/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

Viral Video: ಕಾಮಿಡಿ ಶೋಗಳಲ್ಲಿ ಹಲವು ಬಾರಿ ಹಾಸ್ಯ ನಟರು, ಜನರನ್ನು ನಗಿಸುವ ಭರದಲ್ಲಿ, ಕಾರ್ಯಕ್ರಮಕ್ಕೆ ಆಗಮಿಸುವ  ವ್ಯಕ್ತಿಗೆ ಕಿರಿಕಿರಿಯುಂಟು ಮಾಡುವ ಪ್ರಶ್ನೆಗಳನ್ನು ಕೇಳುತ್ತಾರೆ. ಪಾಕಿಸ್ತಾನದ ಹಾಸ್ಯನಟನೊಂದಿಗೂ ಇದೇ ರೀತಿಯ ಘಟನೆ ಸಂಭವಿಸಿದೆ. ಖ್ಯಾತ ಪಾಕಿಸ್ತಾನಿ ಗಾಯಕಿ ಶಾಜಿಯಾ ಮಂಜೂರ್ ಲೈವ್ ಶೋನಲ್ಲಿ ತೀವ್ರ ವಾಗ್ವಾದದ ಬಳಿಕ ಹಾಸ್ಯನಟ ಶೆರ್ರಿ ನನ್ಹಾಗೆ ಕಪಾಳಮೋಕ್ಷ ಮಾಡಿದ್ದಾರೆ. ಗಾಯಕಿ "ಪಬ್ಲಿಕ್ ಡಿಮಾಂಡ್" ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದಳು, ಈ ಸಂದರ್ಭದಲ್ಲಿ ಹಾಸ್ಯನಟ ತಮಾಷೆಗಾಗಿ ಆಕೆಯ ಹನಿಮೂನ್ ಕುರಿತು ಪ್ರಶ್ನೆ ಕೇಳಿದ್ದಾನೆ. ಇದರಿಂದ ಸಿಡಿಮಿಡಿಗೊಂಡ  ಗಾಯಕಿ ಲೈಫ್ ಕಾರ್ಯಕ್ರಮದಲ್ಲಿಯೇ ನಟನನ್ನು ಥಳಿಸಿದ್ದಾಳೆ. (Viral News In Kannada)

ಘಟನೆಯ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಶೆರ್ರಿ ನನ್ಹಾ ತಮಾಷೆ ಮಾಡುಲು  "ಶಾಜಿಯಾ, ನಾವು ಮದುವೆಯಾದ ನಂತರ, ತಕ್ಷಣ ನಿನ್ನನ್ನು ನಮ್ಮ ಹನಿಮೂನ್‌ಗಾಗಿ ಮಾಂಟೆ ಕಾರ್ಲೋಗೆ ಕರೆದುಕೊಂಡು ಹೋಗಬಯಸುತ್ತೇನೆ. ನೀನು ಯಾವ ಕ್ಲಾಸ್ ನಲ್ಲಿ ಬರಲು ಇಷ್ಟಪಡುವಿ?" ಎಂದು ಕೇಳುತ್ತಾನೆ.  ಈ ಪ್ರಶ್ನೆಗೆ ಶಾಜಿಯಾ ಕಿರಿಕಿರಿಗೊಂಡಿದ್ದು, ನಂತರ ಇಬ್ಬರ ಮಧ್ಯೆ ಭಾರಿ ವಾಗ್ವಾದವೆ ನಡೆದು, ಜಗಳದ ರೂಪ ತಳೆದಿದೆ. ನಂತರ ಗಾಯಕಿ ಒಂದರ ಮೊಲೊಂದರಂತೆ ಹಲವು ಬಾರಿ ಹಾಸ್ಯ ನಟನಿಗೆ ಕಪಾಳ ಮೋಕ್ಷ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. 

"ಕಳೆದ ಸಲ ನಿನ್ನ ಮಾತನ್ನು ತಮಾಷೆ ಎಂದು ಕರೆದು ಮರೆಮಾಚಿದ್ದೆ ಆದರೆ ಈ ಸಲ ಸೀರಿಯಸ್ ಆಗಿದ್ದೇನೆ, ನೀನು ಹೆಣ್ಣಿನ ಜೊತೆ ಹೀಗೆಯೇ ಮಾತನಾಡುತ್ತೀಯಾ? ಹನಿಮೂನ್ ಗೆ ಕರೆದುಕೊಂಡು ಹೋಗ್ತೀಯಾ?. ಹೆಣ್ಣಿನ ಜೊತೆ ಹೀಗೆಯೇ ವರ್ತಿಸುತ್ತೀಯಾ" ಎನ್ನುತ್ತಾ ಭಾರಿ ಥಳಿಸಿದ್ದಾಳೆ.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಹೊಸ್ಟ್  ಮೊಹ್ಸಿನ್ ಅಬ್ಬಾಸ್ ಹೈದರ್ ಮಧ್ಯಪ್ರವೇಶಿಸಿ ಸ್ಕ್ರಿಪ್ಟ್‌ಗೆ ಅಂಟಿಕೊಳ್ಳುವಂತೆ ನನ್ಹಾಗೆ ಕಟ್ಟುನಿಟ್ಟಾಗಿ ವಾರ್ನಿಂಗ್ ಮಾಡಿದ್ದಾರೆ ಮತ್ತು ಅಂತಹ ಘಟನೆಗಳನ್ನು ತಡೆಯಲು ಸ್ಕ್ರಿಪ್ಟ್‌ಗೆ ತನ್ನದೇ ಆದ ಸಾಲುಗಳನ್ನು ಸೇರಿಸಬೇಡಿ ಎಂದು ಹೇಳಿದ್ದಾರೆ.

