ನನ್ನಮ್ಮ ಸೂಪರ್‌ ಸ್ಟಾರ್‌ ಸೀಸನ್-3: ಮತ್ತೆ ಬರ್ತಾಯಿದೆ ತಾಯಿ-ಮಕ್ಕಳ ಗೇಮ್‌ ಶೋ!

Nannamma Super Star: ಅಮ್ಮ ಮಕ್ಕಳ ಮಸ್ತ್‌ ಗೇಮ್‌ ಶೋ ʻನನ್ನಮ್ಮ ಸೂಪರ್‌ ಸ್ಟಾರ್‌ʼ ಸೀಸನ್‌ 3 ಶೀಘ್ರದಲ್ಲೇ ಪೇಕ್ಷಕರನ್ನು ಮನೊರಂಜಿಸೋಕೆ  ಬರ್ತಾಯಿದ್ದು, ವಾಹಿನಿಯವರು ಹೊಸ ಪ್ರೋಮೋವೊಂದನನ್ನು ರಿಲೀಸ್‌ ಮಾಡಿದೆ.

Written by - Zee Kannada News Desk | Last Updated : Jan 7, 2024, 09:35 AM IST
  • 'ನನ್ನಮ್ಮ ಸೂಪರ್ ಸ್ಟಾರ್' ಕಾರ್ಯಕ್ರಮ ಎಂಥವರನ್ನು ಸೆಳೆಯುವ ಕಾನ್ಸೆಪ್ಟ್ ಹೊಂದಿದ್ದರಿಂದ, ಸಾಕಷ್ಟು ಜನ ಫ್ಯಾನ್ಸ್ ಫಾಲೋವರ್ಸ್‌ ಇದ್ದಾರೆ.
  • 'ನನ್ನಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋ ಪ್ರಾರಂಭವಾದ ಫಸ್ಟ್‌ ಸೀಸನ್‌ನಲ್ಲಿ ವಂಶಿಕಾ ಇಡೀ ಟೀಂನ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಳು.
  • ಇದೀಗ 'ನನ್ನಮ್ಮ ಸೂಪರ್ ಸ್ಟಾರ್' ಕಾರ್ಯಕ್ರಮದ ಬಗ್ಗೆ ಯಾವುದೇ ಮಾಹಿತಿ ನೀಡಿರದ ಕಲರ್ಸ್ ಕನ್ನಡ ವಾಹಿನಿ ಸದ್ಯ ಹೊಸ ಸೀಜನ್‌ಗೆ ಸಜ್ಜಾಗಿದೆ.
ನನ್ನಮ್ಮ ಸೂಪರ್‌ ಸ್ಟಾರ್‌ ಸೀಸನ್-3: ಮತ್ತೆ ಬರ್ತಾಯಿದೆ ತಾಯಿ-ಮಕ್ಕಳ ಗೇಮ್‌ ಶೋ! title=

Nannamma Super Star Season 3: ತಾಯಿ ಮತ್ತು ಮಕ್ಕಳ ರಿಯಾಲಿಟಿ ಗೋಮ್‌ ಶೋ 'ನನ್ನಮ್ಮ ಸೂಪರ್ ಸ್ಟಾರ್' ಕಾರ್ಯಕ್ರಮದಲ್ಲಿ  ಮಕ್ಕಳ ಮುದ್ದು ಮುದ್ದು ಮಾತುಗಳು, ತಲೆ ಹರಟೆ, ಚೂಟಿಯಾಗಿ ಆಡುವ ರೀತಿ ಎಲ್ಲವೂ ಕೂಡ ಜನರನ್ನು ಅತಿ ಹೆಚ್ಚಾಗಿ ರಂಜಿಸುತ್ತಿತ್ತು. ಆ ಕಾರ್ಯಕ್ರಮ ಎಂಥವರನ್ನು ಸೆಳೆಯುವ ಕಾನ್ಸೆಪ್ಟ್ ಹೊಂದಿದ್ದರಿಂದ, ಸಾಕಷ್ಟು ಜನ ಫ್ಯಾನ್ಸ್ ಫಾಲೋವರ್ಸ್‌ ಇದ್ದಾರೆ. ಇದಕ್ಕಾಗಿಯೇ ಒಂದಷ್ಟು ವೀಕ್ಷಕರನ್ನು 'ನನ್ನಮ್ಮ ಸೂಪರ್ ಸ್ಟಾರ್' ಶೋ ಸೆರೆ ಹಿಡಿದಿಟ್ಟುಕೊಂಡಿತ್ತು. 

