Gautam Gambhir : ಲಕ್ನೋ ಸೂಪರ್ಜೈಂಟ್ಸ್ ಮೆಂಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಭಾರತ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ಅವರು, ತಂಡವನ್ನು ತೊರೆದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಮರಳಿದ್ದಾರೆ. ಈ ಕುರಿತು ಸ್ವತಃ ಕ್ರಿಕೆಟಿಗ ಗಂಭೀರ ಭಾವನಾತ್ಮಕ ಸಂದೇಶವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಹೌದು.. ಗೌತಮ್ ಗಂಭೀರ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತೊರೆದಿದ್ದಾರೆ. ಇದೀಗ ಅವರು ಮರಳಿ ಕೆಕೆಆರ್ ಫ್ರಾಂಚೈಸಿಯನ್ನು ಸೇರಿಕೊಂಡಿದ್ದು ತಂಡದ ಮೆಂಟರ್ ಜವಾಬ್ಧಾರಿ ವಹಿಸಿಕೊಳ್ಳಲಿದ್ದಾರೆ. ಈ ಕುರಿತು KKR ಸಹ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡು, ಗಂಭೀರ್ ಅವರನ್ನು ಸ್ವಾಗತಿಸಿದೆ.
ಇದನ್ನೂ ಓದಿ:Venkatesh Iyer: ಎಂಗೇಜ್ ಆದ ಟೀಂ ಇಂಡಿಯಾದ ಸ್ಟಾರ್ ಪ್ಲೇಯರ್...! ಹುಡುಗಿ ಯಾರು ಗೊತ್ತಾ?
ವಿಶ್ವಕಪ್ ಮುಕ್ತಾಯ ಬೆನ್ನಲ್ಲೆ ದೇಶದಲ್ಲಿ ಐಪಿಎಲ್ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಿಸಿಸಿಐ ಈ ಕುರಿತು ಸಿದ್ಧತೆ ನಡೆಸುತ್ತಿದೆ. ಅಲ್ಲದೆ, ಮುಂಬರುವ IPL 2024 ಆವೃತ್ತಿಗೆ ಎಲ್ಲಾ ತಂಡಗಳು ಸಿದ್ದವಾಗಿದ್ದು, ಫ್ರಾಂಚೈಸಿ ಗೆಲ್ಲಲು ತಂಡಗಳಲ್ಲಿ ಮಹತ್ವದ ಬದಲಾವಣೆ ನಡೆಯುತ್ತಿದೆ. ಇದೀಗ LSG ತಂಡದಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಇಷ್ಟು ದಿನ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ಟೀಂ ತೊರೆದಿದ್ದಾರೆ.
I’m back. I’m hungry. I’m No.23. Ami KKR ❤️❤️ @KKRiders pic.twitter.com/KDRneHmzN4
— Gautam Gambhir (@GautamGambhir) November 22, 2023
ಸಧ್ಯ ಗಂಭೀರ್ ಕೆಕೆಆರ್ ತಂಡದ ಮೆಂಟರ್ ಆಗಿ ಆಯ್ಕೆಯಾಗಿದ್ದಾರೆ. ಗಂಭೀರ್ ನೇತೃತ್ವದ ಎಲ್ಎಸ್ಜಿ ತಂಡವು 2022 ರಲ್ಲಿ ಮೊದಲ ಬಾರಿಗೆ ಐಪಿಎಲ್ನಲ್ಲಿ ಭಾಗವಹಿಸಿತ್ತು. ಸತತ ಎರಡು ಬಾರಿ ಅಗ್ರ 4 ರಲ್ಲಿ ಸ್ಥಾನ ಪಡೆದಿತ್ತು, ಆದರೆ ಚಾಂಪಿಯನ್ ಆಗುವಲ್ಲಿ ವಿಫಲವಾಗಿತ್ತು. ಆದರೆ ಗಂಭೀರ್ ಉಪಸ್ಥಿತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 2012 ಮತ್ತು 2014 ರಲ್ಲಿ ಎರಡು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿತ್ತು.
ಇದನ್ನೂ ಓದಿ: ವಿಶ್ವಕಪ್ ಸೋಲಿನ ಬಳಿಕ ಪ್ರೊ ಕಬ್ಬಡ್ಡಿ ಲೀಗ್ ನಲ್ಲಿ ಆಡುತ್ತಾರೆಯಂತೆ ಈ ಫಾಸ್ಟ್ ಬೌಲರ್ !
ಇಷ್ಟು ದಿನ ವಿಶ್ವಕಪ್ ಅಬ್ಬರ ಜೋರಾಗಿತ್ತು. ಸಧ್ಯ ಐಪಿಎಲ್ ಹಾವಳಿ ಹೆಚ್ಚಲಿದೆ. ಡಿಸೆಂಬರ್ 19 ರಂದು ಹರಾಜು ಪ್ರಕ್ರಿಯೆ ನಡೆಯಲಿದೆ. ಆದ್ರೆ ಅದಕ್ಕೂ ಮೊದಲು ತಂಡಗಳಲ್ಲಿ ಭಾರಿ ಬದಲಾವಣೆ ನಡಯುತ್ತಿದ್ದು, ಕುತೂಹಲ ಹೆಚ್ಚಿಸುತ್ತಿದೆ. ಅಲ್ಲದೆ, ಈ ಬಾರಿ ಕಪ್ ಗೆಲ್ಲಲು ಬಲಿಷ್ಠ ತಂಡ ಕಟ್ಟಲು ಎಲ್ಲಾ ಟೀಂಗಳು ಸಿದ್ಧವಾಗಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.