ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಪ್ರತಿ ಮನೆಯಲ್ಲಿಯೂ ಕೇಳಿ ಬರುತ್ತಿದೆ. ಅದರಲ್ಲೂ ವಿಶೇಷವಾಗಿ ಯುವ ಜನರು ಬೋಳು ತಲೆ ಸಮಸ್ಯೆ ಎದುರಿಸುತ್ತಿದ್ದಾರೆ. ಧೂಳು, ಮಣ್ಣು, ಸೂರ್ಯನ ಬೆಳಕು ಮತ್ತು ಮಾಲಿನ್ಯದ ಕಾರಣದಿಂದ ಕೂದಲು ಉದರುವ ಸಮಸ್ಯೆ ಎದುರಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಕೂದಲು ದುರ್ಬಲಗೊಂಡು ಉದುರಲು ಪ್ರಾರಂಭಿಸುತ್ತದೆ. ಆದರೆ, ಕೆಲವೊಮ್ಮೆ ನಾವು ಆಹಾರದ ವಿಷಯದಲ್ಲಿ ಮಾಡುವ ತಪ್ಪುಗಳಿಂದ ಕೂಡಾ ಕೂದಲು ಉದುರುತ್ತದೆ.
ಪ್ರೋಟೀನ್ ಕೊರತೆ ಕೂದಲು ಉದುರುವುದಕ್ಕೆ ಕಾರಣ :
ದೇಹದಲ್ಲಿ ಪ್ರೋಟೀನ್ ಕೊರತೆಯಿದ್ದರೆ, ಕೂದಲು ದುರ್ಬಲಗೊಳ್ಳುತ್ತದೆ ಮಾತ್ರವಲ್ಲ ವೇಗವಾಗಿ ಉದುರುತ್ತದೆ. ಪೋಷಕಾಂಶಗಳ ಮೂಲಕ ಕೂದಲಿಗೆ ಆಂತರಿಕ ಪೋಷಣೆಯನ್ನು ನೀಡಿದರೆ ಕೂದಲು ಉದುರುವಿಕೆಯ ಸಮಸ್ಯೆಯನ್ನು ತೊಡೆದುಹಾಕಬಹುದು.
ಇದನ್ನೂ ಓದಿ : ಕೆಂಪು ಮೆಣಸಿನಕಾಯಿಯ ಅದ್ಭುತ ಆರೋಗ್ಯ ಪ್ರಯೋಜನಗಳು..! ಕ್ಯಾನ್ಸರ್ ಮತ್ತು ಹೃದಯಕ್ಕೆ ಒಳ್ಳೆಯದು
ಕೂದಲಿಗೆ ಪ್ರೋಟೀನ್ ಏಕೆ ಮುಖ್ಯ? :
ನಾವು ಸಾಮಾನ್ಯವಾಗಿ ದೇಹ, ಸ್ನಾಯುಗಳು ಮತ್ತು ಮೂಳೆಗಳ ಆರೋಗ್ಯಕ್ಕಾಗಿ ಪ್ರೋಟೀನ್ ಭರಿತ ಆಹಾರವನ್ನು ಸೇವಿಸುತ್ತೇವೆ. ಆದರೆ, ಈ ಪೋಷಕಾಂಶದ ಕೊರತೆಯು ನಮ್ಮ ಕೂದಲಿನ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದು ಬಹುತೇಕರಿಗೆ ತಿಳಿದಿಲ್ಲ.
ಪ್ರೋಟೀನ್ ಕೊರತೆಯ ಲಕ್ಷಣಗಳು :
ಸರಿಯಾದ ಸಮಯದಲ್ಲಿ ಪ್ರೋಟೀನ್ ಕೊರತೆಯ ಲಕ್ಷಣಗಳನ್ನು ಗುರುತಿಸಿದರೆ, ಅನೇಕ ಸಮಸ್ಯೆಗಳನ್ನು ತಪ್ಪಿಸಬಹುದು. ಸಾಮಾನ್ಯವಾಗಿ, ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಕೂದಲು ಇದ್ದಕ್ಕಿದ್ದಂತೆ ಬೆಳೆಯುವುದನ್ನು ನಿಲ್ಲಿಸುತ್ತದೆ. ಉಗುರುಗಳು ಸಹ ದುರ್ಬಲವಾಗುತ್ತವೆ ಮತ್ತು ಸುಲಭವಾಗಿ ಮುರಿಯುತ್ತವೆ. ಪ್ರೋಟೀನ್ ಕೊರತೆಯು ನಮ್ಮ ರೋಗ ನಿರೋಧಕ ಶಕ್ತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಜೊತೆಗೆ ಇದು ದೇಹದಲ್ಲಿ ನೋವನ್ನು ಉಂಟುಮಾಡುತ್ತದೆ. ದೇಹದಲ್ಲಿ ಪ್ರೋಟೀನ್ ಕೊರತೆಯಾಗಿದೆ ಎನ್ನುವುದಕ್ಕೆ ದೇಹ ನೀಡುವ ಈ ಸಂಕೇತಗಳನ್ನು ಗುರುತಿಸಿ ಪ್ರೋಟೀನ್ ಭರಿತ ಆಹಾರದ ಸೇವನೆಯನ್ನು ಹೆಚ್ಚಿಸಿ.
ಇದನ್ನೂ ಓದಿ : ಮಧುಮೇಹಿಗಳ ಚರ್ಮಕ್ಕೆ ಬೆಂಡೆಕಾಯಿ ಪ್ರಯೋಜನಕಾರಿ..! ಹೇಗೆ ಗೊತ್ತಾ..?
ಪ್ರೋಟೀನ್ ಪಡೆಯಲು ಈ ವಸ್ತುಗಳನ್ನು ಸೇವಿಸಿ :
1. ಬೇಳೆಕಾಳುಗಳು
2. ಮೊಟ್ಟೆ
3. ಒಣ ಹಣ್ಣುಗಳು
4. ಕಡಲೆಕಾಯಿ
5. ಮೀನು
6. ಹಾಲು
7. ಸೋಯಾಬೀನ್
8. ಪನೀರ್
9. ಚಿಕನ್
10. ಮಾಂಸ
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.