ನವದೆಹಲಿ: ನಾಮಪತ್ರ ಸಲ್ಲಿಸುವ ಒಂದು ದಿನ ಮುಂಚೆ ಪ್ರಧಾನಿ ನರೇಂದ್ರ ಮೋದಿ ಗುರುವಾರದಂದು ವಾರಣಾಸಿಯಲ್ಲಿ ಬೃಹತ್ ರೋಡ್ ಶೋ ನಡೆಸಿದರು.
Live from Kashi...Grateful for the warmth and affection! https://t.co/792e4aX6Sa
— Chowkidar Narendra Modi (@narendramodi) April 25, 2019
ಪ್ರಧಾನಿ ಮೋದಿ ಬನಾರಸ್ ಹಿಂದು ವಿಶ್ವವಿದ್ಯಾನಿಲಯದ ಗೇಟ್ ನಲ್ಲಿರುವ ಪಂಡಿತ್ ಮದನ್ ಮೋಹನ್ ಮಾಳವೀಯ ಅವರ ಪ್ರತಿಮೆಗ ಮಾಲಾರ್ಪಣೆ ಮಾಡುವ ಮೂಲಕ ರೋಡ್ ಶೋ ಗೆ ಚಾಲನೆ ನೀಡಿದರು. ರೋಡ್ ಶೋ ಲಂಕಾದ ಪ್ರದೇಶದಿಂದ ಗೋಶೋಲಿಯ ಮೂಲಕ ದಶಾಶ್ವಮೇಧ ಘಾಟ್ ವರೆಗೆ ಆರು ಕಿಲೋಮೀಟರ್ ಗಳಷ್ಟು ವಿಸ್ತರಿಸಿತ್ತು.
Visuals from Prime Minister Narendra Modi's roadshow in Varanasi. #LokSabhaElections2019 pic.twitter.com/ZJfQUh4yVe
— ANI UP (@ANINewsUP) April 25, 2019
ಪ್ರಧಾನಿ ಮೋದಿಯವರ ಈ ರೋಡ್ ಶೋ ಕಾರ್ಯಕರ್ಮದಲ್ಲಿ ಬಿಜೆಪಿ ಪ್ರಮುಖ ನಾಯಕರು ಉಪಸ್ಥಿತರಿದ್ದರು.ಇದರಲ್ಲಿ ಪ್ರಮುಖವಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಕೇಂದ್ರ ಮಂತ್ರಿ ಜೆಪಿ ನಡ್ದಾ ಹಾಗೂ ಇತರ ಎನ್ಡಿಎ ನಾಯಕರು ಭಾಗವಹಿಸಿದ್ದರು. ಲಂಕಾದಿಂದ ಆರಂಭವಾಗಿರುವ ಮೋದಿ ಅವರ ರೋಡ್ ಶೋ ಅಸ್ಸಿ, ಭದಿನಿ, ಸೋನಾರ್ಪುರಾ, ಮದನ್ಪುರಾ, ಜಂಗಂಬಾಡಿ ಮತ್ತು ಗೊಡೋವಿಲಿಯ ಮೂಲಕ ದಾಶವಾಮೇಧ ಘಾಟ್ ಗೆ ತಲುಪಲಿದೆ. ಅಲ್ಲಿ ಅವರು ಗಂಗಾ ಆರತಿಯಲ್ಲಿ ಪಾಲ್ಗೊಳ್ಳುತ್ತಾರೆ.ಈಗ ರೋಡ್ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಜನರ ಪ್ರೀತಿಗೆ ಅಭಾರಿ ಎಂದು ಟ್ವೀಟ್ ಮಾಡಿದ್ದಾರೆ.
Visuals from Prime Minister Narendra Modi's roadshow in Varanasi. #LokSabhaElections2019 pic.twitter.com/YSAjYbWHx8
— ANI UP (@ANINewsUP) April 25, 2019
ಇತ್ತ ಪ್ರಧಾನಿ ಮೋದಿ ವಾರಣಾಸಿಯಲ್ಲಿ ರೋಡ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಕಾಂಗ್ರೆಸ್ ಪಕ್ಷವು ವಾರಾಣಸಿಯಲ್ಲಿ ತನ್ನ ಅಭ್ಯರ್ಥಿ ಕುರಿತಾಗಿ ಇದ್ದ ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯಿತು. ಇಂದು ಕಾಂಗ್ರೆಸ್ ಪಕ್ಷ ಅಜಯ ರೈಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ವಾರಣಾಸಿಯಲ್ಲಿ ಕಣಕ್ಕೆ ಇಳಿಸಿದೆ.ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮೋದಿ ವಿರುದ್ಧ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ ಗುಲ್ಲೆದ್ದಿತ್ತು. ಇದಕ್ಕೆ ಪೂರಕವಾಗಿ ಪಕ್ಷ ಸ್ಪರ್ಧಿಸಲು ಹೇಳಿದರೆ ತಾವು ಖಂಡಿತವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಪ್ರಿಯಾಂಕಾ ಗಾಂಧಿ ಹೇಳಿದ್ದರು.