Bigg Boss Kannada 10: ಶಿವಣ್ಣನ ಮಿಮಿಕ್ರಿ ಮಾಡಿದ ತುಕಾಲಿ ಸಂತೋಷ್..!

Bigg Boss Kannada 10: ತುಕಾಲಿ ಸಂತೋಷ್ ಶಿವಣ್ಣ ಆಗಿ ಬದಲಾಗಿರುವ ವಿಡಿಯೋವನ್ನು ನೀವು JioCinemaದಲ್ಲಿ 24ಗಂಟೆ ನೇರಪ್ರಸಾರವಾಗುತ್ತಿರುವ ‘ಬಿಗ್‌ಬಾಸ್‌ ಕನ್ನಡ’ದ ‘Live Shorts’ ಸೆಗ್ಮೆಂಟ್‌ನಲ್ಲಿ ನೋಡಬಹುದು. 

Written by - YASHODHA POOJARI | Edited by - Puttaraj K Alur | Last Updated : Oct 14, 2023, 08:51 PM IST
  • ‘ಬಿಗ್‌ಬಾಸ್‌’ ಮನೆಯಲ್ಲಿಯೂ ಹರಿದಾಡಿದ ಹ್ಯಾಟ್ರಿಕ್ ಹೀರೋ ಶಿವಣ್ಣನ ನೆನಪುಗಳು
  • ಶಿವಣ್ಣನವರ ಮಿಮಿಕ್ರಿ ಮಾಡಿದ ಹಾಸ್ಯ ಚಟಾಕಿ ಸಿಡಿಸುವ ತುಕಾಲಿ ಸಂತೋಷ್
  • ತುಕಾಲಿ ಸಂತೋಷ್ ಶಿವಣ್ಣನ ಯಾವ ಡೈಲಾಗ್ ಮಿಮಿಕ್ರಿ ಮಾಡಿದ್ರು ಗೊತ್ತಾ..?
Bigg Boss Kannada 10: ಶಿವಣ್ಣನ ಮಿಮಿಕ್ರಿ ಮಾಡಿದ ತುಕಾಲಿ ಸಂತೋಷ್..! title=
ಶಿವಣ್ಣನ ಮಿಮಿಕ್ರಿ ಮಾಡಿದ ತುಕಾಲಿ ಸಂತೋಷ್!

ಬೆಂಗಳೂರು: ಖ್ಯಾತ ನಟ ಶಿವರಾಜಕುಮಾರ್ ಅವರ ಅಭಿಮಾನಿಗಳು ಎಲ್ಲಿ ಇಲ್ಲ ಹೇಳಿ? ‘ಬಿಗ್‌ಬಾಸ್‌’ ಮನೆಯಲ್ಲಿಯೂ ಶಿವಣ್ಣನ ನೆನಪುಗಳು ಹರಿದಾಡಿವೆ. ಅದಕ್ಕೆ ಕಾರಣವಾಗಿದ್ದು ತುಕಾಲಿ ಸಂತೋಷ್ ಅವರು! ತುಕಾಲಿ ಅವರಿಗೂ ಶಿವಣ್ಣನಿಗೂ ಎಲ್ಲಿಂದ ಎಲ್ಲಿಯ ಸಂಬಂಧ? ಇದು ಅಭಿಮಾನದ ಸಂಬಂಧ. ತುಕಾಲಿ ಸಂತೋಷ್‌ ಅವರಿಗೆ ಶಿವಣ್ಣನ ಮೇಲಿದ್ದ ಅಭಿಮಾನ ವ್ಯಕ್ತಗೊಂಡಿದ್ದು ಅವರನ್ನು ಮಿಮಿಕ್ರಿ ಮಾಡುವ ಮೂಲಕ! ಮೊದಲೇ ಮಾತಿಗೊಮ್ಮೆ ಹಾಸ್ಯ ಚಟಾಕಿ ಸಿಡಿಸುವ ಸಂತೋಷ್ ಅವರು ಶಿವಣ್ಣನವರ ಮಿಮಿಕ್ರಿ ಮಾಡಿದರೆ ಕೇಳಬೇಕೇ?

