Goat Bank : ಪ್ರಧಾನಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರತಿ ಬಾರಿಯೂ ಯಾವುದಾದರೂ ಹೊಸ ವಿಚಾರವನ್ನು ಪ್ರಸ್ತಾಪಿಸುತ್ತಾರೆ. ಅದೇ ರೀತಿ ಈ ಬಾರಿ ಕೂಡಾ ಪ್ರಧಾನಿ ಮೋದಿ ತಮ್ಮ ಕಾರ್ಯಕ್ರಮದಲ್ಲಿ'ಗೋಟ್ ಬ್ಯಾಂಕ್' ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಹಾಗಾಗಿ ಈ ಬಾರಿಯ ಮನ್ ಕಿ ಬಾತ್ ಕಾರ್ಯಕ್ರಮ ಪ್ರಸಾರವಾದಾಗಿನಿಂದ, 'ಗೋಟ್ ಬ್ಯಾಂಕ್' ಬಗ್ಗೆಯೂ ದೇಶಾದ್ಯಂತ ಸಾಕಷ್ಟು ಚರ್ಚೆಯಾಗುತ್ತಿದೆ. ಸಾಮಾನ್ಯವಾಗಿ ಬ್ಯಾಂಕ್ ಗಳೆಂದರೆ ಹಣವನ್ನು ಠೇವಣಿ ಮಾಡುವ ಜಾಗ. ಬ್ಯಾಂಕ್ ಗಳಲ್ಲಿ ಹಣ ಠೇವಣಿ ಮಾಡಲಾಗುತ್ತದೆ, ಹಣದ ಸಾಲ ಪಡೆಯಲಾಗುತ್ತದೆ. ಹಣದ ವಹಿವಾಟು ನಡೆಯುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈ 'ಗೋಟ್ ಬ್ಯಾಂಕ್' ನಲ್ಲಿ ವ್ಯವಹಾರ ಹೇಗೆ ನಡೆಯುತ್ತದೆ? ಇಲ್ಲಿ ಠೇವಣಿ ಇಡುವುದು ಯಾವುದನ್ನು ? ಎನ್ನುವುದೇ ಸದ್ಯಕ್ಕೆ ಜನ ಮನಸ್ಸಿನಲ್ಲಿ ಇರುವ ಪ್ರಶ್ನೆ. ಹೌದು ಈ ಗೋಟ್ ಬ್ಯಾಂಕ್ ಎನ್ನುವ ಪರಿಕಲ್ಪನೆಯೇ ಹೊಸತು.
ಎಮ್ಮೆ, ಹಸು ಮಾತ್ರವಲ್ಲ ಮೇಕೆ ಕೂಡಾ :
ಜನರು ಪಶುಸಂಗೋಪನೆಯ ಬಗ್ಗೆ ಮಾತನಾಡುವಾಗ, ಸಾಮಾನ್ಯವಾಗಿ ಹಸು ಮತ್ತು ಎಮ್ಮೆಗಳ ಬಗ್ಗೆಯಷ್ಟೇ ಯೋಚಿಸುತ್ತಾರೆ. ಆದರೆ ಪಶು ಸಂಗೊಪನೆಯಲ್ಲಿ ಮೇಕೆ ಕೂಡಾ ಪ್ರಮುಖ ಪ್ರಾಣಿಯಾಗಿದ್ದು ಅದು ಹೆಚ್ಚು ಚರ್ಚೆಯೇ ನಡೆಯುವುದಿಲ್ಲ ಎಂದು 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮದಲ್ಲಿ ಮೋದಿ ಹೇಳಿದ್ದಾರೆ.
ಇದನ್ನೂ ಓದಿ : Bank Holidays in March : ಮಾರ್ಚ್ ನಲ್ಲಿ 14 ದಿನ ಬ್ಯಾಂಕ್ ಬಂದ್ ! ಇಲ್ಲಿದೆ RBI ಬಿಡುಗಡೆ ಮಾಡಿದ Holiday List
'ಗೋಟ್ ಬ್ಯಾಂಕ್" ಸೇವೆ :
ಒಡಿಶಾದ ದಂಪತಿಗಳು ತೆರೆದಿರುವ 'ಗೋಟ್ ಬ್ಯಾಂಕ್ ಅನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಕಾರ್ಯಕ್ರಮದಲ್ಲಿ ಬಹಳವಾಗಿ ಶ್ಲಾಘಿಸಿದ್ದಾರೆ. ಈ ದಂಪತಿಗಳಿಂದಾಗಿ ಸಮುದಾಯ ಮಟ್ಟದಲ್ಲಿ ಮೇಕೆ ಸಾಕಣೆಗೆ ಉತ್ತೇಜನ ಸಿಗುತ್ತಿರುವ ಬಗ್ಗೆ ಮೋದಿ ಪ್ರಸ್ತಾಪಿಸಿದ್ದಾರೆ.
ಗೋಟ್ ಬ್ಯಾಂಕ್ ಹೇಗೆ ಕೆಲಸ ಮಾಡುತ್ತದೆ? :
- ಮಾಣಿಕಸ್ತು ಅಗ್ರೋ ಗೋಟ್ ಬ್ಯಾಂಕ್ ರೈತರಿಗೆ 24 ತಿಂಗಳಿಗೆ ಎರಡು ಮೇಕೆಗಳನ್ನು ನೀಡಲಾಗುತ್ತದೆ.
