World Cup: ಪಾಕಿಸ್ತಾನದ ಗೆಲುವಿನಿಂದಾಗಿ ವಿಶ್ವಕಪ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ ಈ ತಂಡ

World Cup: ಮಂಗಳವಾರ (ಅಕ್ಟೋಬರ್ 31, 2023) ಈಡನ್ ಗಾರ್ಡನ್ಸ್ ನಲ್ಲಿ  ನಡೆದ ವಿಶ್ವಕಪ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಪಾಕಿಸ್ತಾನ ತಂಡ 7 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ. ಆದರೆ, ಪಾಕಿಸ್ತಾನದ ಗೆಲುವಿನಿಂದ ಒಂದು ತಂಡಕ್ಕೆ ಭಾರೀ ನಷ್ಟವಾಗಿದ್ದು, ಈ ತಂಡ ವಿಶ್ವಕಪ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ. 

Written by - Yashaswini V | Last Updated : Nov 1, 2023, 08:23 AM IST
  • ಈಡನ್ ಗಾರ್ಡನ್ಸ್ ನಲ್ಲಿ ಮಂಗಳವಾರ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನ 7 ವಿಕೆಟ್ ಗಳ ಜಯ ಸಾಧಿಸಿದೆ.
  • ಈ ಗೆಲುವಿನಿಂದ ಒಂದು ತಂಡ ಭಾರಿ ನಷ್ಟ ಅನುಭವಿಸಿದೆ.
  • ಇದೀಗ ಈ ಸೋಲಿನೊಂದಿಗೆ ತಂಡವು ಈ ಐಸಿಸಿ ಪಂದ್ಯಾವಳಿಯಿಂದ ಅಧಿಕೃತವಾಗಿ ಹೊರಗುಳಿದ ಮೊದಲ ತಂಡವಾಗಿದೆ.
World Cup: ಪಾಕಿಸ್ತಾನದ ಗೆಲುವಿನಿಂದಾಗಿ ವಿಶ್ವಕಪ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ ಈ ತಂಡ  title=

World Cup: ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮಂಗಳವಾರ (ಅಕ್ಟೋಬರ್ 31, 2023) ಬಾಂಗ್ಲಾದೇಶ ವಿರುದ್ಧ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ  ಏಳು ವಿಕೆಟ್‌ಗಳ ಆರಾಮದಾಯಕ ಗೆಲುವು ಸಾಧಿಸಿತು. ಇದೇ ವೇಳೆ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಏಳು ವಿಕೆಟ್‌ಗಳಿಂದ ಸೋಲುಂಡ ಬಾಂಗ್ಲಾದೇಶ  ವಿಶ್ವಕಪ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ. 

ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಿನ್ನೆ ನಡೆದ ವಿಶ್ವಕಪ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ 45.1 ಓವರ್‌ಗಳಲ್ಲಿ  204 ರನ್‌ಗಳಿಗೆ ಆಲೌಟ್  ಆಯಿತು. 205 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ 32.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಸುಲಭವಾಗಿ ತನ್ನ ಗುರಿ ಮುಟ್ಟಿತು. 

ಪಾಕ್ ಗೆಲುವಿನಿಂದ ಭಾರೀ ನಷ್ಟ ಅನುಭವಿಸಿದ ಬಾಂಗ್ಲಾ ಪಡೆ: 
ಬಾಂಗ್ಲಾದೇಶದ ಆರನೇ ಸೋಲು ಶಕೀಬ್ ಅಲ್-ಹಸನ್ ತಂಡದ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ನಿರೀಕ್ಷೆಯನ್ನು ಹುಸಿಗೊಳಿಸಿತು. ಇದರೊಂದಿಗೆ ಬಾಂಗ್ಲಾದೇಶ ತಂಡವು ಈ ಐಸಿಸಿ ಪಂದ್ಯಾವಳಿಯಿಂದ ಅಧಿಕೃತವಾಗಿ ಹೊರಗುಳಿದ ಮೊದಲ ತಂಡವಾಗಿದೆ.

