ಆರಾಧ್ಯ ಬಚ್ಚನ್ʼಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ರಾ ಐಶ್ವರ್ಯಾ ರೈ ! ಇದು ಸತ್ಯವೇ ?

Aaradhya Bachchan Plastic Surgery : ಆರಾಧ್ಯ ಅವರು ತಾಯಿ ಐಶ್ವರ್ಯಾ ರೈ ಅವರೊಂದಿಗೆ ಬೇಬಿ ಪಿಂಕ್ ಲೆಹೆಂಗಾದಲ್ಲಿ ಕಾರ್ಯಕ್ರಮಕ್ಕೆ ಎಂಟ್ರಿ ಕೊಡ್ತಿದ್ದಂತೆ ಎಲ್ಲರ ಕಣ್ಣುಗಳು ಆರಾಧ್ಯ ಕಡೆಗೆ ತಿರುಗಿದವು. 

Written by - Chetana Devarmani | Last Updated : Mar 7, 2024, 09:56 AM IST
  • ಆರಾಧ್ಯ ಬಚ್ಚನ್ ಪ್ಲಾಸ್ಟಿಕ್ ಸರ್ಜರಿ!
  • ಬಾಲಿವುಡ್‌ ನಟಿ ಐಶ್ವರ್ಯಾ ರೈ ಪುತ್ರಿ
  • ಬಚ್ಚನ್‌ ಕುಟುಂಬದ ಕುಡಿಗೆ ಪ್ಲಾಸ್ಟಿಕ್‌ ಸರ್ಜರಿ?
ಆರಾಧ್ಯ ಬಚ್ಚನ್ʼಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ರಾ ಐಶ್ವರ್ಯಾ ರೈ ! ಇದು ಸತ್ಯವೇ ? title=

Aaradhya Bachchan transformation : ಇತ್ತೀಚೆಗಷ್ಟೇ ಜಾಮ್‌ನಗರದಲ್ಲಿ ನಡೆದ ಮುಖೇಶ್‌ ಅಂಬಾನಿ ಪುತ್ರ ಅನಂತ್ ಅಂಬಾನಿ ಅವರ ಪ್ರಿ ವೆಡ್ಡಿಂಗ್‌ ಸಮಾರಂಭದಲ್ಲಿ ಹಲವು ತಾರೆಯರು ಪಾಲ್ಗೊಂಡಿದ್ದರು. ಬಾಲಿವುಡ್, ಹಾಲಿವುಡ್ ತಾರೆಯರ ಸಮಾಗಮವಾಗಿತ್ತು. ಆದರೆ ಅಷ್ಟೆಲ್ಲ ಜನರ ಮಧ್ಯೆ ಎಲ್ಲರ ಗಮನಸೆಳೆದವರು ಐಶ್‌ ಪುತ್ರಿ ಆರಾಧ್ಯ ಬಚ್ಚನ್.‌ 

ಹಣೆ ಮೇಲೆ ಕೂದಲು, ಮೇಕಪ್ ಇಲ್ಲದೆಯೇ ಕಾಣಿಸಿಕೊಳ್ಳುತ್ತಿದ್ದ ಆರಾಧ್ಯ ಈ ಬಾರಿ ಲುಕ್ ಬದಲಿಸಿದ್ದಾರೆ. ಅವರ ಹಣೆ ನೋಡುವ ಭಾಗ್ಯ ಈ ಬಾರಿ ಅಭಿಮಾನಿಗಳ ಸಿಕ್ಕಿತ್ತು. ಆರಾಧ್ಯ ಅವರ ಈ ಬದಲಾವಣೆಗೆ ಏನು ಕಾರಣ ಎಂಬ ಚರ್ಚೆ ಸೋಷಿಯಲ್‌ ಮೀಡಿಯಾದಲ್ಲಿ ಶುರುವಾಗಿದೆ. 

