸಿದ ಕೇಂದ್ರ ಕೃಷಿ ಸಚಿವರು!
20 ರೂಪಾಯಿಗೆ ಆಹಾರ ಸಿಗಲಿದೆ
ಸಾಮಾನ್ಯ ವರ್ಗದ ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಕಡಿಮೆ ದರದಲ್ಲಿ ಆಹಾರವನ್ನು ನೀಡಲಾಗುತ್ತಿದೆ ಎಂದು ರೈಲ್ವೆ (ನಾರ್ತ್ ವೆಸ್ಟರ್ನ್ ರೈಲ್ವೆ) ತಿಳಿಸಿದೆ. ಇದರಲ್ಲಿ ಜನ ಸಾಮಾನ್ಯರು ಕೇವಲ 20 ರೂ.ಗೆ ಹೊಟ್ಟೆ ತುಂಬಾ ಊಟ ಸಿಗಲಿದೆ. ಪ್ರಯಾಣಿಕರಿಗೆ 7 ಪೂರಿ, ಒಣ ಆಲೂಗಡ್ಡೆ ಕರಿ ಮತ್ತು ಉಪ್ಪಿನಕಾಯಿ 20 ರೂ.ಗಳಿಗೆ ಸಿಗಲಿದೆ. ಆದರೆ, 50 ರೂಪಾಯಿಗಳಿಗೆ ರಾಜ್ಮಾ/ಚೋಲೆ, ಖಿಚಡಿ/ಪೊಂಗಲ್, ಕುಲ್ಚೆ/ಭಟುರೆ, ಪಾವ್ ಭಾಜಿ, ಮಸಾಲಾ ದೋಸೆ ಸಿಗಲಿದೆ.
ಇದನ್ನೂ ಓದಿ-ಈ ಹೂವಿನ ಕೃಷಿ ನಿಮ್ಮ ಪಾಲಿಗೆ ಲಾಭದ ವ್ಯವಸಾಯ, ಸಾಕಷ್ಟು ಹಣ ಸಂಪಾದಿಸಬಹುದು!
ಇದರೊಂದಿಗೆ 200ಎಂಎಲ್ ಗ್ಲಾಸ್ ನೀರು ಕೇವಲ ರೂ.3ಕ್ಕೆ ಜನರಿಗೆ ಸಿಗುತ್ತದೆ. ಸಾಮಾನ್ಯವಾಗಿ ನಿಲ್ದಾಣಗಳಲ್ಲಿ ನೀರಿನ ಬಾಟಲಿ ರೂ.15ಕ್ಕೆ ದೊರೆಯುತ್ತದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.