ಕಳೆದ ಎರಡು ವರ್ಷಗಳ ಹಿಂದೆ 'ನನ್ನಮ್ಮ ಸೂಪರ್ ಸ್ಟಾರ್' ಮೊದಲ ಸೀಸನ್ ಹಿಟ್ ಆದ ಬಳಿಕ, ಮತ್ತೆ ಹೋದ ವರ್ಷ ಎರಡನೇ ಸೀಸನ್ ಕೂಡ ಪ್ರಸಾರ ಕಂಡಿತ್ತು. ಇದೀಗ ಇದರ ಸೀಸನ್-3 ಆರಂಭವಾಗಲಿದೆ. 
ಮಕ್ಕಳ ಜೊತೆ ಜೊತೆಗೆ ಅಮ್ಮಂದಿರು ಮಸ್ತ್ ಮಜಾ ಮಾಡುವ ಈ ಶೋನಲ್ಲಿ ಮಕ್ಕಳ ಜೊತೆಗೆ ಮಕ್ಕಳಾಗಿ ತಾಯಂದಿರು ಪಡುವ ಆನಂದ, ಖುಷಿ ಅಷ್ಟಿಷ್ಟಲ್ಲ. ಈ ಶೋದಲ್ಲಿ ಡಾನ್ಸ್, ಡ್ರಾಮಾ ಅಂತ ಫುಲ್ ಟೈಮ್  ಮಕ್ಕಳ ಜೊತೆಗೆ ಸಮಯ ಕಳೆಯುತ್ತಿದ್ದು, ಹಾಗೆಯೇ ಮಕ್ಕಳ ಆಟ-ಪಾಠದ ಜೊತೆಗೆ ಈ ಸೀಸನ್‌ ಗೇಮ್‌ಶೋ ಗೆಲ್ಲಲೇಬೇಕೆಂಬುದು ಆಸೆ ಖಂಡಿತವಾಗಿಯೂ ಎಲ್ಲರಿಗೂ ಇದ್ದೇ ಇರುತ್ತದೆ. ಅದೇ 'ನನ್ನಮ್ಮ ಸೂಪರ್ ಸ್ಟಾರ್' ಕಾರ್ಯಕ್ರಮದ ವಿಶೇಷತೆಯಾಗಿದೆ. 

 
 
 
 

 
 
 
 
 
 
 
 
 
 
 

A post shared by Colors Kannada Official (@colorskannadaofficial)

ಇದನ್ನೂ ಓದಿ: Vijay Devarakonda- rashmika mandanna: ವಿಜಯ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ರಶ್ಮಿಕಾ ಮಂದಣ್ಣ! ಈ ದಿನ ನಡೆಯಲಿದೆ ಅದ್ಧೂರಿ ನಿಶ್ಚಿತಾರ್ಥ

'ನನ್ನಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋ ಪ್ರಾರಂಭವಾದ  ಫಸ್ಟ್‌ ಸೀಸನ್‌ನಲ್ಲಿ ವಂಶಿಕಾ ಇಡೀ ಟೀಂನ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದು, ಈಕೆ ಎಲ್ಲಾ ಮಕ್ಕಳಿಗಿಂತೆ ಬೇರೆ ರೀತಿಯಾಗಿಯೇ ಇರುತ್ತಿದ್ದಳು. ವಂಶಿಕಾ ಪ್ರಾಕ್ಟೀಸ್ ಮಾಡಿ ಎಷ್ಟೇ ಸುಸ್ತಾಗಿದ್ದರು, ನೆಗಡಿ ಆಗಿ ಮೂಗಲ್ಲಿ ಸೋರುತ್ತಿದ್ದರು ಇದ್ಯಾವುದಕ್ಕೂ ಗಮನ ಕೊಡದೆ, ಎಲ್ಲದಕ್ಕೂ ಡೋಂಟ್ ಕೇರ್ ಎನ್ನುತ್ತಿದ್ದಳು. ಸ್ಟೇಜ್‌ ಮೇಲೆ ತಾನು ಮಾಡಬೇಕಾದ ಕೆಲಸಕ್ಕೆ ಗಮನ ಹರಿಸುತ್ತಿದ್ದು, ಆಕೆಯ ಆಟ, ತುಂಟಾಟ ನೋಡುತ್ತಿದ್ದವರಿಗೆ ಈಕೆಯೇ ಸೀಸನ್ ಒಂದರಲ್ಲಿ ವಿನ್ನರ್ ಆಗಬೇಕೆಂದಿದ್ದು, ಔೀಕ್ಷಕರ ಆಸೆಯಂತೆ ವಂಶಿಕಾ ಮೊದಲ ಸೀಸನ್‌ ಗೆದ್ದು, ಐದು ಲಕ್ಷ ರೂಪಾಯಿ ಬಹುಮಾನ ಪಡೆದಿದ್ದಳು. 

