PM Kisan Update: ಫಲಾನುಭವಿ ರೈತರಿಗೊಂದು ಎಚ್ಚರಿಕೆ, ಈ ಎರಡು ಸಂಗತಿ ಮರೆತರೆ ಲಿಸ್ಟ್ ನಿಂದ ನಿಮ್ಮ ಹೆಸರು ಔಟ್!

PM Kisan 2024 Update: ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ ಯೋಜನೆಯ 16ನೇ ಕಂತನ್ನು ರೈತರ ಖಾತೆಗೆ ನೇರ ವರ್ಗಾವಣೆ ಮೂಲಕ ವರ್ಗಾಯಿಸಲಿದ್ದಾರೆ. ಆದರೆ ಯೋಜನೆಯಡಿ ಷರತ್ತುಗಳನ್ನು ಪೂರೈಸುವ ಅರ್ಜಿದಾರ ರೈತರು ಮಾತ್ರ ಅದರ ಪ್ರಯೋಜನವನ್ನು ಪಡೆಯಲಿದ್ದಾರೆ. (Business News In Kannada)  

Written by - Nitin Tabib | Last Updated : Feb 27, 2024, 04:48 PM IST
  • ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಫಲಾನುಭವಿಗಳಾಗಿರುವ ರೈತರು ತಮ್ಮ ಕೆವೈಶಿ ಯ ಸ್ಥಿತಿಯನ್ನು ಪರಿಶೀಲಿಸಬಹುದು.
  • ಇದಕ್ಕಾಗಿ ಅವರು pmkisan.gov.in ಗೆ ಭೇಟಿ ನೀಡಬೇಕು.
  • ಬಳಿಕ ಮೊದಲಿನಂತೆಯೇ ಫಾರ್ಮರ್ಸ್ ಕಾರ್ನರ್ ಗೆ ಭೇಟಿ ನೀಡಬೇಕು.
PM Kisan Update: ಫಲಾನುಭವಿ ರೈತರಿಗೊಂದು ಎಚ್ಚರಿಕೆ, ಈ ಎರಡು ಸಂಗತಿ ಮರೆತರೆ ಲಿಸ್ಟ್ ನಿಂದ ನಿಮ್ಮ ಹೆಸರು ಔಟ್! title=

PM Kisan 2024 16th Installment: ದೇಶದ ಸಣ್ಣ ರೈತರ ಕೃಷಿ ವೆಚ್ಚಕ್ಕೆ ಕೈಜೋಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು 2019 ರಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಆರಂಭಿಸಿದೆ. ಇದರ ಮೂಲಕ ರೈತರಿಗೆ ರಬಿ ಮತ್ತು ಖಾರಿಫ್ ಬೆಳೆಗಳಿಗೆ ರಸಗೊಬ್ಬರ, ಬೀಜಗಳು ಮತ್ತು ಇತರ ಕೃಷಿ ಕಾರ್ಯಗಳನ್ನು ಖರೀದಿಸಲು ಅನುಕೂಲವಾಗುವಂತೆ 3 ಕಂತುಗಳಲ್ಲಿ ವಾರ್ಷಿಕ 6,000 ರೂ. ವರ್ಗಾಯಿಸಲಾಗುತ್ತದೆ.  ಇದರ ಅಡಿಯಲ್ಲಿ ಇದುವರೆಗೆ 15 ಕಂತುಗಳನ್ನು ವಿತರಿಸಲಾಗಿದ್ದು, ನಾಳೆ ಫೆಬ್ರವರಿ 28 ರಂದು ಅಂದರೆ ಬುಧವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ಯೋಜನೆಯ 16 ನೇ ಕಂತು ಬಿಡುಗಡೆ ಮಾಡಲಿದ್ದಾರೆ ಆದರೆ ಯೋಜನೆಯಡಿ ಷರತ್ತುಗಳನ್ನು ಪೂರೈಸುವ ಅರ್ಜಿದಾರ ರೈತರು ಮಾತ್ರ ಅದರ ಪ್ರಯೋಜನವನ್ನು ಪಡೆಯುತ್ತಾರೆ. ಇದಕ್ಕಾಗಿ, ರೈತರು ತಮ್ಮ ಕೆಲವು ವಿವರಗಳನ್ನು ನೀಡಬೇಕು ಮತ್ತು ಇ-ಕೆವೈಸಿ ಮಾಡಿಸಿಕೊಳ್ಳಬೇಕು. ಈ ಯೋಜನೆಯಡಿ ಪ್ರಯೋಜನಗಳನ್ನು ಪಡೆಯಲು ನೀವು ಸಹ ಅರ್ಜಿ ಸಲ್ಲಿಸಿದ್ದರೆ, ನೀವು ನೋಂದಣಿ ಸಂಖ್ಯೆಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಮತ್ತು ಇ-ಕೆವೈಸಿ ವಿವರಗಳನ್ನು ಅಪ್ಡೇಟ್ ಮಾಡಬೇಕು. (Business News In Kannada)

