ಬೆಂಗಳೂರು: ದಲಿತ ಸಿಎಂ ವಿಚಾರದಲ್ಲಿ ಕಾಂಗ್ರೆಸ್ ಡೋಂಗಿತನ ನಿಲ್ಲಿಸಲಿ ಎಂದು ಬಿಜೆಪಿ ಕಿಡಿಕಾರಿದೆ. ಈ ಬಗ್ಗೆ ಶುಕ್ರವಾರ ಟ್ವೀಟ್ ಮಾಡಿರುವ ಬಿಜೆಪಿ, ‘ಕಾಂಗ್ರೆಸ್ ದಲಿತರ ಶ್ರೇಯೋಭಿವೃದ್ಧಿಯ ಬಗ್ಗೆ ಮಾತನಾಡುವುದು "ಭೂತದ ಬಾಯಲ್ಲಿ ಭಗವದ್ಗೀತೆಯಂತೆ’ ಎಂದು ಟೀಕಿಸಿದೆ.
‘ಕಾಂಗ್ರೆಸ್ 6 ದಶಕಗಳ ಕಾಲ ದಲಿತರನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಂಡು ಅವರ ಬದುಕನ್ನು ಕತ್ತಲಲ್ಲಿರಿಸಿತ್ತು. ಅವರ ಬದುಕಿಗೆ 'ಹೊಸ ಬೆಳಕು' ನೀಡಿದ್ದು ಬಿಜೆಪಿ. ಸ್ವಾತಂತ್ರ್ಯ ಭಾರತದಲ್ಲಿ ಕಾಂಗ್ರೆಸ್ ದಲಿತರಿಗೆ ಮಾಡಿರುವ ಮಹಾಮೋಸಗಳು ಜಗಜ್ಜಾಹೀರಾಗಿವೆ’ ಎಂದು ಬಿಜೆಪಿ ಕುಟುಕಿದೆ.
ಇದನ್ನೂ ಓದಿ: ಶಕ್ತಿ ಯೋಜನೆಯಿಂದ ಹೆಚ್ಚಾಯ್ತು ದೇವಾಲಯಗಳ ಆದಾಯ
ಕಾಂಗ್ರೆಸ್ ದಲಿತರ ಶ್ರೇಯೋಭಿವೃದ್ಧಿಯ ಬಗ್ಗೆ ಮಾತನಾಡುವುದು "ಭೂತದ ಬಾಯಲ್ಲಿ ಭಗವದ್ಗೀತೆಯಂತೆ".
ಕಾಂಗ್ರೆಸ್ 6 ದಶಕಗಳ ಕಾಲ ದಲಿತರನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಂಡು ಅವರ ಬದುಕನ್ನು ಕತ್ತಲಲ್ಲಿರಿಸಿತ್ತು. ಅವರ ಬದುಕಿಗೆ 'ಹೊಸ ಬೆಳಕು' ನೀಡಿದ್ದು ಬಿಜೆಪಿ.
ಸ್ವಾತಂತ್ರ್ಯ ಭಾರತದಲ್ಲಿ ಕಾಂಗ್ರೆಸ್ ದಲಿತರಿಗೆ ಮಾಡಿರುವ ಮಹಾಮೋಸಗಳು…
— BJP Karnataka (@BJP4Karnataka) July 21, 2023
‘ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು 2 ಬಾರಿ ಚುನಾವಣೆಯಲ್ಲಿ ಸೋಲಿಸಿ, ನಿರಂತರವಾಗಿ ಅವಮಾನಿಸಿದ್ದು ಕಾಂಗ್ರೆಸ್. ಹಿರಿಯ ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ಡಾ.ಜಿ.ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸದೆ ಅವಮಾನ ಮಾಡುತ್ತಿರುವುದು ಕಾಂಗ್ರೆಸ್. ದಲಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸೌಜನ್ಯಕ್ಕೂ ಅಭಿನಂದನೆ ಸಲ್ಲಿಸದ ಕಾಂಗ್ರೆಸ್. ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿಯಿಟ್ಟಾಗ ಮತಾಂಧರ ಪರ ನಿಂತಿದ್ದು ಕಾಂಗ್ರೆಸ್. ದಲಿತ ಮಕ್ಕಳಿಗೆ ನೀಡುವ ಹಾಸಿಗೆ, ದಿಂಬು, ತಟ್ಟೆ, ಲೋಟಗಳಲ್ಲಿ ಸಹ ಭ್ರಷ್ಟಾಚಾರ ನಡೆಸಿ, ಮಕ್ಕಳಿಗೆ ತೊಂದರೆ ನೀಡಿದ್ದು ಕಾಂಗ್ರೆಸ್’ ಎಂದು ಬಿಜೆಪಿ ಟೀಕಿಸಿದೆ.
‘ಕಾಂಗ್ರೆಸ್ ನಾಯಕರೇ ನಿಜಕ್ಕೂ ನಿಮಗೆ ದಲಿತರ ಮೇಲೆ ಕಾಳಜಿ ಇದ್ದರೆ, ಇದೀಗ ಬಹುಮತದೊಂದಿಗೆ ಅವಕಾಶವೂ ಇದೆ, ದಲಿತ ನಾಯಕರೊಬ್ಬರನ್ನು ಸಿಎಂ ಮಾಡಿ, ಇಲ್ಲವೇ ಡೋಂಗಿತನ ನಿಲ್ಲಿಸಿ.
ಇದನ್ನೂ ಓದಿ: ದಲಿತರನ್ನು ಬಿಜೆಪಿ ಏಕಿಷ್ಟು ಕೇವಲವಾಗಿ ಕಾಣುತ್ತಿದೆ?: ಕಾಂಗ್ರೆಸ್
ಚಾಲಕರ ಬದುಕು ಬೀದಿಗೆ!
‘ತನ್ನ ಗ್ಯಾರಂಟಿಗಳ ಅವಾಸ್ತವಿಕ ಅನುಷ್ಠಾನದಿಂದ ಕಾಂಗ್ರೆಸ್ ಸರ್ಕಾರ ಶ್ರಮಜೀವಿಗಳ ಬದುಕನ್ನು ದುಸ್ತರವಾಗಿಸಿದೆ. ಅತ್ತ ಯೋಜನೆಗಳಿಗೆ ಸೂಕ್ತ ಹಣಕಾಸೂ ನೀಡದೆ, ಇತ್ತ ಬದುಕೂ ಹಸನು ಮಾಡದ ಸಿದ್ದರಾಮಯ್ಯನವರಿಂದ ದುಡಿಯುವ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ನಿಮ್ಮ ಸ್ವಾರ್ಥಕ್ಕಾಗಿ ₹2,000 ಕೋಟಿಗಿಂತ ಹೆಚ್ಚು ನೇರ ತೆರಿಗೆಯ ಕೊಡುಗೆ ನೀಡುವ ಲಕ್ಷಕ್ಕೂ ಅಧಿಕ ಚಾಲಕರ ಬದುಕನ್ನು ಬೀದಿಗೆ ತಂದಿದ್ದೀರಿ’ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.