T20 World Cup ನಲ್ಲಿ ಇವರಾಗಲಿದ್ದಾರೆ ಟೀಂ ಇಂಡಿಯಾದ ವಿಕೆಟ್ ಕೀಪರ್: ಕೋಚ್ ರಾಹುಲ್ ದ್ರಾವಿಡ್ ಸೂಚಿಸಿದ್ದು ಯಾರನ್ನು?

Rahul Dravid Statement About Wicket Keeper: ಅಫ್ಘಾನಿಸ್ತಾನ ವಿರುದ್ಧ ಮುಂಬರುವ ಐಸಿಸಿ ಪಂದ್ಯಾವಳಿಯ ಮೊದಲು ಭಾರತ ತಂಡವು ಟಿ20 ಸ್ವರೂಪದಲ್ಲಿ ತನ್ನ ಕೊನೆಯ ಸರಣಿಯನ್ನು ಆಡಿದೆ. ಇದರಲ್ಲಿ ಭಾರತ 3-0 ಅಂತರದಲ್ಲಿ ಗೆದ್ದಿತು. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿದೆ.

Written by - Bhavishya Shetty | Last Updated : Jan 19, 2024, 08:19 AM IST
    • ಭಾರತ ತಂಡದ ಗಮನ ಈ ವರ್ಷದ T20 ವಿಶ್ವಕಪ್ ಮೇಲೆ ಕೇಂದ್ರೀಕೃತವಾಗಿದೆ
    • ಐಸಿಸಿ ಟಿ20 ವಿಶ್ವಕಪ್‌’ನಲ್ಲಿ ವಿಕೆಟ್ ಕೀಪಿಂಗ್ ಯಾರು ಮಾಡುತ್ತಾರೆ?
    • ಈ ಪ್ರಶ್ನೆಗೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅಭಿಪ್ರಾಯವನ್ನು ನೀಡಿದ್ದಾರೆ.
T20 World Cup ನಲ್ಲಿ ಇವರಾಗಲಿದ್ದಾರೆ ಟೀಂ ಇಂಡಿಯಾದ ವಿಕೆಟ್ ಕೀಪರ್: ಕೋಚ್ ರಾಹುಲ್ ದ್ರಾವಿಡ್ ಸೂಚಿಸಿದ್ದು ಯಾರನ್ನು? title=
Rahul Dravid

Indian Wicket keeper in T20 World Cup: ಭಾರತ ತಂಡದ ಗಮನ ಈ ವರ್ಷದ T20 ವಿಶ್ವಕಪ್ ಮೇಲೆ ಕೇಂದ್ರೀಕೃತವಾಗಿದೆ. ಮುಂಬರುವ ಜೂನ್‌’ನಲ್ಲಿ ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌’ನಲ್ಲಿ ಟಿ20 ವಿಶ್ವಕಪ್‌ ನಡೆಯಲಿದೆ. ಈ ಮಧ್ಯೆ, ಐಸಿಸಿ ಟಿ20 ವಿಶ್ವಕಪ್‌’ನಲ್ಲಿ ವಿಕೆಟ್ ಕೀಪಿಂಗ್ ಯಾರು ಮಾಡುತ್ತಾರೆ ಎಂಬ ಪ್ರಶ್ನೆ ಉದ್ಭವಿಸಿದೆ. ಈ ಪ್ರಶ್ನೆಗೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ.

 ಇದನ್ನೂ ಓದಿ: ಈ 4 ರಾಶಿಯವರಿಗೆ ಗಜಕೇಸರಿ ಯೋಗ: ಬಾಳಲ್ಲಿ ಅದೃಷ್ಟದ ಪರ್ವಕಾಲ ಶುರು- ಇನ್ನೇನಿದ್ದರೂ ಇವರದ್ದು ಗೆಲುವಿನ ಓಟವೇ!

ಅಫ್ಘಾನಿಸ್ತಾನ ವಿರುದ್ಧ ಮುಂಬರುವ ಐಸಿಸಿ ಪಂದ್ಯಾವಳಿಯ ಮೊದಲು ಭಾರತ ತಂಡವು ಟಿ20 ಸ್ವರೂಪದಲ್ಲಿ ತನ್ನ ಕೊನೆಯ ಸರಣಿಯನ್ನು ಆಡಿದೆ. ಇದರಲ್ಲಿ ಭಾರತ 3-0 ಅಂತರದಲ್ಲಿ ಗೆದ್ದಿತು. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿದೆ.

ಯಾರು ವಿಕೆಟ್ ಕೀಪಿಂಗ್ ಮಾಡುತ್ತಾರೆ?

ಟಿ20 ವಿಶ್ವಕಪ್‌’ಗೆ ವಿಕೆಟ್‌ ಕೀಪಿಂಗ್‌’ನಲ್ಲಿ ಭಾರತಕ್ಕೆ ಹಲವು ಆಯ್ಕೆಗಳಿವೆ. ತಂಡದಲ್ಲಿ ಜಿತೇಶ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ಅವರಂತಹ ಸ್ಟಾರ್’ಗಳಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಕೋಚ್ ರಾಹುಲ್ ದ್ರಾವಿಡ್, “ನಮಗೆ ಹಲವು ಆಯ್ಕೆಗಳಿವೆ. ಸಂಜು, ಕಿಶನ್, ರಿಷಬ್ ಎಲ್ಲರೂ ಇದ್ದಾರೆ. ಮುಂದಿನ ಕೆಲವು ತಿಂಗಳುಗಳಲ್ಲಿ ಪರಿಸ್ಥಿತಿಗಳು ಏನಾಗುತ್ತವೆ ಎಂಬುದನ್ನು ನೋಡಬೇಕು. ಅದರಂತೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ” ಎಂದಿದ್ದಾರೆ.

 ಇದನ್ನೂ ಓದಿ: BBK 10: ಫಿನಾಲೆಗೆ ದಿನಗಣನೆ ಬೆನ್ನಲ್ಲೇ ವಿನ್ನರ್ ಹೆಸರು ರಿವೀಲ್! ಹೈ ಸ್ಪೀಡ್’ನಲ್ಲಿ ಜನಪ್ರಿಯತೆ ಹೆಚ್ಚಿಸಿಕೊಂಡ ಈ ಸ್ಪರ್ಧಿಗೆ ‘ಬಿಗ್ ಬಾಸ್’ ವಿಜೇತ ಪಟ್ಟ!

“ಒಡಿಐ ವಿಶ್ವಕಪ್ ನಂತರ, ಭಾರತ ತಂಡದ ಪರ ಅನೇಕ ಆಟಗಾರರು ಆಡಿದ್ದಾರೆ. ಇದಕ್ಕೆ ಹಲವು ಕಾರಣಗಳಿದ್ದವು ಆದರೆ ಟಿ20 ವಿಶ್ವಕಪ್‌ಗೂ ಮುನ್ನವೇ ನಮಗೆ ಆಯ್ಕೆಗಳಿರುವುದು ಒಳ್ಳೆಯದು. ನಾವು ಕೆಲವು ಅಂಶಗಳಲ್ಲಿ ಕೆಲಸ ಮಾಡಬೇಕಾಗಿದೆ ಮತ್ತು ಅದನ್ನು ಪರಿಗಣಿಸುತ್ತಿದ್ದೇವೆ” ಎಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News