ಈ ಯೋಜನೆಗೆ ಇದುವರೆಗೆ ಕೋಟ್ಯಂತರ ರೈತರು ತಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಎಲ್ಲ ನೋಂದಾಯಿತ ರೈತರಿಗೆ ನೋಂದಣಿ ಸಂಖ್ಯೆಯನ್ನು ನೀಡಲಾಗಿದೆ, ಇದು ಪ್ರಯೋಜನಗಳನ್ನು ಪಡೆಯಲು ಮುಖ್ಯವಾಗಿದೆ, ಆದರೆ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ತಮ್ಮ ಪಿಎಂ ಕಿಸಾನ್ ನೋಂದಣಿ ಸಂಖ್ಯೆಯನ್ನು ಮರೆತಿದ್ದರೆ, ಅವರು ಕೆಳಗೆ ನೀಡಲಾದ ಹಂತಗಳ ಸಹಾಯದಿಂದ ಅದನ್ನು ಕಂಡುಹಿಡಿಯಬಹುದು.

ಪಿಎಂ ಕಿಸಾನ್ ನೋಂದಣಿ ಸಂಖ್ಯೆಯನ್ನು ನೋಡುವುದು ಹೇಗೆ?
ಪಿಎಂ ಕಿಸಾನ್ ನೋಂದಣಿ ಸಂಖ್ಯೆಯನ್ನು ತಿಳಿಯಲು, ಈ ಹಂತಗಳನ್ನು ಅನುಸರಿಸಿ-
- ನಿಮ್ಮ PM ಕಿಸಾನ್ ನೋಂದಣಿ ಸಂಖ್ಯೆಯನ್ನು ತಿಳಿಯಲು, ಮೊದಲು PM ಕಿಸಾನ್‌ನ ಅಧಿಕೃತ ವೆಬ್‌ಸೈಟ್‌ - https://pmkisan.gov.in/. ಭೇಟಿ ನೀಡಿ

- ಇದರ ನಂತರ "ಫಾರ್ಮರ ಕಾರ್ನರ್" ನಲ್ಲಿ "ಫಲಾನುಭವಿ ಸ್ಥಿತಿ" ಮೇಲೆ ಕ್ಲಿಕ್ ಮಾಡಿ.

- ಇದರ ನಂತರ ಹೊಸ ಪುಟವು ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ, ಅಲ್ಲಿ ಮೇಲಿನ ಮೂಲೆಯಲ್ಲಿ "ನೋ ಯುವರ್ ರಿಜಿಸ್ಟ್ರೇಷನ್ ನಂಬರ್" ಎಂಬ ಆಯ್ಕೆ ಇರುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.

