ಪಬ್ಲಿಕಲಿ ಮಹಿಳಾ ನಾಯಕಿಗೆ ಮುತ್ತುಕೊಟ್ಟು ಹೋದ ಅಪರಿಚಿತ, ವೈರಲ್ ವಿಡಿಯೋ ನೋಡಿ ನಿಮಗೂ ಶಾಕ್ ಆಗುತ್ತೆ !

Trending Video: ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ವೈರಲ್ ಆಗಿರುವ ಈ ವಿಡಿಯೋಗೆ ಇದೀಗ ಮಹಿಳಾ ನಾಯಕಿ ಕೂಡ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.  

Written by - Nitin Tabib | Last Updated : Aug 20, 2023, 07:33 PM IST
  • ಈ ವೀಡಿಯೋ ನೋಡಿದ ಅನೇಕ ನಾಯಕರು ಬ್ರೂಕ್ಲಿನ್ ಬೆಂಬಲಕ್ಕೆ ನಿಂತಿರುವುದು ಕಂಡುಬಂದಿದೆ.
  • ಇತರರೊಂದಿಗೆ, ಸಾಮಾನ್ಯ ಜನರು ಸಹ ಮಹಿಳಾ ನಾಯಕಿಯನ್ನು ಬೆಂಬಲಿಸಿ ತಮ್ಮ ಮಾತುಗಳನ್ನು ಬರೆದಿದ್ದಾರೆ.
  • ಇದು ತಮಾಷೆಯಲ್ಲ, ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಬರೆದಿದ್ದಾರೆ,
  • ಆದರೆ ಒಬ್ಬ ಬಳಕೆದಾರರು ಮಹಿಳಾ ನಾಯಕೆಯೇ ಸುರಕ್ಷಿತವಾಗಿಲ್ಲದಿದ್ದರೆ ಇತರರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಪಬ್ಲಿಕಲಿ ಮಹಿಳಾ ನಾಯಕಿಗೆ ಮುತ್ತುಕೊಟ್ಟು ಹೋದ ಅಪರಿಚಿತ, ವೈರಲ್ ವಿಡಿಯೋ ನೋಡಿ ನಿಮಗೂ ಶಾಕ್ ಆಗುತ್ತೆ ! title=

ಅಮೆರಿಕಾ: ನೀವು ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮನ್ನು ಸಂತೋಷಪಡಿಸುವ ಹಲವಾರು ವಿಡಿಯೋಗಳನ್ನು ನೋಡಿರಬಹುದು. ನೋಡಿ ಶಾಕ್ ಗೆ ಒಳಗಾಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ಭಾರಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಮಹಿಳಾ ನಾಯಕಿಯೊಬ್ಬರು ಸಂದರ್ಶನ ನೀಡುತ್ತಿದ್ದರು. ಅಷ್ಟರಲ್ಲಿ ಅಲ್ಲಿಗೆ ಏಕಾಏಕಿ ಬರುವ ವ್ಯಕ್ತಿಯೊಬ್ಬ ಆಕೆಯ ಕೆನ್ನೆಗೆ ಮುತ್ತಿಟ್ಟು ಅವಳತ್ತ ನೋಡುತ್ತಾ ಮತ್ತು ನಗುತ್ತಾ ಮುಂದಕ್ಕೆ ಸಾಗುತ್ತಾನೆ. ಈ ವೀಡಿಯೋ ವೈರಲ್ ಆದ ಬಳಿಕ ಇದೀಗ ಜನರು ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಇಡೀ ವಿಷಯ ಏನು ಎಂಬುದನ್ನೂ ತಿಳಿದುಕೊಳ್ಳಲು ಪ್ರಯತ್ನಿಸೋಣ ಬನ್ನಿ?

ಈ ಪ್ರಕರಣವು ಅಮೆರಿಕಾದಿಂದ ಹೊರಹೊಮ್ಮಿದೆ, ಅಲ್ಲಿ ಕೌನ್ಸಿಲ್ ವುಮನ್ ಬ್ರೂಕ್ಲಿನ್ ಇನಾ ವರ್ನಿಕೋವ್ ಬ್ರೈಟನ್ ಬೀಚ್‌ನಲ್ಲಿ ಸಿಬಿಎಸ್ ನ್ಯೂಯಾರ್ಕ್‌ಗೆ ಸಂದರ್ಶನ ನೀಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಬ್ರೂಕ್ಲಿನ್ ಕೆನ್ನೆಗೆ ಮುತ್ತಿಟ್ಟ. ನಂತರ ಆತ ಬ್ರೂಕ್ಲಿನ್ ಕಡೆಗೆ ನೋಡುತ್ತಾ ಮುಂದೆ ಸಾಗುತ್ತಾನೆ. ಈ ಘಟನೆಯನ್ನು ನೋಡಿದ ವರದಿಗಾರ ಮತ್ತು ಬ್ರೂಕ್ಲಿನ್ ಇಬ್ಬರೂ ಸ್ವಲ್ಪ ಹೊತ್ತು ತಬ್ಬಿಬ್ಬಾಗಿದ್ದಾರೆ. ಆ ಕ್ಷಣದಲ್ಲಿ ಅವರಿಗೆ ಏನಾಯಿತು ಎಂಬುದೂ ಕೂಡ ಅರ್ಥವಾಗಿಲ್ಲ.

