ಧೋನಿ ಜೆರ್ಸಿ ‘ನಂಬರ್ 7’ಗೆ ನಿವೃತ್ತಿ.. ಭವಿಷ್ಯದಲ್ಲಿ ಈ ಆಟಗಾರನಿಗೂ ಸಿಗಲಿದೆ ಇದೇ ಗೌರವ

MS Dhoni jersey number 7 retirement: ಇಂಡಿಯನ್ ಎಕ್ಸ್‌ಪ್ರೆಸ್‌ ವರದಿಯ ಪ್ರಕಾರ, ಬಿಸಿಸಿಐ ಯುವ ಭಾರತೀಯ ಆಟಗಾರರಿಗೆ ಇನ್ನು ಮುಂದೆ 7 ನೇ ಸಂಖ್ಯೆಯ ಜೆರ್ಸಿಗಾಗಿ ನೀಡುವುದಿಲ್ಲ ಎಂದು ತಿಳಿಸಿದೆ. 2017 ರಲ್ಲಿ ತೆಂಡೂಲ್ಕರ್ ಅವರ ಜೆರ್ಸಿ ನಂಬರ್ 10 ಅನ್ನು ಪಟ್ಟಿಯಿಂದ ತೆಗೆದುಹಾಕಲಾಯಿತು.

Written by - Bhavishya Shetty | Last Updated : Dec 15, 2023, 03:44 PM IST
    • ಎಂಎಸ್ ಧೋನಿ ‘ನಂಬರ್ 7’ ಜೆರ್ಸಿ ನಿವೃತ್ತಿ
    • ಇದು ಧೋನಿಯ ಆಟಕ್ಕೆ ನೀಡುವ ವಿಶೇಷ ಗೌರವ ಎಂದ ಬಿಸಿಸಿಐ
    • ಜೆರ್ಸಿ ಸಂಖ್ಯೆ 7 ಅನ್ನು ಯಾವುದೇ ಭಾರತೀಯ ಕ್ರಿಕೆಟಿಗರಿಗೆ ನೀಡಲಾಗುವುದಿಲ್ಲ
ಧೋನಿ ಜೆರ್ಸಿ ‘ನಂಬರ್ 7’ಗೆ ನಿವೃತ್ತಿ.. ಭವಿಷ್ಯದಲ್ಲಿ ಈ ಆಟಗಾರನಿಗೂ ಸಿಗಲಿದೆ ಇದೇ ಗೌರವ  title=
dhoni jersey number 7 retirement

MS Dhoni Jersey N 7 Retire: ಶ್ರೇಷ್ಠ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಜೆರ್ಸಿ ಸಂಖ್ಯೆ 10 ಬಳಿಕ, ಎಂಎಸ್ ಧೋನಿ ಅವರ ‘ನಂಬರ್ 7’ ಜೆರ್ಸಿಯನ್ನು ನಿವೃತ್ತಿಗೊಳಿಸಲು ಬಿಸಿಸಿಐ ನಿರ್ಧರಿಸಿದೆ. ಇನ್ಮುಂದೆ ಜೆರ್ಸಿ ಸಂಖ್ಯೆ 7 ಅನ್ನು ಯಾವುದೇ ಭಾರತೀಯ ಕ್ರಿಕೆಟಿಗರಿಗೆ ನೀಡಲಾಗುವುದಿಲ್ಲ ಎಂಬುದು ಇದರ ಅರ್ಥ.

ಸಾಮಾನ್ಯವಾಗಿ ಕ್ರಿಕೆಟಿಗನಿಗೆ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡುವ ಮೊದಲು ತನ್ನ ಆದ್ಯತೆಯ ಜರ್ಸಿ ಸಂಖ್ಯೆಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನೀಡಲಾಗುತ್ತದೆ. ಐಸಿಸಿ ನಿಯಮಗಳ ಪ್ರಕಾರ, ಆಟಗಾರನು ಯಾವುದೇ ಸಂಖ್ಯೆಯನ್ನು ಬೇಕಾದರೂ ಆಯ್ಕೆ ಮಾಡಬಹುದು. ಆದರೆ ಭಾರತದಲ್ಲಿ ಅದಕ್ಕೆ ಅವಕಾಶ ಇಲ್ಲ.

ಇದನ್ನೂ ಓದಿ: ದೀಪಿಕಾ ಪಡುಕೋಣೆ ತಿರುಮಲ ಶ್ರೀವಾರಿ ಸೇವೆಯ ವಿಡಿಯೋ ವೈರಲ್

ಇಂಡಿಯನ್ ಎಕ್ಸ್‌ಪ್ರೆಸ್‌ ವರದಿಯ ಪ್ರಕಾರ, ಬಿಸಿಸಿಐ ಯುವ ಭಾರತೀಯ ಆಟಗಾರರಿಗೆ ಇನ್ನು ಮುಂದೆ 7 ನೇ ಸಂಖ್ಯೆಯ ಜೆರ್ಸಿಗಾಗಿ ನೀಡುವುದಿಲ್ಲ ಎಂದು ತಿಳಿಸಿದೆ. 2017 ರಲ್ಲಿ ತೆಂಡೂಲ್ಕರ್ ಅವರ ಜೆರ್ಸಿ ನಂಬರ್ 10 ಅನ್ನು ಪಟ್ಟಿಯಿಂದ ತೆಗೆದುಹಾಕಲಾಯಿತು.