- ಎರಡು ವರ್ಷಗಳಲ್ಲಿ ಮೇಕೆ 9 ರಿಂದ 10 ಮರಿಗಳಿಗೆ ಜನ್ಮ ನೀಡುತ್ತವೆ. ಅದರಲ್ಲಿ ಆರು ಮರಿಗಳನ್ನು ಬ್ಯಾಂಕ್ನಲ್ಲಿ ಇರಿಸಲಾಗುತ್ತದೆ. ಉಳಿದವುಗಳನ್ನು ಮೇಕೆಗಳನ್ನು ಸಾಕುವ ಒಂದೇ ಕುಟುಂಬಕ್ಕೆ ನೀಡಲಾಗುತ್ತದೆ.
- ಇಷ್ಟೇ ಅಲ್ಲ, ಮೇಕೆಗಳ ಆರೈಕೆಗೂ ಅಗತ್ಯ ಸೇವೆಗಳನ್ನು ನೀಡಲಾಗುತ್ತದೆ.
ಇದನ್ನೂ ಓದಿ : Credit Card ನಿಂದ ಈ ಮೂರು ಕೆಲಸ ಮಾಡುವವರೆ ಹೆಚ್ಚು ತೊಂದರೆ ಅನುಭವಿಸುತ್ತಾರೆ! ಪಾರಾಗುವುದು ಹೇಗೆ ಇಲ್ಲಿ ತಿಳಿದುಕೊಳ್ಳಿ
ಬೆಂಗಳೂರಿನಿಂದ ಹಳ್ಳಿಗೆ ಮರಳಿದ್ದ ಜಯಂತಿ-ಬೀರೆನ್ :
ಒಡಿಶಾದ ಕಲಹಂಡಿಯಲ್ಲಿ ಮೇಕೆ ಸಾಕಾಣಿಕೆಯು ಹಳ್ಳಿಯ ಜನರ ಜೀವನೋಪಾಯ ಮತ್ತು ಜೀವನಮಟ್ಟವನ್ನು ಸುಧಾರಿಸುವ ಪ್ರಮುಖ ಸಾಧನವಾಗುತ್ತಿದೆ. ಈ ಪ್ರಯತ್ನದ ಹಿಂದೆ ಜಯಂತಿ ಮಹಾಪಾತ್ರ ಮತ್ತು ಅವರ ಪತಿ ಬಿರೇನ್ ಸಾಹು ಅವರ ದೊಡ್ಡ ನಿರ್ಧಾರವಿದೆ ಎಂದು ಮೋದಿ ತಿಳಿಸಿದ್ದಾರೆ. ಇಬ್ಬರೂ ಬೆಂಗಳೂರಿನಲ್ಲಿ ಮ್ಯಾನೇಜ್ಮೆಂಟ್ ವೃತ್ತಿಯಲ್ಲಿದ್ದರು. ಆದರೆ ಆ ಕೆಲಸವನ್ನು ಬಿಟ್ಟು ಕಾಳಹಂಡಿಯ ಸಾಲೇಭಟ ಗ್ರಾಮಕ್ಕೆ ವಾಪಾಸಾಲು ನಿರ್ಧಾರ ಮಾಡುತ್ತಾರೆ. ಇಲ್ಲಿನ ಗ್ರಾಮಸ್ಥರ ಸಮಸ್ಯೆಗಳನ್ನು ಪರಿಹರಿಸಿ ಅವರಿಗೆ ಶಕ್ತಿ ತುಂಬುವ ಕೆಲಸಕ್ಕೆ ಕೈ ಹಾಕುತ್ತಾರೆ.
ಸೇವೆ ಮತ್ತು ಸಮರ್ಪಣಾ ಮನೋಭಾವದಿಂದ ಕೂಡಿದ ಈ ಚಿಂತನೆಯಿಂದ ಮಾಣಿಕಸ್ತು ಆಗ್ರೋ ಸ್ಥಾಪಿಸಿ ರೈತರೊಂದಿಗೆ ಕೆಲಸ ಮಾಡಲು ಆರಂಭಿಸುತ್ತಾರೆ. ಜಯಂತಿ ಮತ್ತು ಬಿರೇನ್ ಇಲ್ಲಿ 'ಮಾಣಿಕಸ್ತು ಗೋಟ್ ಬ್ಯಾಂಕ್' ಅನ್ನು ತೆರೆಯುತ್ತಾರೆ. ಈ ಮೂಲಕ ಸಮುದಾಯ ಮಟ್ಟದಲ್ಲಿ ಮೇಕೆ ಸಾಕಾಣಿಕೆಗೆ ಉತ್ತೇಜನ ನೀಡುತ್ತಿದ್ದಾರೆ.
ಇದನ್ನೂ ಓದಿ : Arecanut Rate Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ!
ಇಂದು 50 ಹಳ್ಳಿಗಳ 1,000 ಕ್ಕೂ ಹೆಚ್ಚು ರೈತರು ಈ ದಂಪತಿ ಸಹಾಯದಿಂದ ಪಶುಸಂಗೋಪನೆ ಕ್ಷೇತ್ರದಲ್ಲಿ ಸ್ವಾವಲಂಬನೆಯತ್ತ ಸಾಗುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು. ಸಣ್ಣ ರೈತರನ್ನು ಸಬಲರನ್ನಾಗಿಸಲು ಮತ್ತು ಸ್ವಾವಲಂಬಿಗಳನ್ನಾಗಿ ಮಾಡಲು ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿ ವೃತ್ತಿಪರರು ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿರುವುದನ್ನು ಕಂಡು ನನಗೆ ತುಂಬಾ ಸಂತೋಷವಾಗಿದೆ ಎಂದು ಕೊಂಡಾಡಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.