ಇದನ್ನೂ ಓದಿ-ಚಲಿಸುತ್ತಿರುವ ಬೈಕ್ ಮೇಲೆ ಎದ್ದು ನಿಂತು ಇದೇನ್ ಮಾಡ್ತಿದ್ದಾಳೆ ಈ ಹುಡುಗಿ ನೀವೇ ನೋಡಿ!

ಮಹಿಳಾ ನಾಯಕಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
ಬ್ರೂಕ್ಲಿನ್ ಅವರ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿವೆ. ಅಪರಿಚಿತನೊಬ್ಬ ಬ್ರೂಕ್ಲಿನ್‌ ಅವರನ್ನು ಮುತ್ತಿಕ್ಕಿ ಮುನ್ನಡೆದಾಗ, ಆಕೆ  ಕೋಪಗೊಂಡಂತೆ ಕಾಣಿಸಿಕೊಳ್ಳುವುದನ್ನು ನೀವು ವೀಡಿಯೊದಲ್ಲಿ ನೋಡಬಹುದು. ಒಂದೆಡೆ ಆಕೆ ಕೋಪವನ್ನು ವ್ಯಕ್ತಪಡಿಸುತಿದ್ದರೆ,  ಅಪರಿಚಿತ ವ್ಯಕ್ತಿ ಮಾತ್ರ ನಗುತ್ತಾ ಮುಂದಕ್ಕೆ ಸಾಗುತ್ತಾನೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಕಾಣಿಸಿಕೊಂಡ ನಂತರ ಜನರಿಂದ ತರಹೇವಾರಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ನನ್ನ ಸ್ಥಳೀಯ ನಿವಾಸಿಗಳಿಂದ ಈ ರೀತಿಯ ಪ್ರೀತಿಯನ್ನು ನಾನು ಬಯಸುವುದಿಲ್ಲ ಎಂದು ಬ್ರೂಕ್ಲಿನ್ ಟ್ವಿಟರ್‌ನಲ್ಲಿ ವಿಡಿಯೋಗೇ ಪ್ರತಿಕ್ರಿಯಿಸಿದ್ದಾರೆ, ಇದು ತುಂಬಾ ಭಯಾನಕ ಕ್ಷಣ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-ಐವತ್ತು ಕೋತಿಗಳ ಮಧ್ಯೆ ಒಂದು ಚಿರತೆ ಇತ್ತು... ಮುಂದೇನಾಯ್ತು ತಿಳಿಯಲು ಈ ವೈರಲ್ ವಿಡಿಯೋ ನೋಡಿ!

ವೀಡಿಯೋ ನೋಡಿದ ಜನರು ಈ ರೀತಿಯ ಕಾಮೆಂಟ್ ಮಾಡುತ್ತಿದ್ದಾರೆ
ಈ ವೀಡಿಯೋ ನೋಡಿದ ಅನೇಕ ನಾಯಕರು ಬ್ರೂಕ್ಲಿನ್ ಬೆಂಬಲಕ್ಕೆ ನಿಂತಿರುವುದು ಕಂಡುಬಂದಿದೆ. ಇತರರೊಂದಿಗೆ, ಸಾಮಾನ್ಯ ಜನರು ಸಹ ಮಹಿಳಾ ನಾಯಕಿಯನ್ನು ಬೆಂಬಲಿಸಿ ತಮ್ಮ ಮಾತುಗಳನ್ನು ಬರೆದಿದ್ದಾರೆ. ಇದು ತಮಾಷೆಯಲ್ಲ, ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಬರೆದಿದ್ದಾರೆ, ಆದರೆ ಒಬ್ಬ ಬಳಕೆದಾರರು ಮಹಿಳಾ ನಾಯಕೆಯೇ ಸುರಕ್ಷಿತವಾಗಿಲ್ಲದಿದ್ದರೆ ಇತರರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News