Bike Modification ಮಾಡಿಸುವ ಗೀಳು ನಿಮಗೂ ಇದೆಯಾ? ಹಾಗಾದ್ರೆ ಮೊದಲು ಈ ಸುದ್ದಿ ಓದಿ!

Bike Modification: ತಮ್ಮ ಹಳೆಯ ಬೈಕ್‌ಗೆ ಹೊಸ ರೂಪ ನೀಡಲು, ಕೆಲವರು ಅದನ್ನು ಮಾರ್ಪಡಿಸುತ್ತಾರೆ, ಆದರೆ ಕೆಲವೊಮ್ಮೆ ಈ ಕಾರಣದಿಂದಾಗಿ ಅವರ ಬೈಕನ್ನು ಸೀಜ್ ಕೂಡ ಮಾಡಲಾಗುತ್ತದೆ.  

Written by - Nitin Tabib | Last Updated : Sep 9, 2023, 07:10 PM IST
  • ಕೆಲವರು ಮೋಟಾರ್ ಸೈಕಲ್ ನ ಸದ್ದು ದ್ವಿಗುಣಗೊಳಿಸಲು ಪಟಾಕಿ ಸೈಲೆನ್ಸರ್ ಅಳವಡಿಸಿ
  • ಭಾರೀ ಸದ್ದು ಮಾಡುತ್ತ ಬೈಕ್ ನ್ನು ಅತಿವೇಗದಲ್ಲಿ ತೆಗೆದುಕೊಂಡು ಹೋದಾಗ ಪಟಾಕಿಯಂತೆ ಸದ್ದು ಮಾಡಲಾರಂಭಿಸುತ್ತದೆ.
  • ಪಟಾಕಿ ಸೈಲೆನ್ಸರ್ ಶಬ್ದ ಮಾಲಿನ್ಯವನ್ನು ಉಂಟುಮಾಡುತ್ತದೆ, ಆದ್ದರಿಂದ ಇದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
Bike Modification ಮಾಡಿಸುವ ಗೀಳು ನಿಮಗೂ ಇದೆಯಾ? ಹಾಗಾದ್ರೆ ಮೊದಲು ಈ ಸುದ್ದಿ ಓದಿ!  title=

ನಿಮ್ಮ ಮೋಟಾರ್‌ಸೈಕಲ್‌ನಲ್ಲಿ ಮಾರ್ಪಾಡುಗಳನ್ನು ಮಾಡುವ ಹವ್ಯಾಸ ನಿಮಗೂ ಇದ್ದರೆ, ಸ್ವಲ್ಪ ಜಾಗರೂಕರಾಗಿರಬೇಕು ಏಕೆಂದರೆ ಭಾರತದಲ್ಲಿ ಕೆಲವು ಬೈಕ್ ಮಾರ್ಪಾಡುಗಳು ಸಂಪೂರ್ಣವಾಗಿ ಕಾನೂನುಬಾಹಿರವಾಗಿವೆ ಮತ್ತು ನೀವು ಅವುಗಳನ್ನು ನಿಮ್ಮ ಬೈಕ್‌ನಲ್ಲಿ ಮಾಡಿದರೆ ನಿಮ್ಮ ಬೈಕನ್ನು ಅದರ ಕಾರಣದಿಂದಾಗಿ ಪೊಲೀಸರು ವಶಪಡಿಸಿಕೊಳ್ಳಬಹುದು. ಹೆಚ್ಚಿನ ಬೈಕ್ ಸವಾರರಿಗೆ ಇದರ ಬಗ್ಗೆ ಮಾಹಿತಿ ಇರುವುದಿಲ್ಲ, ಆದ್ದರಿಂದ ನಾವು ಇಂದು ನಿಮಗೆ ಸಂಪೂರ್ಣವಾಗಿ ಕಾನೂನುಬಾಹಿರವಾದ ಮಾರ್ಪಾಡುಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ.

