ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಕ್ಯಾಬಿನೆಟ್ ಸಚಿವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಶುಕ್ರವಾರ ರಾಜೀನಾಮೆ ಸಲ್ಲಿಸಿದರು.
ಇದಕ್ಕೂ ಮುನ್ನ ಸೌತ್ ಬ್ಲಾಕ್ ನಲ್ಲಿರುವ ಪ್ರಧಾನಮಂತ್ರಿ ಕಾರ್ಯಾಲಯದಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಕೊನೆಯ ಭಾಷಣ ಮಾಡಿದ ಮೋದಿ, "ನೀವೆಲ್ಲಾ ಇದುವರೆಗೂ ಅದೆಷ್ಟೋ ಪ್ರಧಾನಿಗಳನ್ನು ನೋಡಿದ್ದೀರಿ, ಸಚಿವರನ್ನು ನೋಡಿದ್ದೀರಿ, ಆದರೆ ನಿಮ್ಮನ್ನು ಪ್ರಧಾನಿಯಾಗಿ ನಾನು ಮೊದಲನೇ ಬಾರಿಗೆ ನೋಡಿದ್ದೇನೆ. ನೀವೆಂದೂ ನನ್ನನ್ನು ಏಕಾಂಗಿಯಾಗಿ ಮಾಡಲಿಲ್ಲ. ನಿಮ್ಮ ಬೆಮಬಲ, ಸಹಕಾರಕ್ಕೆ ತುಂಬಾ ಧನ್ಯವಾದಗಳು" ಎಂದು ಮೋದಿ ಹೇಳಿದರು.
"ಪ್ರಧಾನಿ ಯಶಸ್ವಿಯಾಗಿದ್ದಾರೆ ಎಂದು ಇಡೀ ದೇಶ ಮತ್ತು ಪ್ರಪಂಚವೇ ಭಾವಿಸಿವೆ. ಆದರೆ ಐದು ವರ್ಷಗಳಲ್ಲಿ ಸಾಮಾನ್ಯ ಮಾನವ ಜೀವನದಲ್ಲಿ ಭರವಸೆ ಮೂಡಿಸುವ ಮತ್ತು ಬದಲಾವಣೆ ತರುವ ಗುರಿಯೊಂದಿಗೆ ಐದು ವರ್ಷಗಳ ನೀವು ನಿಸ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಿದ್ದಿರಿ. ಆದರೆ ಈ ಎಲ್ಲಾ ಕ್ರೆಡಿಟ್ ಪ್ರಧಾನಿಗೆ ಸಿಗುತ್ತಿದೆ. ಟಿವಿ, ಪತ್ರಿಕೆಯಲ್ಲಿ ಪ್ರಧಾನಿಯೇ ಕಾಣುತ್ತಾರೆ. ಆದರೆ ಈ ಅಭಿನಂದನೆಗಳ ಹಿಂದೆ ಕೆಲಸ ಮಾಡಿರುವ ತಂಡ ಯಾರಿಗೂ ಕಾಣಿಸುವುದಿಲ್ಲ. ಯಾವುದೇ ತಂಡಗಳು ಇಲ್ಲದಿದ್ದರೆ ಮತ್ತು ಮೀಸಲಾದ ತಂಡವು ಕಾಣುವುದಿಲ್ಲ. ಎಲ್ಲಿಯವರೆಗೆ ನಿಮ್ಮ ಗುರಿ ಬಲವಾಗಿರುತ್ತದೆಯೋ, ಅಲ್ಲಿಯವರೆಗೆ ಕನಸುಗಳು ಸಾಯುವುದಿಲ್ಲ, ಎಲ್ಲಿ ಒಳ್ಳೆಯ ಉದ್ದೇಶಗಳಿರುತ್ತವೆಯೋ ಅಲ್ಲಿ ಉತ್ತಮ ಫಲಿತಾಂಶ ಪಡೆಯುವುದು ಸುಲಭವಾಗಿರುವುದಿಲ್ಲ.. ಆದರೆ ಪ್ರಧಾನಿಯ ಆಲೋಚನೆ ಮತ್ತು ಅವರ ಸಹೋದ್ಯೋಗಿಗಳ ಆಲೋಚನೆ ಹೊಂದಿಕೆಯಾದಲ್ಲಿ ಎಂತಹಾ ಸಾಧನೆಯನ್ನೂ ಸಹ ಮಾಡಬಹುದು" ಎಂದು ಮೋದಿ ಹೇಳಿದರು.
ಮುಂದುವರೆದು ಮಾತನಾಡಿದ ಮೋದಿ, "ಒಬ್ಬ ಪ್ರಧಾನಿ ಪ್ರತಿಯೊಂದು ಸಭೆಯಲ್ಲಿಯೂ ತೆಗೆದುಕೊಳ್ಳುವ ನಿರ್ಣಯಗಳು, 10 ರಿಂದ 15 ಪದಗಳಲ್ಲಿ ನಿಡುವ ಸೂಚನೆಗಳು ಸುಮ್ಮನೆ ಜಾರಿಯಾಗುವುದಿಲ್ಲ. ಅದಕ್ಕೆ ಒಂದು ನೀತಿ, ನಿಯಮ ರಚಿಸಬೇಕು, ವ್ಯವಸ್ಥೆ ಕಲ್ಪಿಸಬೇಕು, ಮಾರ್ಗಸೂಚಿ ರಚಿಸಬೇಕು, ಜಾರಿಗೊಳಿಸಬೇಕು, ಮೇಲ್ವಿಚಾರಣೆ ನಡೆಸಬೇಕು.. ಇದೊಂದು ದೊಡ್ಡ ಪ್ರಕ್ರಿಯೆ. ಇದ್ಯಾವುದೂ ಕಾರ್ಯತಂಡ ಇಲ್ಲದೆ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಕಳೆದ ಐದು ವರ್ಷಗಳಲ್ಲಿ ಎಂದಿಗೂ ನಮ್ಮ ಗುರಿ ತಪ್ಪಿಲ್ಲ. ಇದಕ್ಕೆ ಮುಖ್ಯ ಕಾರಣ ನಮ್ಮ ಅಧಿಕಾರಿಗಳ ಕಾರ್ಯನಿಷ್ಠೆ. ಅದರ ಫಲವಾಗಿ ನಾವು ಇಂದು ಜನರ ಬಹುತೇಕ ನಿರೀಕ್ಷೆಗಳನ್ನು ಪೂರೈಸಿದ್ದೇವೆ" ಎಂದು ಮೋದಿ ಹೇಳಿದರು.