7th Pay Commission: ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಇದು ಸರ್ಕಾರಿ ನೌಕರರಿಗೆ ಸಂಬಂಧಿಸಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ತುಟ್ಟಿಭತ್ಯೆ(DA Hike), ಮನೆಬಾಡಿಗೆ ಭತ್ಯೆ (HRA Hike) ಹೆಚ್ಚಳದ ಬಳಿಕ ಇದೀಗ ಗ್ರ್ಯಾಚೂಟಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಮೋದಿ ಸರ್ಕಾರವು ಗ್ರಾಚ್ಯುಟಿಯ ತೆರಿಗೆ ಮುಕ್ತ ಮಿತಿಯನ್ನು (Tax Free Gratuity Limit) 25 ಲಕ್ಷ ರೂ.ಗಳಿಗೆ ಹೆಚ್ಚಿಸಿದೆ. ಅರ್ಥಾತ್, ಈ ಮೊತ್ತದವರೆಗಿನ ಗ್ರಾಚ್ಯುಟಿಗೆ ಯಾವುದೇ ತೆರಿಗೆ ಇರುವುದಿಲ್ಲ. ಮೊದಲು ಇದರ ಮಿತಿ 20 ಲಕ್ಷ ರೂ.ಗಳಾಗಿತ್ತು. ಮಾರ್ಚ್ 8, 2019 ರ ಅಧಿಸೂಚನೆಯಲ್ಲಿ, ಸಿಬಿಡಿಟಿ ತೆರಿಗೆ ಮುಕ್ತ ಗ್ರಾಚ್ಯುಟಿ ಮಿತಿಯನ್ನು 10 ಲಕ್ಷದಿಂದ 20 ಲಕ್ಷಕ್ಕೆ ಹೆಚ್ಚಿಸಿತ್ತು.(Business News In Kannada)
ಇದನ್ನೂ ಓದಿ-HRA Hike: ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಸರ್ಕಾರಿ ನೌಕರರ ಈ ಈ ಭತ್ಯೆಯಲ್ಲಿಯೂ ಶೇ. 3 ರಷ್ಟು ಹೆಚ್ಚಳ!
ತುಟ್ಟಿ ಭತ್ಯೆಯಲ್ಲಿ ಶೇ.4ರಷ್ಟು ಹೆಚ್ಚಳ
ಇದಲ್ಲದೇ ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿ ಭತ್ಯೆ ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ. 4ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ (Modi Cabinet) ಒಪ್ಪಿಗೆ ಸೂಚಿಸಿದೆ. ಅದರಂತೆ ಇದೀಗ ನೌಕರರು ಶೇ. 50 ರ ದರದಲ್ಲಿ ತುಟ್ಟಿಭತ್ಯೆಯನ್ನು ಪಡೆಯಲಿದ್ದಾರೆ. ಈ ತುಟ್ಟಿಭತ್ಯೆ ಜನವರಿ 1, 2024 ರಿಂದ ಅನ್ವಯಿಸಲಿದೆ. ಅರ್ಥಾತ್ ಮಾರ್ಚ್ ತಿಂಗಳ ವೇತನದ ಜೊತೆಗೆ ಜನವರಿ ಮತ್ತು ಫೆಬ್ರುಯರಿ ತುಟ್ಟಿಭತ್ಯೆ ಕೂಡ ಅರಿಯರ್ ರೂಪದಲ್ಲಿ ಸಿಗಲಿದೆ. ನಾಲ್ಕನೇ ಬಾರಿ ತುಟ್ಟಿಭತ್ಯೆ ಶೇ.4ರಷ್ಟು ಏರಿಕೆಯಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ. ತುಟ್ಟಿ ಭತ್ಯೆ ಹೆಚ್ಚಳದಿಂದ ಸರ್ಕಾರದ ಬೊಕ್ಕಸಕ್ಕೆ 12,868.72 ರೂ.ಗಳಷ್ಟು ಆರ್ಥಿಕ ಹೊರೆ ಬೀಳಲಿದೆ.
ಇದನ್ನೂ ಓದಿ-Salary Hike: ಬಂದೇ ಬಿಟ್ತು ಗುಡ್ ನ್ಯೂಸ್, ಸರ್ಕಾರಿ ನೌಕರ ತುಟ್ಟಿಭತ್ಯೆಯಲ್ಲಿ ಶೇ. 4 ರಷ್ಟು ಹೆಚ್ಚಳ
#Cabinet has approved the decision to hike dearness allowance for central government employees and pensioners by 4 %.
▪️Now the #DA will reach to 50%.
▪️House Rent allowance will be increased. Now gratuity limit has reached to 25 lakh rupees - Union Minister @PiyushGoyal… pic.twitter.com/jRcmR88W5y
— All India Radio News (@airnewsalerts) March 7, 2024
ತುಟ್ಟಿ ಭತ್ಯೆ ಶೇ. 50 ತಲುಪಿದ ಬಳಿಕ ಅದು ಮತ್ತೆ ಶೂನ್ಯ ವಾಗಲಿದೆ
ಕೇಂದ್ರ ನೌಕರರು ಜನವರಿ 2024 ರಿಂದ ಶೇಕಡಾ 50 ರಷ್ಟು ಡಿಎ ಪಡೆಯಲಿದ್ದಾರೆ. ಆದರೆ, ಇದಾದ ಬಳಿಕ ತುಟ್ಟಿ ಭತ್ಯೆ ಶೂನ್ಯಕ್ಕೆ ಇಳಿಕೆಯಾಗಿ. ಇದರ ನಂತರ ಅದರ ಲೆಕ್ಕಾಚಾರ ಪುನಃ 0 ಯಿಂದ ಪ್ರಾರಂಭವಾಗುತ್ತದೆ. 50ರಷ್ಟು ಡಿಎಯನ್ನು ನೌಕರರ ಮೂಲ ವೇತನಕ್ಕೆ ಸೇರಿಸಲಾಗುತ್ತದೆ. ನೌಕರನ ವೇತನ ಬ್ಯಾಂಡ್ ಪ್ರಕಾರ ಕನಿಷ್ಠ ಮೂಲ ವೇತನವು 18000 ರೂ ಆಗಿದ್ದರೆ, ಶೇ. 50 ರಷ್ಟು ತುಟ್ಟಿಭತ್ಯೆ ಅಂದರೆ 9000 ರೂಗಳು ಅವರ ಮೂಲ ವೇತನಕ್ಕೆ (Salary Hike) ಸರ್ಪಡೆಯಾಗಿ, ಅವರ ಮೂಲ ವೇತನ 27.000 ಗಳಾಗಲಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