New Year 2024 Vastu Tips For Calendar Direction: ಹೊಸ ವರ್ಷವು ಈಗಾಗಲೇ ಪ್ರಾರಂಭವಾಗಿದೆ. ಹೊಸ ವರ್ಷದ ಶುಭ ಸಂದರ್ಭದಲ್ಲಿ, ಕೆಲವರು ಹೊಸ ಕೆಲಸವನ್ನು ಪ್ರಾರಂಭಿಸುತ್ತಾರೆ. ಅಷ್ಟೇ ಅಲ್ಲ ಈ ದಿನ ಕೆಲವರು ಹೊಸ ಪ್ರತಿಜ್ಞೆಯನ್ನೂ ಮಾಡುತ್ತಾರೆ. ಈ ಅವಧಿಯಲ್ಲಿ, ಕೆಲವು ಮನೆಗಳಲ್ಲಿ ಪೂಜೆಗಳನ್ನು ಸಹ ಆಯೋಜಿಸಲಾಗುತ್ತದೆ. ಮುಖ್ಯವಾಗಿ ಹೊಸ ವರ್ಷದ ದಿನದಂದು, ಮನೆಯ ಅಲಂಕಾರ ಮತ್ತು ನಿರ್ವಹಣೆಗೆ ಗಮನ ನೀಡಲಾಗುತ್ತದೆ.
ಇದನ್ನೂ ಓದಿ: ಬಿಳಿಕೂದಲನ್ನು ಬುಡದಿಂದಲೇ ಶಾಶ್ವತವಾಗಿ ಕಪ್ಪಾಗಿಸುತ್ತೆ ಈ ಬಳ್ಳಿಯ ಎಲೆ… ಅರೆದು ಹಚ್ಚಿದರೆ ಸಾಕು
ಇನ್ನು ಈ ದಿನ ಮನೆಯನ್ನು ಸ್ವಚ್ಛವಾಗಿಟ್ಟುಕೊಂಡರೆ ವರ್ಷವಿಡೀ ಮನೆಯಲ್ಲಿ ಐಶ್ವರ್ಯವಿರುತ್ತದೆ ಎಂಬ ನಂಬಿಕೆ ಇದೆ. ಜೊತೆಗೆ ಹಳೆಯ ಕ್ಯಾಲೆಂಡರ್’ಗಳನ್ನು ತೆಗೆದುಹಾಕಿ, ಹೊಸ ಕ್ಯಾಲೆಂಡರ್ಗಳನ್ನು ಅಳವಡಿಸಲಾಗುತ್ತದೆ. ಇನ್ನು ವಾಸ್ತು ಪ್ರಕಾರ ಕ್ಯಾಲೆಂಡರ್ ಅನ್ನು ಈ ದಿಕ್ಕಿನಲ್ಲಿ ಹಾಕಿದರೆ ಅದು ಮನೆಗೆ ಧನಾತ್ಮಕತೆಯನ್ನು ತರುತ್ತದೆ.
ಅಷ್ಟಕ್ಕೂ ಕ್ಯಾಲೆಂಡರ್ ಅನ್ನು ನೇತು ಹಾಕುವಾಗ ಯಾವ ವಾಸ್ತು ನಿಯಮಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿಯೋಣ.
- ಮನೆಯಲ್ಲಿ ಹೊಸ ವರ್ಷದ ಕ್ಯಾಲೆಂಡರ್ ಇಡುವ ಮೊದಲು, ಹಳೆಯ ಕ್ಯಾಲೆಂಡರ್ ಅನ್ನು ತೆಗೆದುಹಾಕಿ. ಇದರ ನಂತರವೇ 2024 ರ ಹೊಸ ಕ್ಯಾಲೆಂಡರ್ ಅನ್ನು ಗೋಡೆಯ ಮೇಲೆ ಇರಿಸಿ. ವಾಸ್ತು ಪ್ರಕಾರ, ಹಳೆಯ ಕ್ಯಾಲೆಂಡರ್ ಅನ್ನು ಮನೆಯಲ್ಲಿ ಇಡುವುದು ನಿಮ್ಮ ಪ್ರಗತಿ ಮತ್ತು ಜೀವನದ ಮೇಲೆ ಪರಿಣಾಮ ಬೀರುತ್ತದೆ.
- ವಾಸ್ತು ಪ್ರಕಾರ, ಹೊಸ ವರ್ಷದ ಕ್ಯಾಲೆಂಡರ್ ಅನ್ನು ಮನೆಯ ವಾಯುವ್ಯ ಅಥವಾ ಪೂರ್ವ ಗೋಡೆಯ ಮೇಲೆ ಮಾತ್ರ ಇರಿಸಿ. ಅಪ್ಪಿತಪ್ಪಿಯೂ ದಕ್ಷಿಣ ದಿಕ್ಕಿನಲ್ಲಿ ಕ್ಯಾಲೆಂಡರ್ ಹಾಕಬೇಡಿ. ಈ ರೀತಿ ಮಾಡುವುದರಿಂದ ಮನೆಯ ಮುಖ್ಯಸ್ಥನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
- ಮನೆಯಲ್ಲಿ ಚಿತ್ರಗಳಿರುವ ಕ್ಯಾಲೆಂಡರ್ ಅನ್ನು ಬಳಸಿದ್ದರೆ, ಅದರಲ್ಲಿ ಫೋಟೋಗಳು ಯಾವುದನ್ನು ಸೂಚಿಸುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಹಿಂಸಾತ್ಮಕ ಪ್ರಾಣಿಗಳು, ದುಃಖದ ಮುಖಗಳು ಅಥವಾ ನಕಾರಾತ್ಮಕ ಚಿತ್ರಗಳನ್ನು ಹೊಂದಿರುವ ಕ್ಯಾಲೆಂಡರ್ಗಳನ್ನು ಎಂದಿಗೂ ಮನೆಯಲ್ಲಿ ಇಡಬಾರದು.
- ವಾಸ್ತು ಪ್ರಕಾರ ಮನೆಯ ಮುಖ್ಯ ಬಾಗಿಲಿಗೆ ಅಪ್ಪಿತಪ್ಪಿಯೂ ಕ್ಯಾಲೆಂಡರ್ ಹಾಕಬೇಡಿ. ಇದನ್ನು ಮಾಡುವುದರಿಂದ ನಿಮ್ಮ ಪ್ರಗತಿಯ ಹಾದಿ ನಿರ್ಬಂಧಿಸಬಹುದು.
- ಹೊಸ ವರ್ಷದ ಕ್ಯಾಲೆಂಡರ್ ಅನ್ನು ಬಾಗಿಲಿನ ಹಿಂದೆ ಇಡಬೇಡಿ. ಹಾಗೆ ಮಾಡುವುದು ತುಂಬಾ ಅಶುಭ.
ಇದನ್ನೂ ಓದಿ: ಕೊನೆ ಟೆಸ್ಟ್ ಪಂದ್ಯದಲ್ಲಿ ಈ ಆಟಗಾರ ಇದ್ದೇ ಇರ್ತಾನೆ.. ಈತನಿಗೆ ಖಚಿತ ಸ್ಥಾನ: ನಾಯಕ ರೋಹಿತ್ ಶರ್ಮಾ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