- ಈ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ, ಹೊಸ ಪುಟವು ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ, ಅಲ್ಲಿ ನೀವು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಓಟಿಪಿ ಅನ್ನು ನಮೂದಿಸಬೇಕಾಗುತ್ತದೆ. ಇದರ ನಂತರ ನಿಮ್ಮ ಪಿಎಂ ಕಿಸಾನ್ ನೋಂದಣಿ ಸಂಖ್ಯೆ ಪರದೆಯ ಮೇಲೆ ನಿಮಗೆ ಕಾಣಿಸಲಿದೆ.

ಪಿಎಂ ಕಿಸಾನ್ ಇ-ಕೆವೈಸಿ
ಇ-ಕೆವೈಸಿ ಮಾಡಿದ ರೈತರಿಗೆ ಮಾತ್ರ ಪಿಎಂ ಕಿಸಾನ್ ಯೋಜನೆಯ ಲಾಭ ಸಿಗಲಿದೆ ಎಂದು ಸರ್ಕಾರ ಪದೇಪದೇ ಹೇಳುತ್ತಲೇ ಇದೆ. ಇದಲ್ಲದೆ, ಭೂಮಿ ಪರಿಶೀಲನೆ ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವ ಷರತ್ತುಗಳನ್ನು ಸಹ ಅದರಲ್ಲಿ ಇರಿಸಲಾಗಿದೆ. ಈ ಯೋಜನೆ ಪ್ರಾರಂಭವಾದ ನಂತರ, ಈ ಯೋಜನೆಯ ಪ್ರಯೋಜನಗಳಿಗೆ ಅರ್ಹರಲ್ಲದ ಕೆಲವರು ಇನ್ನೂ ಈ ಯೋಜನೆಯ ಲಾಭವನ್ನು ತಪ್ಪಾಗಿ ತೆಗೆದುಕೊಳ್ಳುತ್ತಿರುವುದು ಕಂಡುಬಂದಿದೆ. ಆದ್ದರಿಂದ, ಸರ್ಕಾರವು ಪಿಎಂ ಕಿಸಾನ್ ಇ-ಕೆವೈಸಿಯ ನಿಬಂಧನೆಯನ್ನು ಜಾರಿಗೊಳಿಸಿದೆ, ಅದರ ಮೂಲಕ ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಯಾರು ಅರ್ಹರು ಮತ್ತು ಯಾರು ಅಲ್ಲ ಎಂಬುದನ್ನು ಪರಿಶೀಲಿಸಲಾಗುತ್ತದೆ. ಇದರೊಂದಿಗೆ, ಕೆವೈಶಿ ಸಹಾಯದಿಂದ, ಫಲಾನುಭವಿ ರೈತರ ಡೇಟಾವನ್ನು ಸಹ ಸರ್ಕಾರ ಹೊಂದಿದೆ. ಪಿಎಂ ಕಿಸಾನ್ ಫಲಾನುಭವಿಗೆ ನೆನಪಿಲ್ಲದಿದ್ದರೆ ಅಥವಾ ಅವರ ಇ-ಕೆವೈಸಿ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂದು ತಿಳಿದಿಲ್ಲದಿದ್ದರೆ, ಅವರು ಪಿಎಂ ಕಿಸಾನ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅದನ್ನು ಸಹ ಪೃಶೀಲಿಸಬಹುದು.

ಇದನ್ನೂ ಓದಿ-Investment Tips: ಅತಿ ಕಡಿಮೆ ಸಮಯದಲ್ಲಿ ಕೋಟ್ಯಾಧೀಶರಾಗುವ ಈ ಸಿಂಪಲ್ ರೂಲ್ ನಿಮಗೆ ತಿಳಿದಿರಲಿ!

