Vitamin E Capsules Benefits: ಸುಂದರ ಕಾಂತಿಯುತ ತ್ವಚೆಯನ್ನು ಪಡೆಯಬೇಕು ಎಂಬುದು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ನೀವೂ ಕೂಡ ಹೊಳೆಯುವ ಸುಂದರ ತ್ವಚೆಯನ್ನು ಬಯಸಿದರೆ ಇದಕ್ಕಾಗಿ ಫೇಶಿಯಲ್, ದುಬಾರಿ ಉತ್ಪನ್ನಗಳನ್ನೇ ಬಳಸಬೇಕು ಎಂದೆನಿಲ್ಲ. ವಿಟಮಿನ್ ಇ ಕ್ಯಾಪ್ಸುಲ್ಗಳನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಅಷ್ಟೇ ಸಾಕು.
ವಿಟಮಿನ್ ಇ ಕ್ಯಾಪ್ಸುಲ್ ಚರ್ಮವನ್ನು ಹೊಳೆಯುವಂತೆ ಮಾಡಲು ಮತ್ತು ಹಾನಿಗೊಳಗಾದ ಚರ್ಮವನ್ನು ಸರಿಪಡಿಸಲು ಪ್ರಯೋಜನಕಾರಿಯಾಗಿದೆ. ವಿಟಮಿನ್ ಇ ಕ್ಯಾಪ್ಸುಲ್ ಬಳಕೆಯಿಂದ ಹೊಸ ಕೋಶಗಳು ತೆರೆದುಕೊಳ್ಳುತ್ತವೆ. ಇದರಿಂದ ಹೊಳೆಯುವ ಆರೋಗ್ಯಕರ ತ್ವಚೆಯನ್ನು ನಮ್ಮದಾಗಿಸಬಹುದು.
ಚರ್ಮ ತಜ್ಞರ ಪ್ರಕಾರ, ವಿಟಮಿನ್ ಇ ಕ್ಯಾಪ್ಸುಲ್ ಜೊತೆಗೆ ಕೆಲವು ಪದಾರ್ಥಗಳನ್ನು ಬಳಸಿ ಮುಖಕ್ಕೆ ಅನ್ವಯಿಸುವುದರಿಂದ ಸುಂದರ, ಕೋಮಲವಾದ, ಕಾಂತಿಯುತ ತ್ವಚೆಯನ್ನು ನಮ್ಮದಾಗಿಸಬಹುದು ಎಂದು ಹೇಳಲಾಗುತ್ತದೆ. ಆದರೆ, ವಿಟಮಿನ್ ಇ ಕ್ಯಾಪ್ಸುಲ್ ಅನ್ನು ಯಾವ ಸಮಸ್ಯೆಗೆ ಹೇಗೆ ಬಳಸಬೇಕು ಎಂದು ತಿಳಿದಿರುವುದು ಅಗತ್ಯ.
ಇದನ್ನೂ ಓದಿ- ಬಾಳೆಹಣ್ಣಿ ಮಾಸ್ಕ್... ಕೂದಲಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೆ ಒಂದೇ ಪರಿಹಾರ!
ವಿಟಮಿನ್ ಇ ಕ್ಯಾಪ್ಸುಲ್ ಅನ್ನು ಯಾವ ಸಮಸ್ಯೆಗೆ ಹೇಗೆ ಬಳಸಬೇಕು:-
ತ್ವಚೆ ಬೆಳ್ಳಗಾಗಿಸಲು:
ನೀವು ನಿಮ್ಮ ತ್ವಚೆಯನ್ನು ಬೆಳ್ಳಗಾಗುವಂತೆ ಮಾಡಲು ಇದಕ್ಕಾಗಿ 2-3 ವಿಟಮಿನ್ ಇ ಕ್ಯಾಪ್ಸುಲ್, 2 ಚಮಚ ಮೊಸರು, 1 ಚಮಚ ನಿಂಬೆ ರಸ, ರೋಸ್ ವಾಟರ್ ಅನ್ನು ಒಟ್ಟಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ಹತ್ತಿ ಉಂಡೆಯ ಸಹಾಯದಿಂದ ಫೇಸ್ ಪ್ಯಾಕ್ ರೀತಿ ಅನ್ವಯಿಸಿ. ಅದನ್ನು 15-20 ನಿಮಿಷಗಳ ಕಾಲ ಒಣಗಳು ಬಿಡಿ. ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ.
ಡಾರ್ಕ್ ಸರ್ಕಲ್:
ಡಾರ್ಕ್ ಸರ್ಕಲ್ ಸಮಸ್ಯೆಯಿಂದ ಪರಿಹಾರ ಪಡೆಯಲು ಒಂದೆರಡು ವಿಟಮಿನ್ ಇ ಕ್ಯಾಪ್ಸುಲ್ ತೆಗೆದುಕೊಂಡು ಅದರ ಎಣ್ಣೆಯನು ನಯವಾಗಿ ಕಣ್ಣುಗಳ ಸುತ್ತ ಅನ್ವಯಿಸಿ. ಲಘುವಾಗಿ ಮಸಾಜ್ ಮಾಡಿ. ರಾತ್ರಿಯಿಡೀ ಹೀಗೆ ಬಿಟ್ಟು ಬೆಳಿಗ್ಗೆ ತಣ್ಣೀರಿನಿಂದ ಮುಖ ತೊಳೆಯಿರಿ. ನಿಯಮಿತವಾಗಿ ಈ ರೀತಿ ಮಾಡುವುದರಿಂದ ಕೆಲವೇ ದಿನಗಳಲ್ಲಿ ಡಾರ್ಕ್ ಸರ್ಕಲ್ ಸಮಸ್ಯೆ ನಿವಾರಣೆಯಾಗುತ್ತದೆ.
ಇದನ್ನೂ ಓದಿ- Mouthwash: ಪ್ರತಿದಿನ ಮೌತ್ ವಾಶ್ ಬಳಸುತ್ತಿದ್ದೀರಾ? ಆದರೆ ಇದನ್ನು ತಿಳಿದರೆ ಶಾಕ್ ಆಗುತ್ತೀರಿ
ಕಾಂತಿಯುತ ತ್ವಚೆಗಾಗಿ:
ನೀವು ಹೊಳೆಯುವ ಕಾಂತಿಯುತ ಚರ್ಮವನ್ನು ಬಯಸಿದರೆ ಇದಕ್ಕಾಗಿ 3-4 ವಿಟಮಿನ್ ಇ ಕ್ಯಾಪ್ಸುಲ್ ತೆಗೆದುಕೊಂಡು ಇದರಲ್ಲಿ 1 ಕಪ್ ಪಪ್ಪಾಯಿ ಸಿಪ್ಪೆ (ಪೇಸ್ಟ್ ಮಾಡಿ), 1 ಟೀಚಮಚ ಜೇನುತುಪ್ಪವನ್ನು ಮಿಕ್ಸ್ ಮಾಡಿ. ಬಳಿಕ ಈ ಮಿಶ್ರಣವನ್ನು ಕುತ್ತಿಗೆವರೆಗೂ ಚೆನ್ನಾಗಿ ಅನ್ವಯಿಸಿ 10-15 ನಿಮಿಷಗಳ ಬಳಿಕ ಫೇಸ್ ವಾಶ್ ಮಾಡಿ. ವಾರದಲ್ಲಿ ಒಂದೆರಡು ಬಾರಿ ಈ ರೀತಿ ಮಾಡುವುದರಿಂದ ನಿರೀಕ್ಷಿತ ಫಲಿತಾಂಶ ಪಡೆಯಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.