ದೇವಾಲಯದ ಒಳಗಡೆಯೇ ನೆಲೆಗೊಂಡಿದೆ ಈ ಬೃಹತ್ ನಗರ: ಮೋದಿ ಭೇಟಿ ನೀಡಲಿರುವ ಆ ಪುಣ್ಯಕ್ಷೇತ್ರ ಯಾವುದು ಗೊತ್ತಾ?

Ranganathaswamy Temple: ಪ್ರಧಾನಿ ಮೋದಿ ಅವರು ದಕ್ಷಿಣ ಭಾರತದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಈ ದೇವಾಲಯವು ಬೃಹದಾಕಾರವಾಗಿದ್ದು, 156 ಎಕರೆಗಳಷ್ಟು ವಿಸ್ತಾರವಾಗಿದೆ. ವಿಷ್ಣುವಿಗೆ ಸಮರ್ಪಿತವಾಗಿರುವ ಈ ದೇವಾಲಯದಲ್ಲಿ ವಿಗ್ರಹದಿಂದ ಹಿಡಿದು ದೇವಾಲಯದ ವೈಶಾಲ್ಯ, ಸೌಂದರ್ಯ, ಭವ್ಯತೆ ಇತ್ಯಾದಿ ಎಲ್ಲವೂ ಬಹಳ ವಿಶೇಷವಾಗಿದೆ

Written by - Bhavishya Shetty | Last Updated : Jan 19, 2024, 09:20 AM IST
    • ಜನವರಿ 22 ರಂದು ರಾಮಮಂದಿರ ಲೋಕಾರ್ಪಣೆ
    • 11 ದಿನಗಳ ಕಾಲ ವಿಶೇಷ ಆಚರಣೆಯನ್ನು ಮಾಡುತ್ತಿರುವ ಪ್ರಧಾನಿ
    • ದಕ್ಷಿಣ ಭಾರತದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿದ್ದಾರೆ ಪ್ರಧಾನಿ ಮೋದಿ
ದೇವಾಲಯದ ಒಳಗಡೆಯೇ ನೆಲೆಗೊಂಡಿದೆ ಈ ಬೃಹತ್ ನಗರ: ಮೋದಿ ಭೇಟಿ ನೀಡಲಿರುವ ಆ ಪುಣ್ಯಕ್ಷೇತ್ರ ಯಾವುದು ಗೊತ್ತಾ?  title=
Sri Ranganathaswamy Temple

Ranganathaswamy Temple Photos: ಜನವರಿ 22 ರಂದು ರಾಮಮಂದಿರ ಲೋಕಾರ್ಪಣೆಗೂ ಮುನ್ನ, ಪ್ರಧಾನಿ ನರೇಂದ್ರ ಮೋದಿ ಅವರು 11 ದಿನಗಳ ಕಾಲ ವಿಶೇಷ ಆಚರಣೆಯನ್ನು ಮಾಡುತ್ತಿದ್ದಾರೆ. ಇದರ ಅಡಿಯಲ್ಲಿ ಅವರು ದೇಶದ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿ, ಪೂಜೆ ಸಲ್ಲಿಸುತ್ತಿದ್ದಾರೆ. ಇದೇ ನಿಮಿತ್ತ ಜನವರಿ 20 ರಂದು ಪ್ರಧಾನಿ ಮೋದಿ ಅವರು ತಿರುಚ್ಚಿ ಶ್ರೀರಂಗಂನಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಆಗಮಿಸಲಿದ್ದಾರೆ. ಇದು ದೇಶದ ಅತಿ ದೊಡ್ಡ ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಅತ್ಯಂತ ಭವ್ಯವಾಗಿದೆ.

ಇದನ್ನೂ ಓದಿ:ಇವರಾಗಲಿದ್ದಾರೆ ಟೀಂ ಇಂಡಿಯಾದ ವಿಕೆಟ್ ಕೀಪರ್: ಕೋಚ್ ರಾಹುಲ್ ದ್ರಾವಿಡ್ ಸೂಚಿಸಿದ್ದು ಯಾರನ್ನು?

ಪ್ರಧಾನಿ ಮೋದಿ ಅವರು ದಕ್ಷಿಣ ಭಾರತದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಈ ದೇವಾಲಯವು ಬೃಹದಾಕಾರವಾಗಿದ್ದು, 156 ಎಕರೆಗಳಷ್ಟು ವಿಸ್ತಾರವಾಗಿದೆ. ವಿಷ್ಣುವಿಗೆ ಸಮರ್ಪಿತವಾಗಿರುವ ಈ ದೇವಾಲಯದಲ್ಲಿ ವಿಗ್ರಹದಿಂದ ಹಿಡಿದು ದೇವಾಲಯದ ವೈಶಾಲ್ಯ, ಸೌಂದರ್ಯ, ಭವ್ಯತೆ ಇತ್ಯಾದಿ ಎಲ್ಲವೂ ಬಹಳ ವಿಶೇಷವಾಗಿದೆ.

