ನ್ಯೂಯಾರ್ಕ್: ಅಮೆರಿಕದ ಹ್ಯೂಸ್ಟನ್ನಲ್ಲಿ 'ಹೌಡಿ ಮೋದಿ' ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಮೆರಿಕದಲ್ಲಿ ಭಾನುವಾರ (ಸೆಪ್ಟೆಂಬರ್ 22) ನಡೆದ ಈ ಕಾರ್ಯಕ್ರಮದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ 50 ಸಾವಿರಕ್ಕೂ ಹೆಚ್ಚು ಜನರನ್ನುದ್ದೇಶಿಸಿ ಮಾತನಾಡಿದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 'ಹೌಡಿ ಮೋದಿ' ಕಾರ್ಯಕ್ರಮದ ಬಗ್ಗೆ ಪ್ರಪಂಚದಾದ್ಯಂತ ಚರ್ಚಿಸಲಾಗುತ್ತಿದೆ. ಏತನ್ಮಧ್ಯೆ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು ಆ ಬಾಲಕನನ್ನು ಸ್ಮಾರ್ಟ್ ಬಾಯ್ ಇಂದು ಕರೆಯುತ್ತಿದ್ದಾರೆ.
ವಾಸ್ತವವಾಗಿ, ಹೌಡಿ ಮೋದಿ ಕಾರ್ಯಕ್ರಮ ಮುಗಿದ ನಂತರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ವೇದಿಕೆಯಿಂದ ಇಳಿದು ಹೊರ ಹೋಗುತ್ತಿದ್ದರು. ಅದೇ ಸಮಯದಲ್ಲಿ, ಈ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದ ಮಕ್ಕಳು ನಿಂತಿದ್ದರು. ಪಿಎಂ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಮಕ್ಕಳೊಂದಿಗೆ ಹಸ್ತಲಾಘವ ಮಾಡಿ ಮುಂದೆ ಸಾಗುತ್ತಿದ್ದರು. ಆಗ ಹದಿಹರೆಯದ ಒಂದು ಹುಡುಗ ಮುಂದೆ ಬಂದು ಇಬ್ಬರನ್ನೂ ಸೆಲ್ಫಿ ಕೇಳಿದ. ಇಬ್ಬರೂ ನಾಯಕರು ಅದಕ್ಕೆ ಒಪ್ಪಿದರು. ಆಗ ಬಾಲಕ ತನ್ನ ಫೋನ್ ಮೂಲಕ ಇಬ್ಬರೊಂದಿಗೂ ಸೆಲ್ಫಿ ತೆಗೆದುಕೊಂಡಿದ್ದಾನ. ಪಿಎಂಒ ಇಂಡಿಯಾ ಈ ಟ್ವಿಟರ್ ಪುಟದಲ್ಲಿ ಈ ವಿಡಿಯೋ ಹಂಚಿಕೊಂಡಿದೆ.
Memorable moments from #HowdyModi when PM @narendramodi and @POTUS interacted with a group of youngsters. pic.twitter.com/8FFIqCDt41
— PMO India (@PMOIndia) September 23, 2019
ಈ ಸಮಯದಲ್ಲಿ, ಅಲ್ಲಿ ನಿಂತಿದ್ದ ಅವನ ಉಳಿದ ಸಹಚರರು ಆಶ್ಚರ್ಯಚಕಿತರಾದರು. ಪಿಎಂ ಮೋದಿ ಯುವಕನ ಬೆನ್ನು ತಟ್ಟಿದರು. ಅದೇ ಸಮಯದಲ್ಲಿ, ಡೊನಾಲ್ಡ್ ಟ್ರಂಪ್ ಮತ್ತೆ ಅವರೊಂದಿಗೆ ಸಂಭಾಷಣೆ ನಡೆಸಿದರು. ಈಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಹೌಡಿ ಮೋದಿ ಕಾರ್ಯಕ್ರಮದ ಮೊದಲು ಎನ್ಆರ್ಜಿ ಕ್ರೀಡಾಂಗಣದಲ್ಲಿ ಹೆಚ್ಚಿನ ಸಂಖ್ಯೆಯ ಎನ್ಆರ್ಐಗಳು ಸೇರಿದ್ದರು. ಈ ಸ್ಮಾರ್ಟ್ ಸೆಲ್ಫಿಯಿಂದಾಗಿ, ಈಗ ಮೋದಿ-ಟ್ರಂಪ್ ಜೊತೆ ಫೋಟೋ ತೆಗೆದುಕೊಂಡಿರುವ ಹುಡುಗನನ್ನು ಸೋಷಿಯಲ್ ಮೀಡಿಯಾದಲ್ಲಿ 'ಸ್ಮಾರ್ಟ್ ಬಾಯ್' ಎಂದು ಕರೆಯಲಾಗುತ್ತಿದೆ. ಸ್ಮಾರ್ಟ್ ಸೆಲ್ಫಿಗಳಿಂದಾಗಿ ಸ್ಮಾರ್ಟ್ ಬಾಯ್ ನಿರಂತರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿನಂದನೆಗಳನ್ನು ಪಡೆಯುತ್ತಿದ್ದಾರೆ.