IQ Test : ಸಿಂಹದ ಮುಖದಲ್ಲಿ ಅಡಗಿದೆ ಇಲಿ.. ಚುರುಕು ಬುದ್ಧಿಯಿದ್ದರೆ ಉತ್ತರಿಸಲು 5 ಸೆಕೆಂಡ್‌ ಸಾಕು!

Optical Illusion: ಈ ಚಿತ್ರದಲ್ಲಿ ನೋಡಿದ ತಕ್ಷಣ ಮೊದಲು ಸಿಂಹವು ಗೋಚರಿಸುತ್ತದೆ. ಸಿಂಹದ ಈ ಮುಖದಲ್ಲಿ ಒಂದು ಇಲಿ ಅಡಗಿದೆ. ನೀವು 5 ಸೆಕೆಂಡುಗಳಲ್ಲಿ ಈ ಬಚ್ಚಿಟ್ಟುಕೊಂಡ ಇಲಿಯನ್ನು ಹುಡುಕಬಲ್ಲಿರಾ? 

Written by - Chetana Devarmani | Last Updated : Nov 27, 2023, 09:40 AM IST
  • ಸಿಂಹದ ಮುಖದಲ್ಲಿ ಅಡಗಿದೆ ಇಲಿ
  • ಬಚ್ಚಿಟ್ಟುಕೊಂಡ ಇಲಿಯನ್ನು ಹುಡುಕಬಲ್ಲಿರಾ?
  • ನಿಮ್ಮ ಬಳಿಯಿದೆ ಕೇವಲ 5 ಸೆಕೆಂಡ್‌ ಕಾಲಾವಕಾಶ
IQ Test : ಸಿಂಹದ ಮುಖದಲ್ಲಿ ಅಡಗಿದೆ ಇಲಿ.. ಚುರುಕು ಬುದ್ಧಿಯಿದ್ದರೆ ಉತ್ತರಿಸಲು 5 ಸೆಕೆಂಡ್‌ ಸಾಕು! title=
Optical Illusion

IQ Test Images : ಪ್ರತಿದಿನ Optical Illusion ನ ಅನೇಕ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಈ ಚಿತ್ರಗಳ ಸಹಾಯದಿಂದ ನೀವು ನಿಮ್ಮ ಮೆದುಳಿಗೆ ಕೆಲಸ ನೀಡಬಹುದು. ಕೆಲವು ಚಿತ್ರಗಳಲ್ಲಿ ಅಡಗಿರುವ ಸಂಗತಿಗಳನ್ನು ಹುಡುಕಬೇಕಿರುತ್ತೆ, ಇನ್ನು ಕೆಲವು ಚಿತ್ರಗಳಲ್ಲಿ ಅಡಗಿರುವ ತಪ್ಪುಗಳನ್ನು ಹುಡುಕಬೇಕಾಗುತ್ತದೆ. ಕೆಲವು ಚಿತ್ರಗಳನ್ನು ನೋಡಿ ನಿಮಗೆ ಏನು ಕಾಣುತ್ತೆ ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವವನ್ನು ತಿಳಿಯಬಹುದು.  

ಅನೇಕ ಬಾರಿ, ಕೆಲವು ವಿಷಯಗಳು ನಮ್ಮ ಕಣ್ಣ ಮುಂದೆ ಇದ್ದರೂ ನಮಗೆ ಅವುಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ಅಂತಹ ಅನೇಕ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಅವುಗಳಲ್ಲಿ ಅಡಗಿರುವ ಒಗಟನ್ನು ಕಂಡುಹಿಡಿಯಲು ನಾವು ಗಂಟೆಗಳ ಕಾಲ ಪ್ರಯತ್ನಿಸುತ್ತೇವೆ. ಇಂದು ಈ ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ನಮ್ಮ ಮೆದುಳಿಗೆ ವ್ಯಾಯಾಮ ನೀಡುತ್ತವೆ. 

