ನವದೆಹಲಿ: ಬುಧವಾರ ರಾತ್ರಿ ಸುಮಾರು 1.4 ಲಕ್ಷ ಲೀಟರ್ ಕುಡಿಯುವ ನೀರನ್ನು ವಾರಣಾಸಿ ರಸ್ತೆಗಳನ್ನು ತೊಳೆಯಲು ಬಳಸಲಾಗಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಈ ವರದಿಯಲ್ಲಿ ವಾರಣಾಸಿಯಲ್ಲಿ ಪ್ರತಿಶತ 30 ರಷ್ಟು ಜನರಿಗೆ ಪೈಪ್ ನೀರು ಸಿಗುವುದಿಲ್ಲ ಎನ್ನಲಾಗಿದೆ.ಆದರೆ ಪ್ರಧಾನಿ ಸ್ವಾಗತಕ್ಕಾಗಿ ನಗರದ ರಸ್ತೆಗಳನ್ನು ಸ್ವಚ್ಛಗೊಳಿಸಲು ಭಾರಿ ಪ್ರಮಾಣದ ನೀರನ್ನು ಬಳಸಲಾಗಿದೆ ಎನ್ನಲಾಗಿದೆ.ಈ ಕುರಿತಾಗಿ ಪ್ರತಿಕ್ರಿಯಿಸಿರುವ ಸ್ಥಳೀಯ ಅಧಿಕಾರಿಯೊಬ್ಬರು "ನಮಗೆ ಪ್ರಧಾನಿ ಸ್ವಾಗತಕ್ಕಾಗಿ ರಸ್ತೆಗಳನ್ನು ಸ್ವಚ್ಛಗೊಳಿಸಲು ನಿರ್ದೇಶನವಿತ್ತು "ಎಂದರು.
ವಾರಣಾಸಿಯ ಮುನ್ಸಿಪಲ್ ಕಾರ್ಪೋರೇಶನ್ ನ 40 ಟ್ಯಾಂಕರ್ಗಳು ಮತ್ತು 400 ಕಾರ್ಮಿಕರನ್ನು ಈ ಕಾರ್ಯಕ್ಕಾಗಿ ನಿಯೋಜಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಸಾಮಾನ್ಯವಾಗಿ ಇಲ್ಲಿ ರಸ್ತೆಗಳನ್ನು ಹಬ್ಬದ ಸಂದರ್ಭದಲ್ಲಿ ಮಾತ್ರ ತೊಳೆಯಲಾಗುತ್ತದೆ ಎನ್ನಲಾಗಿದೆ.ವಾರಣಾಸಿ ಅಂತರರಾಷ್ಟ್ರೀಯ ಪ್ರವಾಸೋದ್ಯಮ ತಾಣವಾಗಿದ್ದರೂ, ಪುರಸಭಾ ನಿಗಮದ ವರದಿ ಪ್ರಕಾರ ಕೇವಲ ಶೇಕಡಾ 70 ರಷ್ಟು ಮನೆಗಳಿಗೆ ನೀರಿನ ಕೊಳವೆಗಳಿವೆ.ಉಳಿದವು ಬೋರ್-ಬಾವಿಗಳ ಮೇಲೆ ಅವಲಂಬಿತವಾಗಿದೆ.