ಪಟಾಕಿ ಸೈಲೆನ್ಸರ್
ಕೆಲವರು ಮೋಟಾರ್ ಸೈಕಲ್ ನ ಸದ್ದು ದ್ವಿಗುಣಗೊಳಿಸಲು ಪಟಾಕಿ ಸೈಲೆನ್ಸರ್ ಅಳವಡಿಸಿ ಭಾರೀ ಸದ್ದು ಮಾಡುತ್ತ ಬೈಕ್ ನ್ನು ಅತಿವೇಗದಲ್ಲಿ ತೆಗೆದುಕೊಂಡು ಹೋದಾಗ ಪಟಾಕಿಯಂತೆ ಸದ್ದು ಮಾಡಲಾರಂಭಿಸುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಬಿಡಿಭಾಗಗಳನ್ನು  ಇನ್ಸ್ಟಾಲ್ ಮಾಡುವ ಮೂಲಕ ಇದನ್ನು ಮಾಡಲಾಗುತ್ತದೆ. ಆದರೆ, ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಅವರು ₹ 5000ದಿಂದ ₹ 20000 ದಂಡ ವಿಧಿಸಬಹುದು ಎಂಬುದು ಬಹುತೇಕ ಬೈಕ್ ಸವಾರರಿಗೆ ತಿಳಿದಿರುವುದಿಲ್ಲ. ಪಟಾಕಿ ಸೈಲೆನ್ಸರ್ ಶಬ್ದ ಮಾಲಿನ್ಯವನ್ನು ಉಂಟುಮಾಡುತ್ತದೆ, ಆದ್ದರಿಂದ ಇದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಡಿಸೈನರ್ ನಂಬರ್ ಪ್ಲೇಟ್‌ಗಳು
ಭಾರತದಾದ್ಯಂತ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ನಂಬರ್ ಪ್ಲೇಟ್‌ಗಳನ್ನು ಪರಿಚಯಿಸಲಾಗಿದೆ, ಆದ್ದರಿಂದ ಈ ನಂಬರ್ ಪ್ಲೇಟ್ ಅನ್ನು ಇನ್ನೂ ಬಳಸದೆ ಇರುವವರು ಮತ್ತು ಅದರ ಬದಲಿಗೆ ಡಿಸೈನರ್ ನಂಬರ್ ಪ್ಲೇಟ್‌ಗಳನ್ನು ಬಳಸುತ್ತಿರುವವರು ₹ 5000 ರಿಂದ ₹ 10000 ವರೆಗೆ ದಂಡವನ್ನು ಪಾವತಿಸಬೇಕಾಗುತ್ತದೆ. ವಾಸ್ತವದ್ಲ್ಲಿ, ಡಿಸೈನರ್ ನಂಬರ್ ಪ್ಲೇಟ್‌ಗಳಿಂದಾಗಿ, ಮೋಟಾರ್‌ಸೈಕಲ್‌ನ ಸಂಖ್ಯೆ ಸರಿಯಾಗಿ ಗೋಚರಿಸುವುದಿಲ್ಲ, ಆದ್ದರಿಂದ ಅವುಗಳನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ-Good News: ಏ‌ಟಿ‌ಎಮ್ ನಿಂದ ಹಣ ಪಡೆಯಲು ಇನ್ಮುಂದೆ ಡೆಬಿಟ್ ಕಾರ್ಡ್ ಬೇಕಿಲ್ಲ, ಆರಂಭಗೊಂಡಿದೆ ಈ ಹೊಸ ಸೇವೆ!

ಹೆವಿ ಡ್ಯೂಟಿ ಹಾರ್ನ್
ಇತ್ತೀಚಿನ ದಿನಗಳಲ್ಲಿ, ದ್ವಿಚಕ್ರವಾಹನಗಳಿಗಾಗಿ ಮಾರುಕಟ್ಟೆಯಲ್ಲಿ ಅನೇಕ ವಿಧದ ಜೋರಾಗಿ ಸದ್ದು ಮಾಡುವ ಹಾರ್ನ್ ಗಳು ಲಭ್ಯವಿವೆ, ಆದರೆ, ಅವುಗಳಲ್ಲಿ ಬಹುತೇಕ ಹಾರ್ನ್ ಗಳು ಶಬ್ದ ಮಾಲಿನ್ಯವನ್ನು ಉಂಟುಮಾಡುವ ಕಾರಣ ಸಂಪೂರ್ಣವಾಗಿ ಕಾನೂನುಬಾಹಿರವಾಗಿವೆ. ಟ್ರಾಫಿಕ್ ಪೊಲೀಸರ ಪ್ರಕಾರ, ನಿಮ್ಮ ಮೋಟಾರ್‌ಸೈಕಲ್‌ನೊಂದಿಗೆ ಸ್ಟಾಕ್ ಹಾರ್ನ್ ಅನ್ನು ಮಾತ್ರ ಬಳಸಲು ನಿಮಗೆ ಅನುಮತಿಸಲಾಗಿದೆ ಮತ್ತು ನೀವು ಜೋರಾಗಿ ಹಾರ್ನ್ ಬಳಸಿದರೆ ನಿಮಗೆ ಅವರು ಭಾರೀ ಚಲನ್ ನೀಡಬಹುದು.

ಇದನ್ನೂ ಓದಿ-Business Concept: ಇನ್ಮುಂದೆ ನೀವೂ ಕೂಡ ಏ‌ಟಿ‌ಎಮ್ ಸ್ಥಾಪಿಸಿ ಕೈತುಂಬಾ ಹಣ ಸಂಪಾದಿಸಬಹುದು, ಇಲ್ಲಿದೆ ವಿವರ!

ಮೋಟಾರ್ಸೈಕಲ್ ರಾಪಿಂಗ್
ಇತ್ತೀಚಿನ ದಿನಗಳಲ್ಲಿ ಮೋಟಾರು ಸೈಕಲ್ ವಿಭಿನ್ನವಾಗಿ ಕಾಣಲು ಫಿಲ್ಮ್ ಜನರು ಅವುಗಳಿಗೆ ಹಾಕುತ್ತಾರೆ.ಇದರಿಂದ ಮೋಟಾರು ಸೈಕಲ್‌ನ ನೈಜ ಬಣ್ಣ ಮತ್ತು ವಿನ್ಯಾಸವು ಅರ್ಥವಾಗುವುದಿಲ್ಲ.ಟ್ರಾಫಿಕ್ ಪೋಲೀಸರು ಅಂತಹ ಮೋಟಾರುಸೈಕಲ್ ಅನ್ನು ಹಿಡಿದರೆ ಅದರ ಮಾಲೀಕರಿಗೆ ಭಾರಿ ಶಿಕ್ಷೆಯಾಗುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News