ಮಳೆಗಾಲದಲ್ಲಿ ಸುಕ್ಕುಗಟ್ಟಿದ ಕೂದಲಿನಿಂದ ಪರಿಹಾರಕ್ಕಾಗಿ ಇಲ್ಲಿದೆ 5 ಟಿಪ್ಸ್

Monsoon Hair Care: ಮಳೆಗಾಲದಲ್ಲಿ ಕೂದಲು ಗಾಳಿಯಿಂದ ಹೆಚ್ಚಿನ ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದರಿಂದಾಗಿ, ಕೂದಲು ಜಿಗುಟಾಗುವುದರ ಜೊತೆಗೆ ಸುಕ್ಕುಗಟ್ಟುವುದು ಕೂಡ ಸಾಮಾನ್ಯವಾಗಿರುತ್ತದೆ. ನೀವು ಈ ಋತುಮಾನದಲ್ಲಿ ಸುಕ್ಕುಗಟ್ಟಿದ ಕೂದಲಿನ ಸಮಸ್ಯೆಯಿಂದ ಪರಿಹಾರ ಪಡೆಯಲು ಬಯಸಿದರೆ ಅದಕ್ಕಾಗಿ ಇಲ್ಲಿವೆ ಟಾಪ್ 5 ಸಲಹೆಗಳು. 

Written by - Yashaswini V | Last Updated : Aug 18, 2023, 11:45 AM IST
  • ಕೂದಲು ಸುಕ್ಕುಗಟ್ಟುವಿಕೆ ಸಮಸ್ಯೆಯಿಂದ ಪರಿಹಾರ ಪಡೆಯಲು ಸಾಮಾನ್ಯವಾಗಿ ನಮ್ಮಲ್ಲಿ ಹೆಚ್ಚಿನವರು ಬಿಸಿ ನೀರಿನಿಂದ ತಲೆ ಸ್ನಾನ ಮಾಡುತ್ತಾರೆ.
  • ಆದರೆ, ಅತಿಯಾದ ಬಿಸಿ ನೀರನ್ನು ಬಳಸಿ ಹೇರ್ ವಾಶ್ ಮಾಡುವುದರಿಂದ ಕೂದಲು ಹಾನಿಯಾಗುತ್ತದೆ.
  • ಜೊತೆಗೆ ತಲೆಹೊಟ್ಟಿನ ಸಮಸ್ಯೆಯೂ ಹೆಚ್ಚಾಗುತ್ತದೆ.
ಮಳೆಗಾಲದಲ್ಲಿ ಸುಕ್ಕುಗಟ್ಟಿದ ಕೂದಲಿನಿಂದ ಪರಿಹಾರಕ್ಕಾಗಿ ಇಲ್ಲಿದೆ 5 ಟಿಪ್ಸ್  title=

Monsoon Hair Care: ಮಾನ್ಸೂನ್‌ನಲ್ಲಿನ ವಾತಾವರಣ ಮನಸ್ಸಿಗೆ ಮುದ ಎನಿಸಿದರೂ ಕೂಡ ವಾತಾವರಣದಲ್ಲಿ ಬದಲಾವಣೆಯಿಂದಾಗಿ ಕೂದಲಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮಳೆಗಾಲದಲ್ಲಿ ಕೂದಲು ಗಾಳಿಯಿಂದ ಹೆಚ್ಚಿನ ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದರಿಂದಾಗಿ, ಕೂದಲು ಜಿಗುಟಾಗುವುದರ ಜೊತೆಗೆ ಸುಕ್ಕುಗಟ್ಟುವುದು ಕೂಡ ಸಾಮಾನ್ಯವಾಗಿರುತ್ತದೆ. 

ಕೂದಲು ಸುಕ್ಕುಗಟ್ಟುವಿಕೆ ಸಮಸ್ಯೆಯಿಂದ ಪರಿಹಾರ ಪಡೆಯಲು ಸಾಮಾನ್ಯವಾಗಿ ನಮ್ಮಲ್ಲಿ ಹೆಚ್ಚಿನವರು ಬಿಸಿ ನೀರಿನಿಂದ ತಲೆ ಸ್ನಾನ ಮಾಡುತ್ತಾರೆ. ಆದರೆ, ಅತಿಯಾದ ಬಿಸಿ ನೀರನ್ನು ಬಳಸಿ ಹೇರ್ ವಾಶ್ ಮಾಡುವುದರಿಂದ ಕೂದಲು ಹಾನಿಯಾಗುವುದರ ಜೊತೆಗೆ ತಲೆಹೊಟ್ಟಿನ ಸಮಸ್ಯೆಯೂ ಹೆಚ್ಚಾಗುತ್ತದೆ. ನೀವು ಈ ಋತುಮಾನದಲ್ಲಿ ಸುಕ್ಕುಗಟ್ಟಿದ ಕೂದಲಿನ ಸಮಸ್ಯೆಯಿಂದ ಪರಿಹಾರ ಪಡೆಯಲು ಬಯಸಿದರೆ ಅದಕ್ಕಾಗಿ ಇಲ್ಲಿವೆ ಟಾಪ್ 5 ಸಲಹೆಗಳು.  