ಇದನ್ನೂ ಓದಿ- ರನ್ ಕಲೆ ಹಾಕುವಲ್ಲಿ ಗಿಲ್ ವೈಫಲ್ಯ ! ಮುಂದಿನ ಪಂದ್ಯದಲ್ಲಿ ಒಪನರ್ ಆಗಿ ರೋಹಿತ್ ಗೆ ಸಾಥ್ ನೀಡುವುದು ಈ ಆಟಗಾರ

ವಾಸ್ತವವಾಗಿ, ಪ್ರಸಕ್ತ ಐಸಿಸಿ ವಿಶ್ವಕಪ್‌ ಆವೃತ್ತಿಯಲ್ಲಿ ಬಾಂಗ್ಲಾದೇಶ 7 ಪಂದ್ಯಗಳಲ್ಲಿ ಆರನೇ ಬಾರಿಗೆ ಸೋಲು ಅನುಭವಿಸಿದೆ. 10 ತಂಡಗಳ ಪಾಯಿಂಟ್ ಟೇಬಲ್ ನಲ್ಲಿ ಇಂಗ್ಲೆಂಡ್ ಕೊನೆಯ ಸ್ಥಾನದಲ್ಲಿದ್ದರೂ, ಬಾಂಗ್ಲಾದೇಶ 9ನೇ ಸ್ಥಾನದಲ್ಲಿದ್ದರೂ ಈ ಟೂರ್ನಿಯಿಂದ ಹೊರಬಿದ್ದಿದೆ. ವಾಸ್ತವವಾಗಿ, ಇಂಗ್ಲೆಂಡ್ 6 ಪಂದ್ಯಗಳಲ್ಲಿ ಒಂದನ್ನು ಗೆದ್ದಿದ್ದರೆ, ಬಾಂಗ್ಲಾದೇಶ 7 ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಸಾಧಿಸಿದೆ. 

ಪಾಕಿಸ್ತಾನದ ಸೆಮಿಫೈನಲ್‌ ಭರವಸೆ ಇನ್ನೂ ಜೀವಂತ: 
ಇನ್ನೂ ಐಸಿಸಿ ವಿಶ್ವಕಪ್ ಪಂದ್ಯದಲ್ಲಿ ಬಾಬರ್ ಅಜಮ್ ನಾಯಕತ್ವದಲ್ಲಿ ಇದುವರೆಗೂ ಏಳು ಪಂದ್ಯಗಳಲ್ಲಿ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿರುವ ಪಾಕಿಸ್ತಾನ ತಂಡ   6 ಅಂಕಗಳೊಂದಿಗೆ  ಪಾಯಿಂಟ್ ಟೇಬಲ್ ನಲ್ಲಿ ಐದನೇ ಸ್ಥಾನಕ್ಕೇರಿದ್ದು ಇದರೊಂದಿಗೆ ಪಾಕ್ ಸೆಮಿಫೈನಲ್‌ ಭರವಸೆ ಜೀವಂತವಾಗಿದೆ.

ಇದನ್ನೂ ಓದಿ- 'ನಾನು ಹೇಳ್ತಾನೆ ಇದ್ದೆ...' ಕುಲದೀಪ್ ಯಾದವ್ ವಿಷಾದ! ರೋಹಿತ್‌ ಶರ್ಮಾ ಆಟಗಾರರ ಮಾತೇ ಕೇಳಿಲ್ವಾ?

ಪಾಕಿಸ್ತಾನ ತಂಡ ನವೆಂಬರ್ 4 ರಂದು ನ್ಯೂಜಿಲೆಂಡ್ ಅನ್ನು ಎದುರಿಸಲಿದೆ. ನವೆಂಬರ್ 11 ರಂದು ಇಂಗ್ಲೆಂಡ್ ವಿರುದ್ಧದ ಪಂದ್ಯದೊಂದಿಗೆ ತಂಡದ ಲೀಗ್ ಅಭಿಯಾನ ಕೊನೆಗೊಳ್ಳಲಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News