ಕೇವಲ 12 ವರ್ಷ ಮತ್ತು 3 ತಿಂಗಳ ವಯಸ್ಸಿನ ಆರಾಧ್ಯ ಅವರು ತಾಯಿ ಐಶ್ವರ್ಯಾ ರೈ ಅವರೊಂದಿಗೆ ಬೇಬಿ ಪಿಂಕ್ ಲೆಹೆಂಗಾದಲ್ಲಿ ಕಾರ್ಯಕ್ರಮಕ್ಕೆ ಎಂಟ್ರಿ ಕೊಡ್ತಿದ್ದಂತೆ ಎಲ್ಲರ ಕಣ್ಣುಗಳು ಆರಾಧ್ಯ ಕಡೆಗೆ ತಿರುಗಿದವು. ಆರಾಧ್ಯ ಲೈಟ್ ಮೇಕಪ್‌ ಜೊತೆ ಹೊಸ ಹೇರ್‌ಸ್ಟೈಲ್‌ನೊಂದಿಗೆ ತುಂಬಾ ಗ್ಲಾಮರಸ್ ಆಗಿ ಕಾಣುತ್ತಿದ್ದರು. 

ಇದನ್ನೂ ಓದಿ: ನಟಿ ಜಾಕ್ವೆಲಿನ್ ಫರ್ನಾಂಡಿಸ್ ನಿವಾಸದಲ್ಲಿ ಬೆಂಕಿ, ಆತಂಕದಲ್ಲಿ ಫ್ಯಾನ್ಸ್ !! 

ಆರಾಧ್ಯ ಮುಖದಲ್ಲಿ ಈಗ ಒಂದು ಬೇರೆಯದೇ ಕಳೆ ಬಂದಿದೆ. ಆರಾಧ್ಯ ಬಚ್ಚನ್‌ ಅವರ ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಐಶ್ವರ್ಯಾ ರೈ ಪುತ್ರಿ ಆರಾಧ್ಯ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿದ್ರಾ ಎಂದು ಚರ್ಚಿಸುತ್ತಿದ್ದಾರೆ.

ಕೆಲವರು ಐಶ್ವರ್ಯಾ ಅವರ 90 ರ ದಶಕದ ಲುಕ್‌ʼಗೆ ಆರಾಧ್ಯ ಅವರನ್ನು ಹೋಲಿಸಿದ್ದಾರೆ. ಆರಾಧ್ಯ ಅವರನ್ನು ನೋಡಿದ ನಂತರ ಕೆಲವರು ಐಶ್ವರ್ಯಾ ಅವರ ಮಗಳಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ ಎಂದು ಕಾಮೆಂಟ್ ಮಾಡಲು ಪ್ರಾರಂಭಿಸಿದ್ದಾರೆ. 

ಆರಾಧ್ಯ ಅವರಿಗೆ ಮೂಗು ಮತ್ತು ತುಟಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿರಬಹುದು ಎಂದು ಹೇಳಲಾಗ್ತಿದೆ. ಆರಾಧ್ಯ ಅವರು ಸ್ಕಿನ್ ವೈಟ್ನಿಂಗ್ ಕೂಡ ಮಾಡಿದ್ದಾರೆ ಎಂದು ಜನರು ಬರೆದಿದ್ದಾರೆ. 

ಆರಾಧ್ಯಗೆ ಈಗ ಕೇವಲ 12 ವರ್ಷ ವಯಸ್ಸು. ಆದ್ದರಿಂದ ಅವಳು ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾದಂತೆ ಕಾಣುತ್ತಿಲ್ಲ. ಬದಲಾದ ಕೇಶವಿನ್ಯಾಸ ಮತ್ತು ಮೇಕಪ್‌ನಿಂದ ಈ ಲುಕ್‌ ಬಂದಿದೆ. 

ಇದನ್ನೂ ಓದಿ: ವಿಚ್ಛೇದನಕ್ಕೆ ಇದೇ ಕಾರಣ.. ನಯನತಾರಾ - ವಿಘ್ನೇಶ್‌ ಶಿವನ್‌ ಸಂಸಾರದಲ್ಲಿ ಬಿರುಕು ಮೂಡಿದ್ದು ಇಲ್ಲಿಂದಲೇ !? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News