ಶ್ರೀ ರಂಗನಾಥಸ್ವಾಮಿ ದೇವಾಲಯವು ಪುರಾತನ ದೇವಾಲಯವಾಗಿದ್ದು, ಇದನ್ನು 631,000 ಮೀಟರ್ ಚದರದಲ್ಲಿ ನಿರ್ಮಿಸಲಾಗಿದೆ. ಇಡೀ ನಗರವು ಈ ದೇವಾಲಯದ ಸಂಕೀರ್ಣದಲ್ಲಿ ನೆಲೆಗೊಂಡಿದೆ ಎಂದೇ ಹೇಳಬಹುದು. ದೇವಾಲಯದ ಪ್ರಾಂಗಣದಲ್ಲಿ ಹೋಟೆಲ್‌’ಗಳು ಮತ್ತು ಸಾಮಾನ್ಯ ಅಂಗಡಿಗಳು ಮಾತ್ರವಲ್ಲ, ಸಂಪೂರ್ಣ ವಸತಿ ಸ್ಥಳ, ದೊಡ್ಡ ಮಾರುಕಟ್ಟೆ ಸೇರಿದಂತೆ ಹಲವು ಸೌಲಭ್ಯಗಳಿವೆ. ಈ ದೇವಾಲಯದ ಒಳಗೆ 49 ಧಾರ್ಮಿಕ ಸ್ಥಳಗಳನ್ನು ನಿರ್ಮಿಸಲಾಗಿದೆ

ವಿಷ್ಣುವನ್ನು ದಕ್ಷಿಣದಲ್ಲಿ ಶ್ರೀ ರಂಗನಾಥ ಸ್ವಾಮಿ ಎಂದು ಕರೆಯಲಾಗುತ್ತದೆ. ಈ ಪ್ರಸಿದ್ಧ ದೇವಾಲಯವಾದ ಶ್ರೀ ರಂಗನಾಥಸ್ವಾಮಿ ದೇವಾಲಯವು ಶೇಷನಾಗನ ಮೇಲೆ ವಿಷ್ಣು ಮಲಗಿರುವ ಬೃಹತ್ ವಿಗ್ರಹವನ್ನು ಹೊಂದಿದೆ.

ಈ ದೇವಾಲಯದ ವಾಸ್ತುಶಿಲ್ಪವು ತಮಿಳು ಶೈಲಿಯನ್ನು ಆಧರಿಸಿದೆ. 21 ಗೋಪುರಗಳು ಮತ್ತು 1000 ಕಂಬಗಳಿಂದ ಮಾಡಲ್ಪಟ್ಟಿತ್ತು. ಆದರೆ, ಈಗ 953 ಕಂಬಗಳು ಮಾತ್ರ ಗೋಚರಿಸುತ್ತಿವೆ. ಈ ಪುರಾತನ ದೇವಾಲಯವನ್ನು ವಿಜಯನಗರ ಕಾಲದಲ್ಲಿ (1336-1565) ಗ್ರಾನೈಟ್ ಕಲ್ಲುಗಳಿಂದ ನಿರ್ಮಿಸಲಾಗಿದೆ.

ಇದನ್ನೂ ಓದಿ:  BBK 10: ಫಿನಾಲೆಗೆ ದಿನಗಣನೆ ಬೆನ್ನಲ್ಲೇ ವಿನ್ನರ್ ಹೆಸರು ರಿವೀಲ್! ಹೈ ಸ್ಪೀಡ್’ನಲ್ಲಿ ಜನಪ್ರಿಯತೆ ಹೆಚ್ಚಿಸಿಕೊಂಡ ಈ ಸ್ಪರ್ಧಿಗೆ ‘ಬಿಗ್ ಬಾಸ್’ ವಿಜೇತ ಪಟ್ಟ!

ಶ್ರೀ ರಂಗನಾಥಸ್ವಾಮಿ ದೇವಾಲಯವು ಭಾರತದ ಅತಿ ಎತ್ತರದ ದೇವಾಲಯವಾಗಿದೆ. ಶ್ರೀರಾಮನು ಈ ದೇವಾಲಯದಲ್ಲಿ ಬಹಳ ಕಾಲ ಪೂಜೆ ಮಾಡುತ್ತಿದ್ದನೆಂದು ಹೇಳಲಾಗುತ್ತದೆ. ರಾವಣನನ್ನು ಕೊಂದ ನಂತರ, ಭಗವಾನ್ ರಾಮನು ವಿಭೀಷಣನಿಗೆ ಲಂಕೆಯನ್ನು ಹಸ್ತಾಂತರಿಸಿ ಹಿಂದಿರುಗುತ್ತಿದ್ದಾಗ, ಭಗವಾನ್ ವಿಷ್ಣುವು ಭಗವಾನ್ ರಾಮನ ದಾರಿಯಲ್ಲಿ ಕಾಣಿಸಿಕೊಂಡು ಈ ಸ್ಥಳದಲ್ಲಿ ಉಳಿಯುವ ಬಯಕೆಯನ್ನು ವ್ಯಕ್ತಪಡಿಸಿದನು. ಅಂದಿನಿಂದ ಇಲ್ಲಿ ವಿಷ್ಣು ದೇವರನ್ನು ಪೂಜಿಸಲಾಗುತ್ತಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News