Rare Whale in Andra Pradesh: ಕರಾವಳಿ ಭಾಗದಲ್ಲಿ ಆಗಾಗ ಹಲವು ವಿಚಿತ್ರಗಳು ನಡೆಯುತ್ತಲೇ ಇರುತ್ತವೆ. ಅದು ಅಲ್ಲದೇ, ಸಮುದ್ರವಿರುವುದರಿಂದ ಅಪರೂಪದ ಸಮುದ್ರ ಜೀವಿಗಳು ಕಣ್ಮನ ಸೆಳೆಯುವುದರಲ್ಲಿ ಎರಡು ಮಾತಿಲ್ಲ. ಈ ಕ್ರಮದಲ್ಲಿ ಸೋಮವಾರ ಮಧ್ಯಾಹ್ನ ಇಚ್ಚಾಪುರ ಮಂಡಲ ಹಾಗೂ ಡೊಂಕೂರು ಕಡಲ ತೀರದಲ್ಲಿ ಅಪರೂಪದ ಬೃಹತ್ ಗಾತ್ರದ ಸತ್ತ ಮೀನೊಂದು ಕೊಚ್ಚಿಕೊಂಡು ತಡಕ್ಕೆ ಬಂದು ಸೇರಿದೆ. ಈ ಮೀನು ಸುಮಾರು 16 ಅಡಿ ಉದ್ದ ಮತ್ತು ಸುಮಾರು 6 ಅಡಿ ಅಗಲವಿದೆ ಎಂಬುದಾಗಿ ತಿಳಿದು ಬಂದಿದೆ.
ಶ್ರೀಕಾಕುಳಂ ಆಂಧ್ರಪ್ರದೇಶ ರಾಜ್ಯದ ಅತಿ ಉದ್ದದ ಕರಾವಳಿಯನ್ನು ಹೊಂದಿರುವ ಜಿಲ್ಲೆಯಾಗಿದೆ. ಜಿಲ್ಲೆಯಲ್ಲಿ 193 ಕಿ.ಮೀ. ಬಂಗಾಳಕೊಲ್ಲಿಯು ಕರಾವಳಿಯುದ್ದಕ್ಕೂ ವ್ಯಾಪಿಸಿದೆ. ಹಾಗಾಗಿಯೇ ಈ ಕರಾವಳಿ ಪ್ರದೇಶದಲ್ಲಿ ಆಗಾಗ ಹಲವು ವಿಚಿತ್ರಗಳು ನಡೆಯುತ್ತಲೇ ಇರುತ್ತವೆ. ಅಪರೂಪದ ಸಮುದ್ರ ಜೀವಿಗಳು ಕಾಣ ಸಿಗುತ್ತಲೇ ಇರುತ್ತದೆ.
ಇದನ್ನೂ ಓದಿ: ಇಡ್ಲಿ-ದೋಸೆ ಮಾರಾಟದಿಂದ ಪ್ರತಿತಿಂಗಳು 5ಕೋಟಿ ಗಳಿಸುತ್ತಿರುವ ರಾಮೇಶ್ವರಂ ಕೆಫೆ ಆರಂಭವಾದದ್ದು ಹೇಗೆ?
ಈ ಅಪರೂಪದ ಮೀನಿನ ತೂಕ ಎರಡು ಟನ್ ಎಂದು ಸ್ಥಳೀಯ ಮೀನುಗಾರರು ಅಂದಾಜಿಸಿ ತಿಳಿಸಿದ್ದಾರೆ. ಇಷ್ಟೊಂದು ಬೃಹತ್ ಗಾತ್ರದ ಮೀನು ಕೊಚ್ಚಿಕೊಂಡು ಹೇಗೆ ಬಂದು ಎಂಬ ಬಗ್ಗೆ ಇನ್ನೂ ಸರಿಯಾದ ಮಾಹಿತಿ ಸಿಕ್ಕಿಲ್ಲ. ಆದರೆ, ಕೇಲವರು ಇದಕ್ಕೆ ಆಹಾರದ ಕೊರತೆ ಕಾರಣವಾಗಿರಬಹುದು ಎಂದರೆ ಇನ್ನೂ ಕೆಲವರು ಅನಾರೋಗ್ಯದಿಂದ ಸಾವನ್ನಪ್ಪಿರಬಹುದು ಇಲ್ಲವೇ ಸಮುದ್ರದಲ್ಲಿ ಭಾರವಾದ ದೋಣಿಗಳನ್ನು ಹಾದುಹೋದು ಹೊಗುವ ಸಮಯದಲ್ಲಿ ಇದಕ್ಕೆ ಗಾಯಗೊಂಡಿರಬಹುದು ಎಂದು ನಂಬಲಾಗಿದೆ. ಈ ಮೀನನ್ನು ಅಲ್ಲಿಯ ಸ್ಥಳಿಯರು ಪುಲಿ ಬಗ್ಗು ಪೊರ್ರ ಮೀನು ಎಂದು ಕರೆಯುತ್ತಾರೆ.
ಇದನ್ನೂ ಓದಿ: ಮಾನವ ದೇಹದ ಮೇಲೆ ಬಾಹ್ಯಾಕಾಶದ ಪರಿಣಾಮಗಳು: ಗಿರೀಶ್ ಲಿಂಗಣ್ಣ
ಮೀನು ನೋಡಲು ಸ್ಥಳೀಯರು ಮುಗಿಬಿದ್ದರು
ಅಪರೂಪದ ಹಾಗೂ ಬೃಹತ್ ಗಾತ್ರದ ಮೀನು ಆಗಿರುವುದರಿಂದ ಡೊಂಕೂರು ಸುತ್ತಮುತ್ತಲಿನ ಗ್ರಾಮಸ್ಥರು ಮೀನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಇಷ್ಟು ದೊಡ್ಡ ಗಾತ್ರದ ಮೀನನ್ನು ನೋಡಿದ ಕೆಲವರು ಫೋಟೋ ತೆಗೆಸಿಕೊಂಡರು. ವಿಷಯ ತಿಳಿದು ಪಲಾಸ ಕಾಶಿಬುಗ್ಗ ಅರಣ್ಯ ವಲಯದ ಅಧಿಕಾರಿ ಮುರಳಿನಾಯುಡು ಆಗಮಿಸಿ ಸತ್ತ ಮೀನುಗಳನ್ನು ಪರಿಶೀಲಿಸಿದ, ನಂತರ ಮರಣೋತ್ತರ ಪರೀಕ್ಷೆ ನಡೆಸಿ ಸಮುದ್ರ ತೀರದಲ್ಲಿ ಅದನ್ನು ಹೂಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.