ಇದನ್ನೂ ಓದಿ-Viral Video: ದೆಹಲಿ ಮೆಟ್ರೊ ರೈಲಿನಲ್ಲಿ ಸೀಟಿಗಾಗಿ ಹೊಡೆದಾಡಿಕೊಂಡ ಯುವತಿಯರು... ವಿಡಿಯೋ ವೈರಲ್!

ಕೋಪಗೊಂಡ ಗಾಯಕಿ ಸ್ಟುಡಿಯೊದಿಂದ ಹೊರನಡೆದರು ಮತ್ತು ನಾನು ಇನ್ನು ಮುಂದೆ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಹೇಳಿದ್ದಾಳೆ. ಆದಾಗ್ಯೂ, ವೈರಲ್ ವೀಡಿಯೊ ಘಟನೆಯ ಸತ್ಯಾಸತ್ಯತೆಯ ಬಗ್ಗೆ ಹಲವು ಊಹಾಪೋಹಗಳನ್ನು ಹುಟ್ಟುಹಾಕಿದೆ, ಇದು ಸ್ಕ್ರಿಪ್ಟ್ ಮಾಡಲ್ಪಟ್ಟಿದೆಯೇ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ-Viral Video: ತನ್ನ ಕಣ್ಣೆದುರಲ್ಲೇ ಪರಪುರುಷನಿಗೆ ಕಿಸ್ ಮಾಡಿದ ಪತ್ನಿ! ಪತಿ ಮಾಡಿದ್ದೇನು ನೀವೇ ನೋಡಿ!

ವೀಡಿಯೊ ಕುರಿತು ಕಾಮೆಂಟ್ ಮಾಡಿದ ಓರ್ವ ಬಳಕೆದಾರ, "ಬಹುಶಃ ಇದು ಎಲ್ಲಾ ಸ್ಕ್ರಿಪ್ಟ್ ಆಗಿರಬಹುದು ಮತ್ತು ಇದು ತಮಾಷೆಯಾಗಿ ಹೊರಹೊಮ್ಮುತ್ತದೆ." ಎಂದು ಹೇಳಿದ್ದಾರೆ.  ಮತ್ತೊರ್ವ ಬಳಕೆದಾರ "ಇಲ್ಲ, ಇದು ಪಕ್ಕಾ ಸ್ಕ್ರಿಪ್ಟ್ ಆಗಿದೆ." ಎಂದಿದ್ದಾರೆ ಮೂರನೇ ಬಳಕೆದಾರರು  "ಅಂತ್ಯದಲ್ಲಿ ಇದು ತಮಾಷೆಯ ರೂಪ ಪಡೆದುಕೊಳ್ಳುತ್ತದೆ" ಎಂದಿದ್ದಾರೆ. 

ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Section: 
English Title: 
viral video commedian ask question related to honeymoon to guest singer here is what happened watch video
News Source: 
Home Title: 

ಲೈವ್ ಕಾಮಿಡಿ ಷೋನಲ್ಲಿ ಅತಿಥಿಗೆ ಹನಿಮೂನ್ ಕುರಿತು ಪ್ರಶ್ನೆ ಕೇಳಿದ ಕಾಮಿಡಿಯನ್... ವಿಡಿಯೋ ನೋಡಿ!

Viral Video: ಲೈವ್ ಕಾಮಿಡಿ ಷೋನಲ್ಲಿ ಅತಿಥಿಗೆ ಹನಿಮೂನ್ ಕುರಿತು ಪ್ರಶ್ನೆ ಕೇಳಿದ ಕಾಮಿಡಿಯನ್... ಗತಿ ಏನಾಗಿದೆ ನೀವೇ ನೋಡಿ!
Yes
Is Blog?: 
No
Tags: 
Facebook Instant Article: 
Yes
Highlights: 

ಈ ಸಂದರ್ಭದಲ್ಲಿ ಕಾರ್ಯಕ್ರಮದ ಹೊಸ್ಟ್  ಮೊಹ್ಸಿನ್ ಅಬ್ಬಾಸ್ ಹೈದರ್ ಮಧ್ಯಪ್ರವೇಶಿಸಿ

ಸ್ಕ್ರಿಪ್ಟ್‌ಗೆ ಅಂಟಿಕೊಳ್ಳುವಂತೆ ನನ್ಹಾಗೆ ಕಟ್ಟುನಿಟ್ಟಾಗಿ ವಾರ್ನಿಂಗ್ ಮಾಡಿದ್ದಾರೆ ಮತ್ತು

ಅಂತಹ ಘಟನೆಗಳನ್ನು ತಡೆಯಲು ಸ್ಕ್ರಿಪ್ಟ್‌ಗೆ ತನ್ನದೇ ಆದ ಸಾಲುಗಳನ್ನು ಸೇರಿಸಬೇಡಿ ಎಂದು ಹೇಳಿದ್ದಾರೆ.

Mobile Title: 
ಲೈವ್ ಕಾಮಿಡಿ ಷೋನಲ್ಲಿ ಅತಿಥಿಗೆ ಹನಿಮೂನ್ ಕುರಿತು ಪ್ರಶ್ನೆ ಕೇಳಿದ ಕಾಮಿಡಿಯನ್... ವಿಡಿಯೋ ನೋಡಿ!
Nitin Tabib
Publish Later: 
No
Publish At: 
Thursday, February 29, 2024 - 16:37
Created By: 
Nitin Tabib
Updated By: 
Nitin Tabib
Published By: 
Nitin Tabib
Request Count: 
1
Is Breaking News: 
No
Word Count: 
334