Man behind Afghanistan Victory over Pakistan : 1996ರ ವರ್ಷ ಮಾರ್ಚ್ ೯ನೇ ತಾರೀಕು. ವಿಶ್ವಕಪ್ ನ ದೊಡ್ಡ ಮ್ಯಾಚ್ ಅದು ಹೌದು ಅಂದು ಭಾರತ ಪಾಕ್ ನಡುವೆ ನಡೆದದ್ದು ವಿಶ್ವಕಪ್ ಕ್ವಾರ್ಟರ್ಫೈನಲ್ ಪಂದ್ಯ. ಬೆಂಗಳೂರು ಮೈದಾನದಲ್ಲಿ ಭಾರತ-ಪಾಕಿಸ್ತಾನ ಹಣಾಹಣಿ ನಡೆಯುತ್ತಿತ್ತು. ಆ ಕಾಲದ ಅತ್ಯಂತ ಭಯಂಕರ ಬೌಲರ್ಗಳಲ್ಲಿ ಒಬ್ಬರಾದ ವಕಾರ್ ಯೂನಿಸ್ ಅವರನ್ನು ಭಾರತೀಯ ದಾಂಡಿಗ ಬೆವರಿಳಿಸಿದ್ದನ್ನು , ಪಾಕಿಸ್ತಾನ ತಂಡ ಅದೆಷ್ಟೇ ಬೇಡವೆಂದರೂ ಮರೆಯುವುದು ಸಾಧ್ಯವೇ ಇಲ್ಲ. ಅಂದು ಪಾಕಿಸ್ತಾನ ಪಾಲಿಗೆ ಸಿಂಹ ಸ್ವಪ್ನನಾಗಿದ್ದ ಅದೇ ಬ್ಯಾಟ್ಸ್ ಮ್ಯಾನ್ ಇದೀಗ ಸೋಮವಾರ ನಡೆದ ವಿಶ್ವಕಪ್ 2023 ಪಂದ್ಯದಲ್ಲಿ ಅಫ್ಘಾನಿಸ್ತಾನದ ಗೆಲುವಿನಲ್ಲಿ ಬಹು ದೊಡ್ಡ ಪಾತ್ರ ವಹಿಸಿದ್ದಾರೆ.
ನವಜೋತ್ ಸಿಧು ಸ್ಫೋಟಕ ಬ್ಯಾಟಿಂಗ್ :
1996ರ ವಿಶ್ವಕಪ್ನ ಕ್ವಾರ್ಟರ್ಫೈನಲ್ ನಲ್ಲಿ ಭಾರತ ಮತ್ತು ಪಾಕಿಸ್ತಾನದಂತಹ ಎರಡು ಪ್ರಬಲ ತಂಡಗಳು ಮುಖಾಮುಖಿಯಾಗಿದ್ದವು. ಎರಡೂ ತಂಡಗಳು ಮ್ಯಾಚ್ ವಿನ್ನರ್ಗಳಿಂದ ತುಂಬಿದ್ದವು. ಇಲ್ಲಿ ಮೊದಲು ಇನ್ನಿಂಗ್ಸ್ ಓಪನ್ ಮಾಡಿದ್ದು, ಸಚಿನ್ ತೆಂಡೂಲ್ಕರ್ ಮತ್ತು ನವಜೋತ್ ಸಿಧು. ಇವರಿಬ್ಬರೂ ಮೊದಲ ವಿಕೆಟ್ಗೆ 90 ರನ್ಗಳ ಜೊತೆಯಾಟ ನೀಡಿದರು. ಸಚಿನ್ 31 ರನ್ ಗಳಿಸಿ ಪೆವಿಲಿಯನ್ ಗೆ ಮರಳಬೇಕಾಯಿತು. ಇದಾದ ಬಳಿಕ ಬಂದ ಸಂಜಯ್ ಮಂಜ್ರೇಕರ್ 20 ರನ್ ಗಳಿಸಿ ಔಟಾದರು. ನಂತರ ಭರ್ಜರಿ ಬ್ಯಾಟಿಂಗ್ ಮಾಡಿದ ನವಜೋತ್ ಸಿಂಗ್ ಸಿಧು 93 ರನ್ ಗಳಿಸಿ ಮುಸ್ತಾಕ್ ಅಹ್ಮದ್ ಎಸೆತದಲ್ಲಿ ಔಟಾದರು. ನಂತರ ಬ್ಯಾಟಿಂಗ್ ಗೆ ಬಂದ ಮೊಹಮ್ಮದ್ ಅಜರುದ್ದೀನ್ (27) ಮತ್ತು ವಿನೋದ್ ಕಾಂಬ್ಳಿ (24) ಗಳಿಸಿದ್ದು ಬಿಟ್ಟರೆ ದಿಒದ್ದ ಮೊತ್ತ ಕಲೆ ಹಾಕುವುದು ಸಾಧ್ಯವಾಗಲಿಲ್ಲ. ಇದಾದ ಬಳಿಕ ಮೈದಾನಕ್ಕೆ ಇಳಿದ ಬ್ಯಾಟ್ಸ್ ಮ್ಯಾನ್ ಪಾಕಿಸ್ತಾನದ ಬೌಲರ್ಗಳನ್ನು ಬೆಚ್ಚಿ ಬೀಳಿಸಿದ್ದು ಇತಿಹಾಸ.