ಕಳೆದ ವರ್ಷ 'ನನ್ನಮ್ಮ ಸೂಪರ್ ಸ್ಟಾರ್' ಸೀಸನ್‌ ಎರಡು ಪ್ರಾರಂಭವಾಗಿ, ಇದರಲ್ಲಿ ಸೆಲಬ್ರಿಟಿಗಳ ಮಕ್ಕಳ ಬದಲು ಸಾಮಾನ್ಯರು ಭಾಗವಹಿಸಿದ್ದರು. ಚೂಟಿಯಾಗಿ ಆಡಿದ ಮಕ್ಕಳಿಗೆ ವಂಶಿಕಾ ಆಂಕರ್ ಆಗಿಯೂ ಬಂದಿದ್ದು,  ಸೀಸನ್ ಎರಡರಲ್ಲೂ ವಂಶಿಕಾ ವೇದಿಕೆಯನ್ನು ತನ್ನದಾಗಿಸಿಕೊಂಡಿದ್ದಳು. ಮಂಡ್ಯ ಮೂಲದ ಚೈತ್ರಾ ಮ್ಮ ಅವಳಿ ಮಕ್ಕಳು ಚಿನ್ಮಯ್ ಹಾಗೂ ಚಿರಂತ್ ಜೊತೆಗೆ ಭಾಗವಹಿಸಿ ಗೆಲುವು ಕಂಡಿದ್ದರು. 

ಇದನ್ನೂ ಓದಿ: KGF ಮ್ಯೂಸಿಕ್ ಡೈರೆಕ್ಟರ್ ನಿಜವಾದ ಹೆಸರು ಹೀಗೆ… ರವಿ ಬಸ್ರೂರು ಅಂತ ಅಲ್ಲ! ಸ್ವತಃ ಅವರೇ ಹೇಳಿದ ಶಾಕಿಂಗ್ ಸತ್ಯ

ಇದೀಗ 'ನನ್ನಮ್ಮ ಸೂಪರ್ ಸ್ಟಾರ್' ಕಾರ್ಯಕ್ರಮದ ಬಗ್ಗೆ ಯಾವುದೇ ಮಾಹಿತಿ ನೀಡಿರದ ಕಲರ್ಸ್ ಕನ್ನಡ ವಾಹಿನಿ ಸದ್ಯ ಹೊಸ ಸೀಜನ್‌ಗೆ ಸಜ್ಜಾಗಿದ್ದು, ಸೀಸನ್- 3ರ ಹೊಸ ಪ್ರೋಮೋ ವಾಹಿನಿಯೂ ಬಿಡುಗಡೆಗೊಳಿಸಿದೆ. ಆದರೆ, ಕಾರ್ಯಕ್ರಮ ಯಾವಾಗಿನಿಂದ ಪ್ರಸಾರವಾಗುತ್ತದೆ ಎಂಬುದನ್ನು ಮಾತ್ರ ತಿಳಿಸದೆ, ಆದರೆ, ಇಷ್ಟರಲ್ಲೇ  ಈ ಶೋ ಮಕ್ಕಳೊಂದಿಗೆ ತಾಯಂದಿರುವ ವೀಕ್ಷಕರನ್ನು ವೀಕೆಂಡ್‌ಗಳಲ್ಲಿ ರಂಜಿಸಲು ಬರುವುದಂತೂ ಪಕ್ಕಾ ಆಗಿದೆ. ಶೀಘ್ರದಲ್ಲೇ ನನ್ನಮ್ಮ ಸೂಪರ್ ಸ್ಟಾರ್ ಸೀಸನ್- 3 ನೋಡಿ ಎಂಜಾಯ್ ಮಾಡಲು ಪ್ರೇಕ್ಷಕರು ಬಹಳ ಕಾತುರದಿಂದ ಕಾಯುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

Trending News