ಪಿಎಂ ಕಿಸಾನ್ ಇ-ಕೆವೈಸಿ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ?
ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಫಲಾನುಭವಿಗಳಾಗಿರುವ ರೈತರು ತಮ್ಮ ಕೆವೈಶಿ ಯ ಸ್ಥಿತಿಯನ್ನು ಪರಿಶೀಲಿಸಬಹುದು. ಇದಕ್ಕಾಗಿ ಅವರು pmkisan.gov.in ಗೆ ಭೇಟಿ ನೀಡಬೇಕು. ಬಳಿಕ ಮೊದಲಿನಂತೆಯೇ ಫಾರ್ಮರ್ಸ್ ಕಾರ್ನರ್ ಗೆ ಭೇಟಿ ನೀಡಬೇಕು. ಇದರಲ್ಲಿ ಮೊದಲ ಆಯ್ಕೆ ಇ-ಕೆವೈಸಿ ಆಗಿರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ಇದರ ನಂತರ ಓಟಿಪಿ ಆಧಾರಿತ ಇ-ಕೆವೈಸಿ ಮಾಡಲಾಗುತ್ತದೆ ಮತ್ತು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಲು ಕೋರಲಾಗುತ್ತದೆ. ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸುವ ಮೂಲಕ ನಿಮ್ಮ ಸ್ಥಿತಿಯನ್ನು ನೀವು ತಿಳಿದುಕೊಳ್ಳುವಿರಿ. ಇ-ಕೆವೈಸಿ ಅಪೂರ್ಣವಾಗಿದ್ದರೆ ನೀವು ಅದನ್ನು ನವೀಕರಿಸಬಹುದು.

ಇದನ್ನೂ ಓದಿ-Annual Expenditure Survey: ಬದಲಾಗುತ್ತಿದೆ ಭಾರತ, ಹಣ ಖರ್ಚು ಮಾಡುವ ವಿಷಯದಲ್ಲಿ ಯಾವ ರಾಜ್ಯದ ಜನ ಟಾಪ್ ನಲ್ಲಿದ್ದಾರೆ ಗೊತ್ತಾ?

ಪಿಎಂ ಕಿಸಾನ್ ಇ-ಕೆವೈಸಿ ಮಾಡುವುದು ಹೇಗೆ?
- ಇ-ಕೆವೈಸಿ ಮಾಡಲು, ಮೊದಲು ನೀವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ವೆಬ್‌ಸೈಟ್‌- https://pmkisan.gov.in/. ಗೆ ಭೇಟಿ ನೀಡಬೇಕು

- ಮುಖಪುಟದಲ್ಲಿ ನಿಮಗೆ ಫಾರ್ಮರ್ ಕಾರ್ನರ್ ಆಯ್ಕೆ ಸಿಗಲಿದೆ ಮತ್ತು ಅದರಲ್ಲಿ ನೀವು ಇ-ಕೆವೈಸಿ ಆಯ್ಕೆಯನ್ನು ನೋಡಬಹುದು.

- e-KYC ಆಯ್ಕೆಯ ಮೇಲೆ ಕ್ಲಿಕ್ ಮಾಡಿ, OTP ಆಧಾರಿತ ಬಾಕ್ಸ್ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ.

- ಇಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು.

- ಇದರ ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ಕೇಳಲಾಗುತ್ತದೆ. ನಿಮ್ಮ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಮಾತ್ರ ನೀವು ನೀಡಬೇಕು ಎಂಬುದನ್ನು ನೆನಪಿನಲಿಟ್ಟುಕೊಳ್ಳಿ.

- ಇದರ ನಂತರ ನೀವು ಗೇಟ್ ಓಟಿಪಿ ಆಯ್ಕೆಯನ್ನು ಕ್ಲಿಕ್ ಮಾಡಬೇಕು, ಇದರಿಂದ ಓಟಿಪಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುತ್ತದೆ.

- ಬಾಕ್ಸ್‌ನಲ್ಲಿ ಓಟಿಪಿ ಅನ್ನು ನಮೂದಿಸಿ ಮತ್ತು ಸಬ್ಮಿಟ್ ಮಾಡಿ.

- ಇದರೊಂದಿಗೆ ನಿಮ್ಮ ಇ-ಕೆವೈಸಿ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ ಮತ್ತು ನೀವು 16ನೇ ಕಂತಿನ  ಪ್ರಯೋಜನವನ್ನು ಪಡೆಯಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News