ಇದನ್ನೂ ಓದಿ : WATCH : ಅಫ್ಘಾನಿಸ್ತಾನದ ಗೆಲುವಿನ ನಂತರ ಇರ್ಫಾನ್ ಪಠಾಣ್ ಜೊತೆ ರಶೀದ್ ನೃತ್ಯ ವೈರಲ್
ವಕಾರ್ ಓವರ್ನಲ್ಲಿ 22 ರನ್ :
ಆರನೇ ಕ್ರಮಾಂಕದ ಬ್ಯಾಟ್ಸ್ಮನ್ ಪಾಕಿಸ್ತಾನದ ಬೌಲರ್ಗಳ ಬೆವರಿಳಿಸಿ ಬಿಟ್ಟಿದ್ದರು. ಮಯಾದನದಲ್ಲಿ ಏನಾಗುತ್ತಿದೆ ಎನ್ನುವುದೇ ಪಾಕ್ ಬೌಲರ್ ಗಳಿಗೆ ಅರ್ಥವಾಗದೇ ಹೋಗಿತ್ತು. ಅಪಾಯಕಾರಿ ವಕಾರ್ ಯೂನಿಸ್ ಅವರ ಓವರ್ನಲ್ಲಿ ಈ ಬ್ಯಾಟ್ಸ್ಮನ್ 22 ರನ್ ಗಳಿಸಿದಾಗ ಪಾಕಿಸ್ತಾನಕ್ಕೆ ಮರ್ಮಾಘಾತ. ಇನಿಂಗ್ಸ್ನ 48ನೇ ಓವರ್ನಲ್ಲಿ ಬಂದ ವಕಾರ್ ಅವರ ಓವರ್ನಲ್ಲಿ ಎರಡು ಸಿಕ್ಸರ್ಗಳ ಸಹಾಯದಿಂದ 22 ರನ್ಗಳನ್ನು ಲೂಟಿ ಮಾಡಿದ ಆ ಬ್ಯಾಟ್ಸ್ಮನ್ ಬೇರೆ ಯಾರೂ ಅಲ್ಲ ಅಜಯ್ ಜಡೇಜಾ. ಅಂದು ಜಡೇಜಾ 25 ಎಸೆತಗಳಲ್ಲಿ 45 ರನ್ ಬಾರಿಸಿದ್ದರು. ಈ ಮೂಲಕವೇ ಭಾರತ ಆ ಮ್ಯಾಚ್ ನಲ್ಲಿ 287 ರನ್ ಗಳಿಸುವುದು ಸಾಧ್ಯವಾಗಿತ್ತು.
ಪಂದ್ಯವನ್ನು ಗೆದ್ದು ಬೀಗಿತ್ತು ಭಾರತ :
ಭಾರತ ನೀಡಿದ ಗುರಿಯನ್ನು ಬೆನ್ನಟ್ಟಿದ ಪಾಕ್ ಆರಂಭಿಕ ಬ್ಯಾಟ್ಸ್ ಮನ್ ಗಳು ತಂಡಕ್ಕೆ ಉತ್ತಮ ಆರಂಭ ನೀಡಿದರು. ಇದಾದ ಬಳಿಕ ಪಾಕಿಸ್ತಾನದ ನಿರಂತರ ವಿಕೆಟ್ ಪತನ ಮುಂದುವರಿಯಿತು. ಈ ಪಂದ್ಯವನ್ನು ಭಾರತ 39 ರನ್ಗಳಿಂದ ಗೆದ್ದು ವಿಶ್ವಕಪ್ನ ಸೆಮಿಫೈನಲ್ಗೆ ಲಗ್ಗೆ ಇಟ್ಟಿತ್ತು.
ಇದನ್ನೂ ಓದಿ : PAK vs AFG Video: ಸಿಕ್ಸರ್ ಬಾರಿಸಿ ಇತಿಹಾಸದ ಪುಟಗಳಲ್ಲಿ ದಾಖಲೆ ಬರೆದ ರಹಮತ್ ಶಾ
ಮತ್ತೆ ಪಾಕಿಸ್ತಾನವನ್ನು ಮಣ್ಣು ಮುಕ್ಕಿಸಿದ್ದು ಇದೇ ಭಾರತೀಯನ ತಂತ್ರ :
ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ 8 ವಿಕೆಟ್ಗಳ ಹೀನಾಯ ಸೋಲು ಕಂಡಿದೆ. ಅಫ್ಘಾನಿಸ್ತಾನ ದ ಗೆಲುವು ಮತ್ತು ಪಾಕಿಸ್ತಾನದ ಸೋಲಿನ ಹಿಂದೆ ಇರುವುದು ಅಜಯ್ ಜಡೇಜಾ. 1996ರಲ್ಲಿ ಪಾಕಿಸ್ತಾನದ ಸೊಕ್ಕು ಮುರಿದಿದ್ದ ಜಡೇಜಾ ಅಫ್ಘಾನಿಸ್ತಾನ ತಂಡದಲ್ಲಿ ಮೆಂಟರ್ ಹಾಗೂ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸಕ್ತ ವಿಶ್ವಕಪ್ಗೂ ಮುನ್ನವೇ ಅವರು ತಂಡವನ್ನು ಸೇರಿಕೊಂಡಿದ್ದರು. ಅವರ ಮಾರ್ಗದರ್ಶನದಲ್ಲಿ ಆಫ್ಘನ್ ತಂಡ ಅದ್ಭುತ ಪ್ರದರ್ಶನ ನೀಡುತ್ತಿದೆ. ಮೊದಲು ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಸೋಲಿಸಿತು. ಇದೀಗ ಚೆನ್ನೈನಲ್ಲಿ ಪಾಕಿಸ್ತಾನ ಹೀನಾಯವಾಗಿ ಸೋತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.