ಬೋಳು ತಲೆಯಲ್ಲಿಯೂ ಕೂದಲು ಹುಟ್ಟುವಂತೆ ಮಾಡುತ್ತದೆ ಈ ರಸ ! ಕೂದಲು ಉದುರುವ ಸಮಸ್ಯೆಗೆ ಹೇಳಿ ಬೈ ಬೈ !

ಕೂದಲು ಉದುರುವ  ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಕ್ಷಣದಿಂದಲೇ ಕೂದಲಿಗೆ ಈರುಳ್ಳಿ ರಸವನ್ನು  ಹಚ್ಚಬಹುದು.

Written by - Ranjitha R K | Last Updated : Dec 13, 2023, 02:34 PM IST
  • ಕೂದಲ ಬೆಳವಣಿಗೆಗೆ ಈರುಳ್ಳಿ ರಸ
  • ಈರುಳ್ಳಿ ರಸವನ್ನು ಹೀಗೆ ತಯಾರಿಸಿಕೊಳ್ಳಬಹುದು
  • ಈ ಎಣ್ಣೆಯನ್ನು ತಯಾರಿಸಲು ಸುಲಭವಾದ ಮಾರ್ಗ
ಬೋಳು ತಲೆಯಲ್ಲಿಯೂ ಕೂದಲು  ಹುಟ್ಟುವಂತೆ ಮಾಡುತ್ತದೆ ಈ ರಸ ! ಕೂದಲು ಉದುರುವ ಸಮಸ್ಯೆಗೆ ಹೇಳಿ ಬೈ ಬೈ !  title=

ಬೆಂಗಳೂರು : ಕೂದಲಿಗೆ ಸರಿಯಾದ ಪೋಷಣೆ ಸಿಗದಿದ್ದರೆ ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಕೂದಲು ಉದುರುವುದು ಸಾಮಾನ್ಯವಾಗಿ ಕಾಡುವ ಸಮಸ್ಯೆ. ಕೂದಲು ಉದುರಲು ಆರಂಭವಾದಾಗ ಕೂದಲು ತೆಳ್ಳಗಾಗುತ್ತದೆ. ಕೂದಲು ಉದುರುವ ಸಮಸ್ಯೆ ಅತಿರೇಕಕ್ಕೆ ಹೋದಾಗ ಉದುರಿದ ಜಾಗದಲ್ಲಿ ಮತ್ತೆ ಕೂದಲು ಬೆಳೆಯುವುದೇ ಇಲ್ಲ. ಆಗಲೇ ಬೋಳು ತಲೆಯ ಸಮಸ್ಯೆ ಎದುರಾಗುತ್ತದೆ. ನೀವು ಕೂಡಾ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಕ್ಷಣದಿಂದಲೇ ಕೂದಲಿಗೆ ಈರುಳ್ಳಿ ರಸವನ್ನು  ಹಚ್ಚಬಹುದು.

ಕೂದಲಿಗೆ ಈರುಳ್ಳಿ ರಸದ ಪ್ರಯೋಜನ :
ಈರುಳ್ಳಿ ರಸವು ಕೂದಲಿನ ಬೆಳವಣಿಗೆಯನ್ನು  ಹೆಚ್ಚಿಸುವ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ . ಹೆಚ್ಚಿನ ಸಲ್ಫರ್ ಅಂಶದಿಂದಾಗಿ, ಕೂದಲಿನ ಬೇರುಗಳನ್ನು ಇದು ಬಲಪಡಿಸುತ್ತದೆ. ಇದಲ್ಲದೆ ಈರುಳ್ಳಿಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳು ಕೂದಲು ಕಿರಿ ವಯಸ್ಸಿನಲ್ಲಿ ಬಿಳಿಯಾಗುವುದನ್ನು ತಡೆಯುತ್ತದೆ.