ಇದನ್ನೂ ಓದಿ: Viral Video: ರೈಲ್ವೆ ಹಳಿ ಮೇಲೆ ರೀಲ್ಸ್ ಮಾಡಲು ಹೋದನಿಗೆ ಏನಾಯ್ತು ಗೊತ್ತಾ? ಭಯಾನಕ ವಿಡಿಯೋ 

ಈ ಚಿತ್ರದಲ್ಲಿ ಸಿಂಹದ ಮುಖ ಗೋಚರಿಸುತ್ತದೆ. ಆದರೆ ಅದರಲ್ಲಿ ಇನ್ನೊಂದು ಪ್ರಾಣಿ ಅಡಗಿದೆ. ಅದನ್ನು ನೀವು 5 ಸೆಕೆಂಡುಗಳಲ್ಲಿ ಕಂಡುಹಿಡಿಯಬೇಕು. 

Lion Face

ಮತ್ತೊಂದು ಪ್ರಾಣಿ ಸಿಕ್ಕಿದೆಯಾ? ಇಲ್ಲಿಯವರೆಗೆ ನೀವು ಚಿತ್ರದಲ್ಲಿ ಮರೆಮಾಡಲಾಗಿರುವ ಎರಡನೇ ಪ್ರಾಣಿಯನ್ನು ಕಂಡುಹಿಡಿದಿಲ್ಲ ಅಂತಾದರೆ, ಕೊಂಚ ಲಕ್ಷಗೊಟ್ಟು ಈ ಫೋಟೋ ನೋಡಿ. ನೀವು ಅಡಿಗಿರುವ ಆ ಇಲಿಯನ್ನು ಕಂಡುಹಿಡಿಯಬಹುದು. ಈಗಲೂ ಸಾಧ್ಯವಾಗದಿದ್ದರೆ, ಈ ಒಗಟು ನಿಮಗೆ ಸುಲಭವಾಗುವಂತೆ ಮಾಡೋಣ.. ಚಿತ್ರದಲ್ಲಿ ಸಿಂಹದ ಮುಖದ ಮಧ್ಯ ಭಾಗದಲ್ಲಿ ಎಲ್ಲೋ ಒಂದು ಇಲಿಯನ್ನು ಮರೆಮಾಡಲಾಗಿದೆ, ಅದನ್ನು ನೀವು ಕಂಡುಹಿಡಿಯಬೇಕು.

ಇಲಿ ಸಿಕ್ಕಿತೇ? ಚಿತ್ರವನ್ನು ಹೆಚ್ಚು ಎಚ್ಚರಿಕೆಯಿಂದ ನೋಡಲು ಪ್ರಯತ್ನಿಸಿ, ನೀವು ಇಲಿಯನ್ನು ಕಾಣಬಹುದು. ಇನ್ನೂ ಸಿಗದಿದ್ದರೆ ಈ ಚಿತ್ರವನ್ನು ತಲೆಕೆಳಗಾಗಿ ನೋಡಿ. ಇಷ್ಟೊತ್ತಿಗೆ ನಿಮಗೆ ಉತ್ತರ ಸಿಕ್ಕಿರಬಹುದು. 

optical illusions

ವಾಸ್ತವವಾಗಿ, ಆಪ್ಟಿಕಲ್ ಇಲ್ಯೂಷನ್‌ ಒಗಟುಗಳನ್ನು ಪರಿಹರಿಸಲು, ನಿಮ್ಮ ದೃಷ್ಟಿ ಕೌಶಲ್ಯಗಳು ತುಂಬಾ ಉತ್ತಮವಾಗಿರಬೇಕು. ನಿಮ್ಮ ಬುದ್ಧಿ, ದೃಷ್ಟಿ ಎರಡೂ ತೀಕ್ಷ್ಣವಾಗಿದ್ದರೆ 5 ಸೆಕೆಂಡುಗಳಲ್ಲಿ ಚಿತ್ರದಲ್ಲಿ ಅಡಗಿರುವ ಇಲಿಯನ್ನು ನೀವು ಪತ್ತೆ ಮಾಡುತ್ತೀರಿ. 

ಇದನ್ನೂ ಓದಿ: ನಿಮ್ಮ ಬುದ್ದಿ ಶಕ್ತಿಗೆ ನಮ್ಮ ಚಾಲೆಂಜ್: ಈ ಬಾಳೆ ಹಣ್ಣುಗಳ ಮಧ್ಯ ಹಾವು ಅಡಗಿದೆ..! ಅದು ಎಲ್ಲಿದೆ..? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News