ಹಾಗಂತ ತುಕಾಲಿ ಅವರು ಶಿವಣ್ಣನ ಮಿಮಿಕ್ರಿ ಮಾಡುವುದರಲ್ಲಿಯೂ ಒಂದು ಅಡ್ವಾಂಟೇಜ್ ತೆಗೆದುಕೊಂಡಿದ್ದಾರೆ. ಆ ಅಡ್ವಾಂಟೇಜ್ ಏನು ಗೊತ್ತಾ? ‘ಸಮರ್ಥ’ ಮತ್ತು ‘ಅಸಮರ್ಥ’ ಸ್ಪರ್ಧಿಗಳ ನಡುವೆ ಕೆಲವರು ‘ಬಿಗ್‌ಬಾಸ್’ ಮನೆಯಲ್ಲಿನ ಹುಲ್ಲುಹಾಸಿನ ಮೇಲೆ ಕೂತು ಹರಟೆ ಹೊಡೆಯುತ್ತಿದ್ದರು. ಆಗಲೇ ತುಕಾಲಿ ಸಂತೋಷ್ ಅವರಿಗೆ ಶಿವಣ್ಣನ ಮಿಮಿಕ್ರಿ ಮಾಡುವ ಹುಕಿ ಬಂದಿದ್ದು. ಬರೀ ಮಿಮಿಕ್ರಿ ಮಾಡಿದರೆ ಸಾಕೇ? ಅದರ ಮೂಲಕವೇ ನಮ್ರತಾಗೌಡ ಜೊತೆಗೆ ಎರಡು ಹೆಜ್ಜೆ ಹಾಕುವ ಆಸೆಯನ್ನೂ ಈಡೇರಿಸಿಕೊಂಡಿದ್ದಾರೆ. ಕಾಮಿಡಿ ಮಾಡ್ತಾನೇ ಫ್ಲರ್ಟ್‌ ಮಾಡುವ ಕಲೆ ಅವರಿಗೆ ಕರಗತ ಆಗಿರುವಂತಿದೆ.

ಇದನ್ನೂ ಓದಿ: ಸ್ಟ್ರಾಪ್‌ಲೆಸ್ ಟಾಪ್‌ನಲ್ಲಿ ನಿದ್ದೆಗೆಡಿಸುವಂತಿವೆ ಜಾನ್ವಿ ಸೌಂದರ್ಯ..! ಫೋಟೋಸ್‌ ಇಲ್ಲಿವೆ

‘ಹುಲ್ಲು ಹಾಸಿನ ಮೇಲೆ ಮಲಗಿದ್ದ ನಮ್ರತಾ ಎದುರಿಗೆ ಹೋಗಿ ನಿಂತ ತುಕಾಲಿ ಸಂತೋಷ್ ಶಿವಣ್ಣ ಅವರ ಸ್ಟೈಲ್‌ನಲ್ಲಿಯೇ, ‘ನೀವಂದ್ರೆ ತುಂಬಾ ಇಷ್ಟ.. ಒಂದೆರಡು ಸ್ಟೆಪ್ ಹಾಕ್ಬೋದಾ?’ ಎಂದು ಕೇಳಿದ್ದಾರೆ. ಶಿವಣ್ಣನ ಧ್ವನಿಯಲ್ಲಿ ‘ಸ್ಟೆಪ್ ಹಾಕೋಣ್ವಾ?’ ಅಂತಾ ಕೇಳಿದ್ರೆ ನೋ ಅನ್ನಕ್ಕಾಗತ್ತಾ? ನಮ್ರತಾ ಖುಷಿಯಿಂದಲೇ ಎದ್ದುಹೋಗಿ ಅವರ ಪಕ್ಕ ನಿಂತಿದ್ದಾರೆ. ‘ರಾಜಾ ರಾಜಾ ಶಿವರಾಜ…’ ಎಂದು ಶಿವಣ್ಣನ ಧ್ವನಿಯನ್ನೇ ಅನುಕರಿಸುತ್ತ ಹಾಡುವುದರ ಜೊತೆಗೆ ತುಕಾಲಿ ಅವರು ಡಾನ್ಸ್‌ ಎಕ್ಸ್‌ಫರ್ಟ್‌ ನಮ್ರತಾಗೇ ಸ್ಟೆಪ್ಸ್‌ ಹೇಳಿಕೊಟ್ಟಿದ್ದಾರೆ…. ಆ ಸ್ಟೆಪ್ಸ್‌ಗಳೋ ದೇವರಿಗೇ ಪ್ರೀತಿ!

ತುಕಾಲಿ ಸಂತೋಷ್ ಶಿವಣ್ಣ ಆಗಿ ಬದಲಾಗಿರುವ ವಿಡಿಯೋವನ್ನು ನೀವು JioCinemaದಲ್ಲಿ 24ಗಂಟೆ ನೇರಪ್ರಸಾರವಾಗುತ್ತಿರುವ ‘ಬಿಗ್‌ಬಾಸ್‌ ಕನ್ನಡ’ದ ‘Live Shorts’ ಸೆಗ್ಮೆಂಟ್‌ನಲ್ಲಿ ನೋಡಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಶನಿವಾರ ಮತ್ತು ಭಾನುವಾರದ ಕಿಚ್ಚನ ಪಂಚಾಯಿತಿಯನ್ನು Colors Kannada ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ವೀಕ್ಷಿಸಬಹುದು.

ಇದನ್ನೂ ಓದಿ: ಈ ವಾರ OTTಯಲ್ಲಿ ವೀಕ್ಷಿಸಲೇಬೇಕಾದ ಸಿನಿಮಾ & ವೆಬ್ ಸೀರಿಸ್​ಗಳು..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News