ಶಿವಣ್ಣ-ರಜಿನಿ ʼಜೈಲರ್ʼ ಆಡಿಯೋ ರಿಲೀಸ್‌ ಇವೆಂಟ್‌ಗೆ ʼಪಾಸ್‌ʼ ಬೇಕಾ..! ತಕ್ಷಣ ಹೀಗೆ ಮಾಡಿ

ಮುಂದಿನ ತಿಂಗಳು 10 ರಂದು ಬಿಡುಗಡೆಯಾಗಲಿರುವ ರಜನಿಕಾಂತ್ ಅಭಿನಯದ ‘ಜೈಲರ್’ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಸ್ಟಾರ್‌ ಡೈರೆಕ್ಟರ್‌ ನೆಲ್ಸನ್ ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಾಣದ ಈ ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್‌ ಮಲಯಾಳಂ ನಟ ಮೋಹನ್‌ ಲಾಲ್‌ ನಟಿಸಿದ್ದಾರೆ.

Written by - Krishna N K | Last Updated : Jul 23, 2023, 06:49 PM IST
  • ಸೂಪರ್‌ ಸ್ಟಾರ್‌ ರಜನಿಕಾಂತ್ ಹಾಗೂ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್‌ ನಟನೆಯ ಬಹುನಿರೀಕ್ಷಿತ ಸಿನಿಮಾ ಜೈಲರ್.
  • ಜೈಲರ್ ಆಡಿಯೋ ಬಿಡುಗಡೆ ಕಾರ್ಯಕ್ರಮವು ಇದೇ ತಿಂಗಳು ಜುಲೈ 28 ರಂದು ನಡೆಯಲಿದೆ.
  • ಈ ಸಿನಿಮಾ ಆಡಿಯೋ ರಿಲೀಸ್‌ ಇವೆಂಟ್‌ ವಿಕ್ಷಿಸಲು ನಿಮ್ಗೆ ಪಾಸ್‌ ಬೇಕಿದ್ದರೆ ತಕ್ಷಣ ಹೀಗೆ ಮಾಡಿ..
ಶಿವಣ್ಣ-ರಜಿನಿ ʼಜೈಲರ್ʼ ಆಡಿಯೋ ರಿಲೀಸ್‌ ಇವೆಂಟ್‌ಗೆ ʼಪಾಸ್‌ʼ ಬೇಕಾ..! ತಕ್ಷಣ ಹೀಗೆ ಮಾಡಿ title=

Jailer audio launch pass : ಮುಂದಿನ ತಿಂಗಳು 10 ರಂದು ಬಿಡುಗಡೆಯಾಗಲಿರುವ ರಜನಿಕಾಂತ್ ಅಭಿನಯದ ‘ಜೈಲರ್’ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಸ್ಟಾರ್‌ ಡೈರೆಕ್ಟರ್‌ ನೆಲ್ಸನ್ ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಾಣದ ಈ ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್‌ ಮಲಯಾಳಂ ನಟ ಮೋಹನ್‌ ಲಾಲ್‌ ನಟಿಸಿದ್ದಾರೆ.

ಜೈಲರ್ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಈ ಸಿನಿಮಾದಲ್ಲಿ ರಜನಿಕಾಂತ್, ಮಲಯಾಳಂ ನಟ ಮೋಹನ್ ಲಾಲ್, ನಟ ಶಿವರಾಜ್ ಕುಮಾರ್ ಮತ್ತು ತೆಲುಗು ನಟ ಸುನೀಲ್ ನಟಿಸಿದ್ದಾರೆ. ಅಲ್ಲದೆ, ತಮನ್ನಾ, ರಮ್ಯಾ ಕೃಷ್ಣನ್, ಪ್ರಿಯಾಂಕಾ ಮೋಹನ್, ವಸಂತ ರವಿ ಮುಂತಾದ ಸ್ಟಾರ್‌ ಕಲಾವಿದರದಂಡೇ ಈ ಚಿತ್ರದಲ್ಲಿದೆ. ಚಿತ್ರದಲ್ಲಿ ಮುತ್ತುವೇಲ್ ಪಾಂಡಿಯನ್ ಪಾತ್ರವನ್ನು ನಟ ರಜಿನಿ ನಿರ್ವಹಿಸಲಿದ್ದಾರೆ.

ಇದನ್ನೂ ಓದಿ: 'ಬೇಬಿ' ವೈಷ್ಣವಿಗೆ ಬಿಗ್‌ ಆಫರ್‌..! ಪ್ರಸಿದ್ಧ ಸಿನಿ ನಿರ್ಮಾಣ ಕಂಪನಿಯೊಂದಿಗೆ ಒಪ್ಪಂದ..?

