Trending Video: ಈ ಕುದುರೆ ಸಾಕ್ಷಾತ್ ಸ್ವರ್ಗದಿಂದ ಇಳಿದು ಬಂದಿದೆಯಂತೆ... ವಿಡಿಯೋ ನೋಡಿ!

Viral Video: ಈ ಕುದುರೆ ಚಿನ್ನದ ಬಣ್ಣವನ್ನು ಹೊಂದಿದೆ ಮತ್ತು ಇದು ನೋಡಲು ತುಂಬಾ ಸುಂದರವಾಗಿ ಕಾಣುತ್ತದೆ. ಅದರ ದೇಹದ ಹೊಳಪು ದೂರದಿಂದ ನೋಡಿದರೆ ಸಾಕು ಕಣ್ಣು ಕುಕ್ಕಿಸುವಂತಿದೆ. ಈ ತಳಿಯ ಕುದುರೆಗಳು ಅರೇಬಿಯನ್ ಕುದುರೆಗಳಿಗಿಂತ ಹಳೆಯವು ಎಂದು ಹೇಳಲಾಗುತ್ತದೆ. ಇದರೊಂದಿಗೆ, ಇದು ಸ್ವರ್ಗದಿಂದ ಇಳಿದು ಬಂದ ಕಥೆಯೂ ಆಸಕ್ತಿದಾಯಕವಾಗಿದೆ.  

Written by - Nitin Tabib | Last Updated : Aug 25, 2023, 07:41 PM IST
  • ಆದರೂ ಇದೀಗ ಅವುಗಳ ಸಂಖ್ಯೆ ಸಂಖ್ಯೆ ಕ್ಷೀಣಿಸುತ್ತಿದೆ. ಒಂದು ವರದಿಯ ಪ್ರಕಾರ ಪ್ರಸ್ತುತ ವಿಶ್ವದಲ್ಲಿ ಸುಮಾರು 7000 ತುರ್ಕಮೆನ್ ಕುದುರೆಗಳಿವೆ.
  • ಅಖಲ್-ಟೆಕೆ ತುರ್ಕಮೆನಿಸ್ತಾನದ ರಾಷ್ಟ್ರೀಯ ಪ್ರಾಣಿಯೂ ಹೌದು. ಅನೇಕ ಜನರು ಅದನ್ನು ಅಲ್ಲಿ ಇರಿಸುತ್ತಾರೆ.
  • ಈ ಕುದುರೆಯ ತಳಿಶಾಸ್ತ್ರದಿಂದಾಗಿ, ಅದರ ಚರ್ಮವು ಹೊಳಪಿನಿಂದ ಬೆಳಕನ್ನು ಪ್ರತಿಬಿಂಬಿಸುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

Trending Photos

Trending Video: ಈ ಕುದುರೆ ಸಾಕ್ಷಾತ್ ಸ್ವರ್ಗದಿಂದ ಇಳಿದು ಬಂದಿದೆಯಂತೆ... ವಿಡಿಯೋ ನೋಡಿ! title=

ನವದೆಹಲಿ: ಪ್ರಾಣಿಯೊಂದು ಸ್ವರ್ಗದಿಂದ ಇಳಿದುಬಂದಷ್ಟು ಸುಂದರವಾಗಿರಬಹುದೇ ಎಂದು ಯಾರಾದರೂ ನಿಮಗೆ ಪ್ರಶ್ನಿಸಿದರೆ? ನೀವು ಅದಕ್ಕೆ ಹೌದು ಎಂದು ಇದೀಗ ಉತ್ತರಿಸಬಹುದು. ಹೌದು, ಜಗತ್ತಿನಲ್ಲಿ ಅಂತಹ ಒಂದು ತಳಿಯ ಕುದುರೆ ಇದೆ, ಈ ಕುದುರೆಯನ್ನು ವಿಶ್ವದ ಅತ್ಯಂತ ಸುಂದರವಾದ ಕುದುರೆ ಎಂದು ಕರೆಯಲಾಗುತ್ತದೆ. ಈ ಕುದುರೆ ಯಾವುದು, ಅದರ ಗುಣಗಳು ಯಾವುವು ಎಂಬುದನ್ನೂ ತಿಳಿದುಕೊಳ್ಳೋಣ ಬನ್ನಿ 

ಕುದುರೆಯ ಈ ತಳಿಯನ್ನು ಅಖಲ್-ಟೆಕೆ ಎಂದು ಕರೆಯಲಾಗುತ್ತದೆ. ಇದು ತುರ್ಕಮೆನಿಸ್ತಾನದ ಕರಕುಮ್ ಮರುಭೂಮಿಯಲ್ಲಿ ಕಂಡುಬರುತ್ತದೆ. ವಾಸ್ತವದಲ್ಲಿ, ಮಾಧ್ಯಮ ವರದಿಗಳ ಪ್ರಕಾರ, ಟೆಕೆ ಬುಡಕಟ್ಟು ಜನಾಂಗದವರು ಅಖಾಲ್ ಮರುಭೂಮಿಯಲ್ಲಿ ಸಾವಿರಾರು ವರ್ಷಗಳ ಹಿಂದೆ ಈ ತಳಿಯ ಕುದುರೆಗಳನ್ನು ಪೋಷಿಸಿದ್ದಾರೆ. ಹೀಗಾಗಿ ಈ ತಳಿಗೆ ಅವರ ಹೆಸರನ್ನೆ ಇಡಲಾಗಿದೆ. ಅಖಾಲ್-ಟೆಕೆ ವಿಶ್ವದ ಅತ್ಯಂತ ಹಳೆಯ ಕುದುರೆ ತಳಿಗಳಲ್ಲಿ ಒಂದಾಗಿದೆ. ನಾವು ಇತಿಹಾಸವನ್ನು ನೋಡುವುದಾದಎ, ಇದು 3000 ವರ್ಷಗಳ ಹಿಂದಿನದು ಎಂದು ಉಲ್ಲೇಖಿಸಲಾಗಿದೆ. ಈ ತುರ್ಕಮೆನ್ ಕುದುರೆ ಅದರ ವೇಗ, ಬುದ್ಧಿವಂತಿಕೆ ಮತ್ತು ಶಕ್ತಿಗಾಗಿ ಹೆಸರುವಾಸಿಯಾಗಿದೆ. ಅಷ್ಟೇ ಅಲ್ಲ, ಉದ್ದ ಜಿಗಿತಗಳನ್ನೂ ಹೊಡೆದರು. ಇದು ನೋಟದಲ್ಲಿ ಚಿನ್ನದಂತೆ ಕಾಣುತ್ತದೆ.