“ಯುವ ಆಟಗಾರರು ಮತ್ತು ಪ್ರಸ್ತುತ ಭಾರತೀಯ ತಂಡದ ಆಟಗಾರರಿಗೆ ಎಂಎಸ್ ಧೋನಿಯ ಜೆರ್ಸಿ ನಂಬರ್ 7ನ್ನು ಆಯ್ಕೆ ಮಾಡದಂತೆ ಮನವಿ ಮಾಡಲಾಗಿದೆ. ಇದು ಧೋನಿಯ ಆಟಕ್ಕೆ ನೀಡುವ ವಿಶೇಷ ಗೌರವ” ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಧೋನಿ ನಿವೃತ್ತಿಯ 3 ವರ್ಷಗಳ ನಂತರ ಬಿಸಿಸಿಐ ಮಹತ್ವದ ನಿರ್ಧಾರ:

ಆಗಸ್ಟ್ 2020 ರಲ್ಲಿ ಧೋನಿ ನಿವೃತ್ತಿ ಪಡೆದುಕೊಂಡಿದ್ದರು, ಇದಾದ ಮೂರೂವರೆ ವರ್ಷಗಳ ನಂತರ ಈ ನಿರ್ಧಾರ ಹೊರಬಂದಿದೆ. ಕೊನೆಯ ಬಾರಿಗೆ ಇಂಗ್ಲೆಂಡ್‌’ನ ಮ್ಯಾಂಚೆಸ್ಟರ್‌’ನಲ್ಲಿ ನ್ಯೂಜಿಲೆಂಡ್ ವಿರುದ್ಧದ 2019 ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತದ ಜೆರ್ಸಿ ನಂಬರ್ 7 ಅನ್ನು ಧರಿಸಿ ಧೋನಿ ಮೈದಾನಕ್ಕಿಳಿದಿದ್ದರು. ಅಂದಹಾಗೆ ವೈಟ್ ಬಾಲ್ ಮಾದರಿಯಲ್ಲಿ 3 ಐಸಿಸಿ ಪಂದ್ಯಾವಳಿಗಳನ್ನು ಗೆದ್ದ ಏಕೈಕ ನಾಯಕ.

ದಕ್ಷಿಣ ಆಫ್ರಿಕಾದಲ್ಲಿ ನಡೆದ 2007 ರ ಉದ್ಘಾಟನಾ T20 ವಿಶ್ವಕಪ್‌’ನಲ್ಲಿ ಯುವ ಭಾರತೀಯ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ನಾಲ್ಕು ವರ್ಷಗಳ ನಂತರ, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ 2011 ರ ವಿಶ್ವಕಪ್ ಫೈನಲ್‌’ನಲ್ಲಿ ಧೋನಿ ಸಿಕ್ಸರ್ ಬಾರಿಸುವುದರೊಂದಿಗೆ ಭಾರತದ 28 ವರ್ಷಗಳ ಸುದೀರ್ಘ ಕಾಯುವಿಕೆ ಕೊನೆ ಹಾಡಿದರು, ಇದಾದ ಬಳಿಕ 2013 ರಲ್ಲಿ, ಧೋನಿ ಭಾರತವನ್ನು ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಗೆ ಮುನ್ನಡೆಸಿದ್ದು, ಇದು ಭಾರತದ ಕೊನೆಯ ಐಸಿಸಿ ಪ್ರಶಸ್ತಿಯಾಗಿದೆ.

ರಾಂಚಿಯ ಈ ಮಾಂತ್ರಿಕ ಕ್ರಿಕೆಟಿಗ, ಐಪಿಎಲ್‌’ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ನಾಯಕನಾಗಿದ್ದಾರೆ. ಅಂದಹಾಗೆ 90 ಟೆಸ್ಟ್, 350 ODI ಮತ್ತು 98 T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಇದರಲ್ಲಿ ಕ್ರಮವಾಗಿ 4876, 10773 ಮತ್ತು 1617 ರನ್ ಗಳಿಸಿದ್ದಾರೆ.

ಇದನ್ನೂ ಓದಿ: ಕೇವಲ 15 ದಿನಗಳಲ್ಲಿ ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ ಈ ಮ್ಯಾಜಿಕ್ ಡ್ರಿಂಕ್ ! ನಿತ್ಯ ಸೇವಿಸಿದರೆ ರಿಸಲ್ಟ್ ಗ್ಯಾರಂಟಿ !

ಭವಿಷ್ಯದಲ್ಲಿ ಈ ಆಟಗಾರನಿಗೂ ಇದೇ ಗೌರವ:

ಸಚಿನ್, ಧೋನಿ ಬಳಿಕ ಟೀಂ ಇಂಡಿಯಾದ ದಿಗ್ಗಜರಾದ ವಿರಾಟ್ ಕೊಹ್ಲಿ ಜೆರ್ಸಿ ನಂಬರ್ 18 ಮತ್ತು ರೋಹಿತ್ ಶರ್ಮಾ ಅವರ ಜೆರ್ಸಿ ನಂಬರ್ 45ಕ್ಕೂ ಬಿಸಿಸಿಐ ಈ ಗೌರವ ನೀಡುವ ಸಾಧ್ಯತೆ ಇದೆ. ಈ ಇಬ್ಬರೂ ಕ್ರಿಕೆಟಿಗರು ಪ್ರಸ್ತುತ ಟೀಂ ಇಂಡಿಯಾದ ಆಧಾರ ಸ್ಥಂಬಗಳಾಗಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News