ಮಾನ್ಸೂನ್‌ನಲ್ಲಿ ಸುಕ್ಕುಗಟ್ಟಿದ ಕೂದಲಿನಿಂದ ಸುಲಭ ಪರಿಹಾರಕ್ಕಾಗಿ ಇವುಗಳನ್ನು ಟ್ರೈ ಮಾಡಿ:- 
* ಉಗುರು ಬೆಚ್ಚಗಿನ ನೀರು: 

ಬಿಸಿ ನೀರು ಬಳಸುವುದರಿಂದ ದೀರ್ಘಾವದಿಯಲ್ಲಿ ಅದು ಕೂದಲು ಉದುರುವಿಕೆಗೆ ಕಾರಣವಾಗಬಹುದು. ಆದರೆ, ತಲೆಗೆ ಸ್ನಾನ ಮಾಡುವಾಗ ಉಗುರು ಬೆಚ್ಚಗಿನ ನೀರನ್ನು ಬಳಸಿ. ಇದರಿಂದ ಕೂದಲು ನೈಸರ್ಗಿಕ ತೈಲವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಸುಕ್ಕುಗಟ್ಟಿದ ಕೂದಲಿನ ಸಮಸ್ಯೆಯಿಂದಲೂ ಪರಿಹಾರ ದೊರೆಯುತ್ತದೆ. 

ಇದನ್ನೂ ಓದಿ- ಬೊಕ್ಕ ತಲೆ ಸಮಸ್ಯೆ ನಿವಾರಣೆಗೆ ತುಂಬಾನೇ ಪವರ್ಪುಲ್ ಈ ಜ್ಯೂಸ್, ಒಮ್ಮೆ ಟ್ರೈ ಮಾಡಿ ನೋಡಿ!

* ಕಂಡಿಷನರ್:
ತಲೆಗೆ ಸ್ನಾನ ಮಾಡಿದ ಬಳಿಕ ತಪ್ಪದೆ ಕಂಡಿಷನರ್ ಬಳಸಿ. ಶಾಂಪೂ ಮಾಡಿದ ಬಳಿಕ ಕೂದಲಿಗೆ ಕಂಡಿಷನರ್ ಬಳಸುವುದರಿಂದ ಕೂದಲು ಮೃದುವಾಗಿ ಫ್ರೇಶ್ ಆಗಿರಲು ಪ್ರಯೋಜನಕಾರಿ ಆಗಿದೆ. 

* ಎಣ್ಣೆ: 
ಇತ್ತೀಚಿನ ಬದಲಾದ ಜೀವನ ಶೈಲಿಯಲ್ಲಿ ಕೂದಲಿಗೆ ಸರಿಯಾಗಿ ಎಣ್ಣೆ ಹಚ್ಚದಿರುವುದು ಕೂಡ ಕೂದಲು ಒರಟಾಗಲು ಮುಖ್ಯ ಕಾರಣವಾಗಿದೆ. ಒರಟಾದ ಕೂದಲು ಹಾಗೂ ಕೂದಲು ಸುಕ್ಕುಗಟ್ಟುವಿಕೆಯನ್ನು ತಪ್ಪಿಸಲು ನಿಯಮಿತವಾಗಿ ಕೂದಲಿಗೆ ಕೊಬ್ಬರಿ ಎಣ್ಣೆ, ಇಲ್ಲವೇ ಹರಳೆಣ್ಣೆಯನ್ನು ಅನ್ವಯಿಸಿ. 

* ಅತಿಯಾದ ಹೇರ್ ವಾಶ್ ತಪ್ಪಿಸಿ: 
ನೀವು ಪ್ರತಿ ದಿನ ಇಲ್ಲ ವಾರದಲ್ಲಿ ಹಲವು ಬಾರಿ ತಲೆಗೆ ಸ್ನಾನ ಮಾಡುವುದರಿಂದಲೂ ಕೂದಲಿನಲಿರುವ ನೈಸರ್ಗಿಕ ಸಾರಭೂತ ತೈಲ ನಾಶವಾಗುತ್ತದೆ. ಇದು ಕೂಡ ಕೂದಲು ಜಿಗುಟಾಗಲು ಪ್ರಮುಖ ಕಾರಣವಾಗಿದೆ. ಇದನ್ನು ತಪ್ಪಿಸಲು ಅತಿಯಾದ ಹೇರ್ ವಾಶ್ ಅನ್ನು ತಪ್ಪಿಸಿ. 

ಇದನ್ನೂ ಓದಿ- White Hair: ಸೋಂಪು ಮಿಶ್ರಣದಿಂದ 7 ದಿನಗಳಲ್ಲಿ ಬಿಳಿ ಕೂದಲು ಕಪ್ಪಾಗುವುದು ಖಚಿತ!

* ರಕ್ಷಣಾತ್ಮಕ ಕೇಶವಿನ್ಯಾಸ:
ನಿಮ್ಮ ಕೂದಲನ್ನು ಮಳೆ, ತೇವಾಂಶಗಳಿಂದ ರಕ್ಷಿಸಲು ರಕ್ಷಣಾತ್ಮಕ ಕೇಶವಿನ್ಯಾಸವು ನಿಮಗೆ ಉತ್ತಮ ಆಯ್ಕೆಯಾಗಿದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News