ಇದನ್ನೂ ಓದಿ-ಪಬ್ಲಿಕಲಿ ಮಹಿಳಾ ನಾಯಕಿಗೆ ಮುತ್ತುಕೊಟ್ಟು ಹೋದ ಅಪರಿಚಿತ, ವೈರಲ್ ವಿಡಿಯೋ ನೋಡಿ ನಿಮಗೂ ಶಾಕ್ ಆಗುತ್ತೆ !

ಇದನ್ನು ವಿಶ್ವದ ಅತ್ಯಂತ ಸುಂದರವಾದ ಕುದುರೆ ಎಂದು ಪರಿಗಣಿಸಲಾಗಿದೆ. ಹೀಗಾಗಿ ಇದು ಸ್ವರ್ಗದಿಂದ ಬಂದಿದೆ ಎಂಬ ಮಾತನ್ನು ಹೇಳಲಾಗುತ್ತದೆ. ಅದರ ಹೊಳಪಿನ ರಹಸ್ಯವೆಂದರೆ ಅದರ ಕೂದಲು, ಅದರ ಕೂದಲುಗಳು ನಿಜವಾಗಿಯೂ ಅಷ್ಟೊಂದು ಸುಂದರವಾಗಿವೆ. ಮಾಧ್ಯಮವೊಂದರ ವರದಿ ಪ್ರಕಾರ ಭಾರತದಲ್ಲಿ ಈ ಕುದುರೆಯ ಬೆಲೆ ಸುಮಾರು 30 ಲಕ್ಷ ರೂ.ಗಳು ಎಂದು ಅಂದಾಜಿಸಲಾಗಿದೆ. ಇದರ ತೂಕ ಸರಾಸರಿ 450-500 ಕೆಜಿ ಆಗಿರಬಹುದು. ಈ ಕುದುರೆಗಳು ತಮ್ಮ ಮಾಲೀಕರಿಗೆ ಸವಾರಿ ಮಾಡಲು ಮಾತ್ರ ಅವಕಾಶ ನೀಡುತ್ತವೆ ಎಂದು ಹೇಳಲಾಗುತ್ತದೆ. ಅವುಗಳ ನಿಷ್ಠೆಯ ಉದಾಹರಣೆಯನ್ನು ವಿಶ್ವಾದ್ಯಂತ ಸಾರಿ ಹೇಳಲಾಗುತ್ತದೆ . ಸಾಮಾನ್ಯ ಕುದುರೆಗಳಿಗೆ ಹೋಲಿಸಿದರೆ ಈ ತಳಿಯ ಕುದುರೆಗಳು ತನ್ನ ಒಡೆಯನನ್ನು ಬೇಗನೆ ಅರ್ಥಮಾಡಿಕೊಳ್ಳುತ್ತವೆ.

ಇದನ್ನೂ ಓದಿ-ಐವತ್ತು ಕೋತಿಗಳ ಮಧ್ಯೆ ಒಂದು ಚಿರತೆ ಇತ್ತು... ಮುಂದೇನಾಯ್ತು ತಿಳಿಯಲು ಈ ವೈರಲ್ ವಿಡಿಯೋ ನೋಡಿ!

ಆದರೂ ಇದೀಗ ಅವುಗಳ ಸಂಖ್ಯೆ ಸಂಖ್ಯೆ ಕ್ಷೀಣಿಸುತ್ತಿದೆ. ಒಂದು ವರದಿಯ ಪ್ರಕಾರ ಪ್ರಸ್ತುತ ವಿಶ್ವದಲ್ಲಿ  ಸುಮಾರು 7000 ತುರ್ಕಮೆನ್ ಕುದುರೆಗಳಿವೆ. ಅಖಲ್-ಟೆಕೆ ತುರ್ಕಮೆನಿಸ್ತಾನದ ರಾಷ್ಟ್ರೀಯ ಪ್ರಾಣಿಯೂ ಹೌದು. ಅನೇಕ ಜನರು ಅದನ್ನು ಅಲ್ಲಿ ಇರಿಸುತ್ತಾರೆ. ಈ ಕುದುರೆಯ ತಳಿಶಾಸ್ತ್ರದಿಂದಾಗಿ, ಅದರ ಚರ್ಮವು ಹೊಳಪಿನಿಂದ ಬೆಳಕನ್ನು ಪ್ರತಿಬಿಂಬಿಸುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ತನ್ಮೂಲಕ ಅದು ನೋಟದಲ್ಲಿ ಇಷ್ಟೊಂದು ಸುಂದರವಾಗಿ ಕಾಣುತ್ತದೆ ಎಂಬುದು ಅವರ ಅಭಿಪ್ರಾಯವಾಗಿದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News