ನವದೆಹಲಿ: ದೆಹಲಿಯ ಮಾಳವೀಯಾ ನಗರದಲ್ಲಿ ನಡೆದ ಕೊಲೆ ಘಟನೆ ಸಂಚಲನ ಮೂಡಿಸಿದೆ. ಬಾಲಕಿಯ ಮೇಲೆ ರಾಡ್ನಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ. ಘಟನೆ ಬಳಿಕ ದಾಳಿಕೋರ ಸ್ಥಳದಿಂದ ಪರಾರಿಯಾಗಿದ್ದಾನೆ. ದೆಹಲಿ ಪೊಲೀಸರಿಗೆ ಬಂದ ಕರೆಯ ಪ್ರಕಾರ, 25 ವರ್ಷದ ಆರೋಪಿಯು ದೆಹಲಿಯ ಅರಬಿಂದೋ ಕಾಲೇಜಿನ ಬಳಿ ರಾಡ್ನಿಂದ ಬಾಲಕಿಯ ಮೇಲೆ ಹಲ್ಲೆ ನಡೆಸಿದ್ದು, ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.
ಬಾಲಕಿಯ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ!
ಶುಕ್ರವಾರ ಮಧ್ಯಾಹ್ನ 12.08ರ ಸುಮಾರಿಗೆ ಅರಬಿಂದೋ ಕಾಲೇಜು ಬಳಿ ಬಾಲಕಿಯೊಬ್ಬಳನ್ನು ಕೊಂದು ಆರೋಪಿ ಎಸ್ಕೇಪ್ ಆಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಶವದ ಬಳಿ ಕಬ್ಬಿಣದ ರಾಡ್ ಬಿದ್ದಿದೆ. ಕೊಲೆಯಾದ ಹುಡುಗಿಯ ವಯಸ್ಸು ಸುಮಾರು 25 ವರ್ಷ ಎಂದು ಹೇಳಲಾಗಿದೆ. ಬಾಲಕಿಯ ಮೃತದೇಹ ಉದ್ಯಾನವನದ ನೆಲದ ಮೇಲೆ ಬಿದ್ದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ವಂದೇ ಭಾರತ್’ನಲ್ಲಿ ನೀಡಿದ ಆಹಾರದಲ್ಲಿ ಜಿರಳೆ ಪತ್ತೆ! IRCTC ಕ್ಷಮೆ-ಭಾರೀ ದಂಡ ತೆತ್ತ ಆಹಾರ ಪೂರೈಕೆದಾರ
24 ಗಂಟೆಯೊಳಗೆ 2ನೇ ಕೊಲೆ ಪ್ರಕರಣ
24 ಗಂಟೆಗಳಲ್ಲಿ ಇದು ದೆಹಲಿಯಲ್ಲಿ ನಡೆದ 2ನೇ ಕೊಲೆ ಘಟನೆಯಾಗಿದೆ. ದೆಹಲಿಯ ದಾಬ್ರಿ ಪ್ರದೇಶದಲ್ಲಿ ಗುರುವಾರ ರಾತ್ರಿ 8.45ರ ಸುಮಾರಿಗೆ ಬಿಲ್ಡರ್ ಪತ್ನಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಮೃತ ಮಹಿಳೆಯನ್ನು 40 ವರ್ಷದ ರೇಣು ಎಂದು ಗುರುತಿಸಲಾಗಿದೆ. ದಾಳಿಕೋರರು ಬಿಲ್ಡರ್ ಮನೆಯ ಬಳಿಯೇ ಗುಂಡು ಹಾರಿಸಿ ಆತನ ಪತ್ನಿಯನ್ನು ಹತ್ಯೆ ಮಾಡಿದ್ದಾರೆ.
ಪಾಯಿಂಟ್ ಬ್ಲಾಂಕ್ ರೇಂಜ್ನಿಂದ ಗುಂಡು ಹಾರಿಸಿದ ಆರೋಪಿಗಳು!
ದಾಳಿಕೋರರು ರೇಣು ಗೋಯಲ್ ಅವರನ್ನು ಕೊಲ್ಲಲು ಕಾಲ್ನಡಿಗೆಯಲ್ಲಿ ಸ್ಥಳಕ್ಕೆ ಬಂದಿದ್ದರು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪಾಯಿಂಟ್ ಬ್ಲಾಂಕ್ ರೇಂಜ್ನಿಂದ ರೇಣು ಅವರ ಮೇಲೆ ಗುಂಡು ಹಾರಿಸಿದ್ದಾರೆ. ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: Snake Video: ಡ್ರ್ಯಾಗನ್ ಸ್ನೇಕ್.. ಮೈತುಂಬಾ ಪಾಚಿ ಇರುವ ವಿಚಿತ್ರ ಹಾವಿನ ವಿಡಿಯೋ ವೈರಲ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.