Esha Deol Divorce: ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ಅವರ ಪುತ್ರಿ ಇಶಾ ಡಿಯೋಲ್ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿ ಅಭಿಮಾನಿಗಳನ್ನು ಆಶ್ಚರ್ಯಗೊಳಿಸಿದೆ. ಇಶಾ ಡಿಯೋಲ್ ಮತ್ತು ಉದ್ಯಮಿ ಭರತ್ ತಖ್ತಾನಿ ಅವರ 11 ವರ್ಷಗಳ ದಾಂಪತ್ಯ ಕೊನೆಗೊಂಡಿದೆ. ಈಗ ಇತ್ತೀಚಿನ ವರದಿಯ ಪ್ರಕಾರ ಹೇಮಾ ಮಾಲಿನಿ ಈ ಕಷ್ಟದ ಸಮಯದಲ್ಲಿ ಮಗಳ ಜೊತೆ ನಿಂತಿದ್ದಾರೆ. ಮಗಳ ಈ ನಿರ್ಧಾರದಿಂದ ಅವರಿಗೆ ಸ್ವಲ್ಪವೂ ಆಘಾತವಾಗಿಲ್ಲ ಎನ್ನಲಾಗಿದೆ. ಹೇಮಾ ಮಾಲಿನಿ ತನ್ನ ಹಿರಿಯ ಮಗಳ ವಿಚ್ಛೇದನದ ನಿರ್ಧಾರದ ಬಗ್ಗೆ ಇಲ್ಲಿಯವರೆಗೆ ಏಕೆ ಪ್ರತಿಕ್ರಿಯಿಸಿಲ್ಲ ಎಂಬುದಕ್ಕೆ ಕಾರಣ ಹೊರಬಿದ್ದಿದೆ.
ವರದಿಯ ಪ್ರಕಾರ, ಇಶಾ ಡಿಯೋಲ್ ಮತ್ತು ಭರತ್ ತಖ್ತಾನಿ ನಡುವೆ ಬಹಳ ಸಮಯದಿಂದ ಬಿರುಕು ಮೂಡಿತ್ತು. ಇಬ್ಬರೂ ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದರು. ಈಗ ಇಬ್ಬರೂ ಬೇರೆಯಾಗಲು ನಿರ್ಧರಿಸಿದ್ದು, ಇಶಾ ಡಿಯೋಲ್ ತನ್ನ ಜೀವನದಲ್ಲಿ ಮುನ್ನಡೆಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಕಡು ನೀಲಿ ಬಣ್ಣದಲ್ಲಿ ಕಂಗನಾ ರಣಾವತ್ : ಫೋಟೋಸ್ ವೈರಲ್
ಈ ಸಂಕಷ್ಟದ ಸಮಯದಲ್ಲಿ ಹೇಮಾ ಮಾಲಿನಿ ತಮ್ಮ ಮಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಮಗಳ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ. ಆದರೆ ಅವಳ ನಿರ್ಧಾರವನ್ನು ಗೌರವಿಸುವ ಉದ್ದೇಶವಿದೆ. ಹೀಗಾಗಿ ಇಶಾ ಡಿಯೋಲ್ ವಿಚ್ಛೇದನದ ಬಗ್ಗೆ ಹೇಮಾ ಮಾಲಿನಿ ಇನ್ನೂ ಮೌನ ಮುರಿದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.
ಕೆಲ ವಾರಗಳ ಹಿಂದೆಯಷ್ಟೇ ಇಶಾ ಮತ್ತು ಭರತ್ ವಿಚ್ಛೇದನದ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದರು. ಇದರಲ್ಲಿ ಇಬ್ಬರೂ ಪರಸ್ಪರ ತಿಳುವಳಿಕೆಯಿಂದ ವಿಚ್ಛೇದನದ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಟಾಕ್ಸಿಕ್ ನಲ್ಲಿ ಶಾರುಖ್ ಖಾನ್ ಪಾತ್ರದ ಬಗ್ಗೆ ಯಶ್ ಕೊಟ್ರು ಬಿಗ್ ಅಪ್ಡೇಟ್.!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.