ಗಾಂಧಿ ಕುಟುಂಬವಿಲ್ಲದ ಕಾಂಗ್ರೆಸ್ ಒಡೆದು ಹೋಗಲಿದೆ- ಲಾಲ್ ಬಹದೂರ್ ಶಾಸ್ತ್ರಿ ಮಗ

ಕಾಂಗ್ರೆಸ್ ಪಕ್ಷದಲ್ಲಿ ಸದ್ಯ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುತ್ರ ಅನಿಲ್ ಶಾಸ್ತ್ರಿ ವ್ಯಕ್ತಪಡಿಸಿದ್ದಾರೆ. ಗಾಂಧಿ ಕುಟುಂಬವಿಲ್ಲದ ಕಾಂಗ್ರೆಸ್ ಪಕ್ಷ ಒಡೆದುಹೋದಲಿದೆ ಎಂದು ಅವರು ಹೇಳಿದ್ದಾರೆ.ಆ ಮೂಲಕ ಪಕ್ಷದ ಭವಿಷ್ಯಕ್ಕಾಗಿ ಗಾಂಧಿ ಕುಟುಂಬದ ಸದಸ್ಯರು ಅಗತ್ಯ ಎಂದು ಹೇಳಿದರು.

Last Updated : Jul 19, 2019, 04:29 PM IST
ಗಾಂಧಿ ಕುಟುಂಬವಿಲ್ಲದ ಕಾಂಗ್ರೆಸ್ ಒಡೆದು ಹೋಗಲಿದೆ- ಲಾಲ್ ಬಹದೂರ್ ಶಾಸ್ತ್ರಿ ಮಗ  title=
Photo courtesy: ANI

ನವದೆಹಲಿ: ಕಾಂಗ್ರೆಸ್ ಪಕ್ಷದಲ್ಲಿ ಸದ್ಯ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುತ್ರ ಅನಿಲ್ ಶಾಸ್ತ್ರಿ ವ್ಯಕ್ತಪಡಿಸಿದ್ದಾರೆ. ಗಾಂಧಿ ಕುಟುಂಬವಿಲ್ಲದ ಕಾಂಗ್ರೆಸ್ ಪಕ್ಷ ಒಡೆದುಹೋಗಲಿದೆ ಎಂದು ಅವರು ಹೇಳಿದ್ದಾರೆ.ಆ ಮೂಲಕ ಪಕ್ಷದ ಭವಿಷ್ಯಕ್ಕಾಗಿ ಗಾಂಧಿ ಕುಟುಂಬದ ಸದಸ್ಯರು ಅಗತ್ಯ ಎಂದು ಹೇಳಿದರು.

ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯಲು ಸಿದ್ಧರಿಲ್ಲದ ಕಾರಣ, ಪಕ್ಷವು ಪ್ರಸ್ತುತ ನಾಯಕತ್ವದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಹಿನ್ನಲೆಯಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಅವರು ಹೇಳಿದರು. ಗಾಂಧಿ ಕುಟುಂಬದವರಲ್ಲದೆ ಹೊರಗಿನವರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಕೆಲವರು ಒಪ್ಪಬಹುದು, ಇನ್ನು ಕೆಲವರು ಒಪ್ಪದಿರಬಹುದು ಇದರಿಂದ ಪಕ್ಷವು ವಿಭಜನೆಗೊಳ್ಳುವ ಸಾಧ್ಯತೆ ಹೆಚ್ಚು ಎಂದು ಹೇಳಿದರು.

'ಈಗ ನೋಡಿ ಮಮತಾ ಕಾಂಗ್ರೆಸ್ (ಟಿಎಂಸಿ), ಶರದ್ ಪವಾರ್ ಕಾಂಗ್ರೆಸ್ (ಎನ್‌ಸಿಪಿ), ಜಗನ್ಮೋಹನ್ ಕಾಂಗ್ರೆಸ್ (ವೈಎಸ್‌ಆರ್‌ಸಿ) ಇದೆ. ಆದ್ದರಿಂದ ಬಲವಾದ ನಾಯಕತ್ವ ಇಲ್ಲದಿದ್ದರೆ, ರಾಜ್ಯಗಳಲ್ಲಿ ಪ್ರಾದೇಶಿಕ ಕಾಂಗ್ರೆಸ್ ಆಗಿ ಹೊರಹೊಮ್ಮಿದರೆ ಅದರಲ್ಲಿ ಅಚ್ಚರಿಯಿಲ್ಲ...ಅದು ಹರಿಯಾಣ, ಮಧ್ಯಪ್ರದೇಶ, ಅಥವಾ ಮಹಾರಾಷ್ಟ್ರವಾಗಿರಲಿ. ಸದ್ಯ ಪ್ರಿಯಾಂಕಾ ಗಾಂಧಿಯನ್ನು ಹೊರತುಪಡಿಸಿ ಬೇರೆ ಯಾರೂ ಇಲ್ಲ, ಅವರು ಹೆಚ್ಚು ಸ್ವೀಕಾರಾರ್ಹರು. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಕರೆದುಕೊಂಡು ಹೋಗುವ ಸಾಮರ್ಥ್ಯ ಅವರಿಗೆ ಇದೆ ಎಂದು ನಾನು ನಂಬುತ್ತೇನೆ. ಅವರನ್ನು ಫಾಲೋ ಮಾಡುವ ವರ್ಗವೊಂದು ಇದೆ' ಎಂದು ತಿಳಿಸಿದರು.  

ರಾಹುಲ್ ಗಾಂಧಿ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಕಳಪೆ ಪ್ರದರ್ಶನ ನೀಡಿದ ಹಿನ್ನಲೆಯಲ್ಲಿ ಸೋಲಿನ ಜವಾಬ್ದಾರಿಯನ್ನು ಹೊತ್ತುಕೊಂಡು ಅವರು ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದಾದ ನಂತರ ಸಿಡಬ್ಲ್ಯೂಸಿ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಹುಡುಕಾಟ ನಡೆಸಿದ್ದಾದರೂ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವಲ್ಲಿ ವಿಫಲವಾಗಿತ್ತು. 

 

Trending News