ಇದನ್ನೂ ಓದಿ : ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಈ ಪಾನೀಯ ಕುಡಿದರೆ ಶಾಶ್ವತವಾಗಿ ಕಪ್ಪಾಗುವುದು ಬಿಳಿ ಕೂದಲು !

ಈರುಳ್ಳಿ ರಸ:
ಒಂದರಿಂದ ಎರಡು ಈರುಳ್ಳಿ ತೆಗೆದುಕೊಂಡು ಅದನ್ನು ನೆತ್ತಿಯ ಮೇಲೆ ಚೆನ್ನಾಗಿ ಉಜ್ಜಿಕೊಳ್ಳಿ. ಅಥವಾ ಈರುಳ್ಳಿ ತುರಿದ ನಂತರ ಅದನ್ನು ಬಟ್ಟೆಯಲ್ಲಿ ಕಟ್ಟಿ, ಹಿಂಡಿ ರಸವನ್ನು ತೆಗೆಯಿರಿ. ಹೀಗೆ ತೆಗೆದುಕೊಂಡ ರಸವನ್ನು ತಲೆ ಮತ್ತು ಕೂದಲಿನ ಬುಡಕ್ಕೆ ಹಚ್ಚಿ.

ಕೂದಲಿಗೆ ಈರುಳ್ಳಿ ರಸವನ್ನು ಕೂದಲಿಗೆ ನೇರವಾಗಿ ಹಚ್ಚಬಹುದು. ಕೂದಲಿಗೆ ಸ್ನಾನ ಮಾಡುವ ಅರ್ಧ ಗಂಟೆ ಮೊದಲು ಈರುಳ್ಳಿ ರಸವನ್ನು ಕೂದಲಿಗೆ ಹಚ್ಚಿ ನಂತರ ಸ್ನಾನ ಮಾಡಿ. 

ಈರುಳ್ಳಿ ರಸವನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಈರುಳ್ಳಿ ಎಣ್ಣೆಯನ್ನು ತಯಾರಿಸಬಹುದು. ಹೀಗೆ ತಯಾರಿಸಿಕೊಂಡ ಈರುಳ್ಳಿ ಎಣ್ಣೆಯನ್ನು ಕೂದಲಿಗೆ ಹಚ್ಚಿ. 

ಇದನ್ನೂ ಓದಿ : ವಿದೇಶಿಯರಿಗೂ ಬಲು ಪ್ರಿಯ ಪನೀರ್‌ನ ಈ 8 ಫೇಮಸ್ ರೆಸಿಪೀಸ್

ಈ ಎಣ್ಣೆಯನ್ನು ತಯಾರಿಸಲು ಸುಲಭವಾದ ಮಾರ್ಗವೆಂದರೆ :
1.  ಈರುಳ್ಳಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ.
2. ಬಾಣಲೆಯಲ್ಲಿ ತೆಂಗಿನ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.
3. ಈ ಎಣ್ಣೆಗೆ ಕತ್ತರಿಸಿದ ಈರುಳ್ಳಿ ಸೇರಿಸಿ ಮತ್ತು ಹುರಿಯಿರಿ.
4. ಈರುಳ್ಳಿ ಹುರಿದ ನಂತರ ಗ್ಯಾಸ್ ಆಫ್ ಮಾಡಿ.
5. ಈಗ ಈ ಎಣ್ಣೆಯನ್ನು ತಣ್ಣಗಾಗಲು ಬಿಡಿ
6. ಇಷ್ಟಾಯಿತು ಎಂದಾದ ಮೇಲೆ ಈರುಳ್ಳಿ ಎಣ್ಣೆ ಸಿದ್ಧವಾಯಿತು ಎಂದರ್ಥ.
7. ಕೂದಲನ್ನು ತೊಳೆಯುವ ಅರ್ಧ ಗಂಟೆ ಮೊದಲು ಈ ಎಣ್ಣೆಯನ್ನು  ಹಚ್ಚಬಹುದು.

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News