ಒಂದೇ ತಿಂಗಳಲ್ಲಿ ಐದನೇ ಚಿನ್ನದ ಪದಕ ಗೆದ್ದ ಓಟದ ರಾಣಿ ಹಿಮಾ ದಾಸ್ ..!

 ​ಶನಿವಾರದಂದು ಜೆಕ್ ರಿಪಬ್ಲಿಕ್ ನ ಪ್ರೇಗ್ ನಲ್ಲಿ  ನಡೆದ 400 ಮೀಟರ್ ಓಟವನ್ನು ಗೆದ್ದ ಹಿಮಾ ದಾಸ್ ತನ್ನ ಐದನೇ ಚಿನ್ನದ ಪದಕವನ್ನು ಗೆದ್ದಿದ್ದಾರೆ.ಅವರು ಈ ಓಟವನ್ನು ಪೂರ್ಣಗೊಳಿಸಲು 52.09 ಸೆಕೆಂಡುಗಳನ್ನು ತೆಗೆದುಕೊಂಡರು. ಆ ಮೂಲಕ ಈ ಋತುವಿನಲ್ಲಿ ಇದು ಅವರ ಅತ್ಯುತ್ತಮ ಸಾಧನೆಯಾಗಿದೆ. ಆದಾಗ್ಯೂ, ಹಿಮಾ ದಾಸ್ 50.79 ಸೆಕೆಂಡುಗಳ ವೈಯಕ್ತಿಕ ಅತ್ಯುತ್ತಮ ದಾಖಲೆಯನ್ನು ಕಳೆದ ವರ್ಷ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಅವರು ದಾಖಲಿಸಿದ್ದಾರೆ. 

Last Updated : Jul 21, 2019, 10:54 AM IST
ಒಂದೇ ತಿಂಗಳಲ್ಲಿ ಐದನೇ ಚಿನ್ನದ ಪದಕ ಗೆದ್ದ ಓಟದ ರಾಣಿ ಹಿಮಾ ದಾಸ್ ..! title=
photo courtesy: twitter

ನವದೆಹಲಿ: ​ಶನಿವಾರದಂದು ಜೆಕ್ ರಿಪಬ್ಲಿಕ್ ನ ಪ್ರೇಗ್ ನಲ್ಲಿ  ನಡೆದ 400 ಮೀಟರ್ ಓಟವನ್ನು ಗೆದ್ದ ಹಿಮಾ ದಾಸ್ ತನ್ನ ಐದನೇ ಚಿನ್ನದ ಪದಕವನ್ನು ಗೆದ್ದಿದ್ದಾರೆ.ಅವರು ಈ ಓಟವನ್ನು ಪೂರ್ಣಗೊಳಿಸಲು 52.09 ಸೆಕೆಂಡುಗಳನ್ನು ತೆಗೆದುಕೊಂಡರು. ಆ ಮೂಲಕ ಈ ಋತುವಿನಲ್ಲಿ ಇದು ಅವರ ಅತ್ಯುತ್ತಮ ಸಾಧನೆಯಾಗಿದೆ. ಆದಾಗ್ಯೂ, ಹಿಮಾ ದಾಸ್ 50.79 ಸೆಕೆಂಡುಗಳ ವೈಯಕ್ತಿಕ ಅತ್ಯುತ್ತಮ ದಾಖಲೆಯನ್ನು ಕಳೆದ ವರ್ಷ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಅವರು ದಾಖಲಿಸಿದ್ದಾರೆ. 

19 ರ ಹರೆಯದ ಹಿಮಾದಾಸ್ ಕೇವಲ ಒಂದೇ ತಿಂಗಳಲ್ಲಿ ಐದನೇ ಚಿನ್ನ ಗೆದ್ದ ಸಾಧನೆ ಮಾಡಿದರು. ಇದಕ್ಕೂ 200 ಮೀ ಟ್ಯಾಬರ್ ಅಥ್ಲೆಟಿಕ್ ಮೀಟ್‌, ಕ್ಲಾಡೋ ಅಥ್ಲೆಟಿಕ್ ಮೀಟ್, ಕುಂಟೊ ಅಥ್ಲೆಟಿಕ್ಸ್ ಮೀಟ್, ಮತ್ತು ಪೊಜ್ನಾನ್ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಅವರು ಮೂರು ಚಿನ್ನ ಗೆದ್ದಿದ್ದರು.

ಜುಲೈ 2 ರಂದು ನಡೆದ ತನ್ನ ಮೊದಲ ಸ್ಪರ್ಧಾತ್ಮಕ 200 ಮೀ ಓಟದಲ್ಲಿ, ಹಿಮಾ 23.65 ಸೆಕೆಂಡುಗಳನ್ನು ಗಳಿಸಿ ಪೋಲೆಂಡ್‌ನ ಪೊಜ್ನಾನ್ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಚಿನ್ನ ಗೆದ್ದರು. ನಂತರ ಜುಲೈ 8 ರಂದು ಪೋಲೆಂಡ್‌ನಲ್ಲಿ ನಡೆದ ಕುಟ್ನೋ ಅಥ್ಲೆಟಿಕ್ಸ್ ಮೀಟ್‌ನಲ್ಲಿ ತನ್ನ ಎರಡನೇ 200 ಮೀ ಚಿನ್ನ ಗೆದ್ದರು. ಜುಲೈ 13 ರಂದು, ಜೆಕ್ ಗಣರಾಜ್ಯದಲ್ಲಿ ನಡೆದ ಕ್ಲಾಡ್ನೊ ಅಥ್ಲೆಟಿಕ್ಸ್ ಮೀಟ್‌ನಲ್ಲಿ 23.43 ಸೆಕೆಂಡುಗಳ ಸಮಯದೊಂದಿಗೆ ತನ್ನ ಮೂರನೇ 200 ಮೀ ಚಿನ್ನ ಗೆದ್ದಿದ್ದಾರೆ.

ಪುರುಷರ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಮುಹಮ್ಮದ್ ಅನಸ್ 400 ಮೀ ಓಟದಲ್ಲಿ 45.40 ಸೆಕೆಂಡುಗಳಲ್ಲಿ ಚಿನ್ನದ ಪದಕ ಗೆದ್ದರು. ಜುಲೈ 13 ರಂದು ನಡೆದ ಪುರುಷರ 400 ಮೀ ಓಟದಲ್ಲಿ ಅನಾಸ್ 45.21 ಸೆಕೆಂಡುಗಳ ಅಂತರದಲ್ಲಿ ಕ್ಲಾಡ್ನೊದಲ್ಲಿ ಅಗ್ರಸ್ಥಾನ  ಗಳಿಸಿದರು.

Trending News