ಬಿಗ್‌ ಬಾಸ್ ಕೊಟ್ಟ ಆ ಒಂದು ಟಾಸ್ಕ್‌ ಮನೆ ಮಂದಿಯ ಹಾರ್ಟ್‌ ಬ್ರೇಕ್‌ ಮಾಡಿದೆ!

Bigg Boss Kannada Season 10 : ಬಿಗ್‌ ಬಾಸ್‌ ಮನೆಯಲ್ಲಿ ಈ ವಾರ ಮತ್ತೆ ಎರಡು ತಂಡಗಳನಗನು ಮಾಡಿ ಆಟ ಆಡಿಸಲಾಗುತ್ತಿದೆ. ಹಳೆಯ ವಾರ ಇದ್ದ ಎರಡು ತಂಡಗಳನ್ನೇ ಈ ವಾರವೂ ಮುಂದುವರೆಸಲಾಗಿದೆ. 

Written by - Chetana Devarmani | Last Updated : Nov 8, 2023, 08:36 AM IST
  • ಬಿಗ್‌ ಬಾಸ್‌ ಮನೆ ಮಂದಿ ನಡುವೆ ಮೂಡಿತು ಬಿರುಕು
  • ಟಾಸ್ಕ್‌ ಕೊಟ್ಟು ಹಾರ್ಟ್‌ ಬ್ರೇಕ್‌ ಮಾಡಿದ್ರಾ ಬಿಗ್‌ ಬಾಸ್?‌
  • ತನಿಷಾ ಬೆನ್ನಿಗೆ ಚೂರಿ ಹಾಕಿದ್ರಾ ಡ್ರೋನ್‌ ಪ್ರತಾಪ್? ‌
ಬಿಗ್‌ ಬಾಸ್ ಕೊಟ್ಟ ಆ ಒಂದು ಟಾಸ್ಕ್‌ ಮನೆ ಮಂದಿಯ ಹಾರ್ಟ್‌ ಬ್ರೇಕ್‌ ಮಾಡಿದೆ!  title=
BBK10

Bigg Boss Kannada Season 10 : ಬಿಗ್‌ ಬಾಸ್‌ ಮನೆಯಲ್ಲಿ ಈ ವಾರ ಮತ್ತೆ ಎರಡು ತಂಡಗಳನಗನು ಮಾಡಿ ಆಟ ಆಡಿಸಲಾಗುತ್ತಿದೆ. ಹಳೆಯ ವಾರ ಇದ್ದ ಎರಡು ತಂಡಗಳನ್ನೇ ಈ ವಾರವೂ ಮುಂದುವರೆಸಲಾಗಿದೆ. ತಂಡದ ಕ್ಯಾಪ್ಟನ್‌ಗಳನ್ನು ಬದಲು ಮಾಡಲಾಗಿದೆ. ವಿನಯ್‌ ಕ್ಯಾಪ್ಟನ್‌ ಆಗಿದ್ದ ತಂಡವನ್ನು ಸಿರಿ ಹಾಗೂ ಸಂಗೀತಾ ಕ್ಯಾಪ್ಟನ್‌ ಆಗಿದ್ದ ತಂಡವನ್ನು ಡ್ರೋನ್‌ ಪ್ರತಾಪ್‌ ಮುನ್ನಡೆಸುತ್ತಿದ್ದಾರೆ.

ಎರಡೂ ತಂಡಗಳ ನಡುವೆ ಮೊದಲ ಟಾಸ್ಕ್​ ನಡೆದಿದ್ದು, ಬುದ್ಧಿವಂತಿಕೆಯ ಈ ಆಟದಲ್ಲಿ ಡ್ರೋನ್‌ ಪ್ರತಾಪ್ ತಂಡ ಗೆಲುವು ಸಾಧಿಸಿದೆ. ಎರಡನೇ ಟಾಸ್ಕ್‌ ಆಗಿ ನಾಮಿನೇಷನ್ ಮಾಡಲು ನೀಡಿದ ಕಾರಣವನ್ನು ಗೆಸ್ ಮಾಡುವ ಚಾಲೆಂಜ್‌ ನೀಡಲಾಗಿತು. ನಾಮಿನೇಟ್ ಮಾಡಲು ನೀಡಿದ ಕಾರಣವನ್ನು ಬಿಗ್‌ ಬಾಸ್‌ ಹೇಲುತ್ತಿದ್ದರು. ಅದನ್ನು ಯಾರು ತಮ್ಮ ಬಗ್ಗೆ ಹೇಳಿರಬಹುದೆಂದು ಸ್ಪರ್ಧಿಗಳು ಊಹಿಸಬೇಕಿತ್ತು. ಈ ಗೇಮ್‌ನಲ್ಲಿಯೂ ಪ್ರತಾಪ್‌ ಟೀಂ ಗೆದ್ದಿತು. ಆದರೆ ಮನೆ ಮಂದಿಯ ಮನಸ್ಸು ಮುರಿಯಿತು.

ಇದನ್ನೂ ಓದಿ : BBKS10: ಮುಂದಿನವಾರ ಮನೆಯಿಂದ ಹೊರಬರೋದು ಇವರೇ! ರಕ್ಷಕ್ ಬುಲೆಟ್ ವಾಕ್‌ಬಾಣ ಯಾರತ್ತ? 

ಮೊದಲು ಈಶಾನಿ ಹಾಗೂ ಸಂಗೀತಾ ನಡುವೆ ಮನಸ್ತಾಪ ಶುರುವಾಯಿತು. ತಾವು ಹೇಳದ ಮಾತನ್ನು ಈಶಾನಿ ತಮ್ಮ ಮೇಲೆ ಹೊರಿಸಿದರೆಂದು ಸಂಗೀತಾ ಬೇಜಾರು ಮಾಡಿಕೊಂಡರು. ಈಶಾನಿ ಎಷ್ಟೇ ಪ್ರಯತ್ನಿಸಿದರು ಸಹ ಸಂಗೀತಾ ಮಾತ್ರ ಕನ್ವೆನ್ಸ್‌ ಆಗಲಿಲ್ಲ. 

 

 

ಆ ಬಳಿಕ ಡ್ರೋನ್‌ ಪ್ರತಾಪ್‌ ಅವರು ತನಿಷಾ ಅವರನ್ನು ನಾಮಿನೇಟ್‌ ಮಾಡಿದ್ದು ಎಂದು ತನಿಷಾಗೆ ಗೊತ್ತಾಗಿದೆ. ಇದರಿಂದ ತನಿಷಾ ಕೋಪಗೊಂಡಿದ್ದಾರೆ. ದೀ.. ದೀ.. ಎಂದು ನನ್ನ ಹಿಂದೆ ಹೀಗೆ ಮಾಡಿದ ಎಂದು ತನಿಷಾ ಬೇಸರಗೊಂಡಿದ್ದಾರೆ. ಪ್ರತಾಪ್ ಅವರನ್ನು ಸಮಾಧಾನ ಮಾಡಲು ಹೋಗಿದ್ದಾರೆ. ಆದರೆ ತನಿಷಾ ಏನೇ ಮಾಡಿದರೂ ಸಮಾಧಾನ ಆಗಲಿಲ್ಲ.  

ಇದನ್ನೂ ಓದಿ : ಅಕಸ್ಮಾತ್‌ ನಾನು ಅವಳನ್ನ ಕೊಂದಿದ್ದರೆ... ಐಶ್ವರ್ಯ ರೈ ಕುರಿತು ಸಲ್ಮಾನ್‌ ಶಾಕಿಂಗ್‌ ಹೇಳಿಕೆ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News