ಅನಿರುದ್ಧ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಚಿತ್ರದ ಎರಡು ಹಾಡುಗಳು ಬಿಡುಗಡೆಯಾ, ಸೂಪರ್‌ ಹಿಟ್ ಆಗಿವೆ. 'ಕವಾಲಾ' ಹಾಡಂತೂ ಸಖತ್‌ ವೈರಲ್‌ ಆಗುತ್ತಿದೆ. ಈ ಹಾಡಿನಲ್ಲಿ ತಮನ್ನಾ  ನೃತ್ಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ಹಾಡಿನ ವಿಡಿಯೋ ರೀಲ್‌ಗಳು ವೈರಲ್‌ ಆಗುತ್ತಿವೆ.

ಇದಾದ ನಂತರ ಎರಡನೇ ಹಾಡು 'ಹುಕುಂ' ಅನ್ನು ವಿಶೇಷವಾಗಿ ರಜನಿ ಅಭಿಮಾನಿಗಳಿಗಾಗಿ ರಚಿಸಲಾಗಿದೆ. ಪ್ರತಿ ಸಾಲಿನಲ್ಲೂ ರಜನಿಯನ್ನು ಹಾಡಿ ಹೊಗಳಲಾಗಿದೆ. ಈ ಹಾಡು ಸದ್ಯ ಯೂತ್ ಹಿಟ್ ಲಿಸ್ಟ್ ನಲ್ಲಿ ಅಗ್ರಸ್ಥಾನದಲ್ಲಿದೆ. ಹುಕುಂ ಹಾಡನ್ನು ಸೂಪರ್ ಸುಪ್ಪು ಬರೆದಿದ್ದಾರೆ. ಈ ಎರಡೂ ಹಾಡುಗಳು ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿವೆ. 

ಇದನ್ನೂ ಓದಿ: ಆಸ್ಪತ್ರೆಯ ಬೆಡ್‌ ಮೇಲೆ ಕದಲದ ಸ್ಥಿತಿಯಲ್ಲಿ ಮೌನಿ ರಾಯ್..! 'ಬ್ರಹ್ಮಾಸ್ತ್ರ' ಸುಂದರಿಗೆ ಏನಾಯ್ತು..?

ಇನ್ನು ಜುಲೈ 28ರಂದು ಸಂಜೆ ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಜೈಲರ್‌ ಸಿನಿಮಾದ ಆಡಿಯೋ ರಿಲೀಸ್‌ ಇವೆಂಟ್‌ ನಡೆಯಲಿದೆ. ಈ ಸಮಾರಂಭಕ್ಕೆ ಅಭಿಮಾನಿಗಳಿಗೂ ಅವಕಾಶ ಕಲ್ಪಿಸಲಾಗಿದೆ. ಆ ನಿಟ್ಟಿನಲ್ಲಿ ಸನ್ ಪಿಕ್ಚರ್ಸ್ ಅಭಿಮಾನಿಗಳಿಗೆ 1000 ಉಚಿತ ಪಾಸ್ ನೀಡುವುದಾಗಿ ಟ್ವಿಟರ್ ನಲ್ಲಿ ಪ್ರಕಟಿಸಿದೆ. 1000 ಉಚಿತ ಪಾಸ್‌ಗಳು ಸಿದ್ಧವಾಗಿವೆ... ನೀವೂ ಸಿದ್ಧರಾಗಿ... ಭೇಟಿಯಾಗೋಣ. ನಾಳೆ (ಜುಲೈ 24) ಮಧ್ಯಾಹ್ನ 1 ಗಂಟೆಯಿಂದ ಪಾಸ್ ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ವೆಬ್ ಸೈಟ್ ಲಿಂಕ್ ನೀಡಲಾಗಿದೆ. ಇದರಲ್ಲಿ ನೋಂದಾಯಿಸಿ 500 ಜನರಿಗೆ ಈ ಪಾಸ್ ನೀಡಲಾಗುವುದು, ಪ್ರತಿ ವ್ಯಕ್ತಿಗೆ 2 ಪಾಸ್ ಎಂದು ತಿಳಿಸಿದೆ. 

ಜೈಲರ್ ಸಂಗೀತ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಯಸುವವರು ನಾಳೆ ಮಧ್ಯಾಹ್ನ 1 ಗಂಟೆಗೆ ಸನ್ ಪಿಕ್ಚರ್ಸ್ ಒದಗಿಸುವ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಪಾಸ್‌ಗಳನ್ನು ಕಾಯ್ದಿರಿಸಬಹುದಾಗಿದೆ. ಅಲ್ಲದೆ ಈ ಕಾರ್ಯಕ್ರಮವನ್ನು ಸನ್ ಟಿವಿಯಲ್ಲಿ ನೇರ ಪ್ರಸಾರವಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News