ಪ್ರಹ್ಲಾದ್ ಜೋಶಿ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕುತ್ತಾ ಕಾಂಗ್ರೆಸ್?

Written by - Zee Kannada News Desk | Last Updated : Mar 9, 2024, 01:32 AM IST
  • ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಲೇ ಇದೆ.
  • ಉತ್ತರ ಕರ್ನಾಟಕದ ಹೆಬ್ಬಾಗಿಲು ಸಾಹಿತ್ಯ ಸಂಗೀತದ ತವರೂರು ಅಂತಲೇ ಫೇಮಸ್‌. ಜೊತೆಗೆ ವಿದ್ಯಾಕಾಶಿ, ಪೇಡಾನಗರಿ ಅನ್ನೋ ಕಿರೀಟವೂ ಧಾರವಾಡಕ್ಕಿದೆ.
  • ಕಾಂಗ್ರೆಸ್, ಬಿಜೆಪಿಯಲ್ಲಿ ಅಕಾಂಕ್ಷಿಗಳು ಟಿಕೆಟ್‌ ಪಡೆಯಲು ತೆರೆಮರೆಯಲ್ಲಿ ಭಾರಿ ಪೈಪೋಟಿಯೂ ನಡೆಸುತ್ತಿದ್ದಾರೆ.
 ಪ್ರಹ್ಲಾದ್ ಜೋಶಿ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕುತ್ತಾ ಕಾಂಗ್ರೆಸ್? title=

ಲೋಕಸಭಾ ಚುನಾವಣೆ ಅಂದ್ರೆ ಪ್ರಜಾಪ್ರಭುತ್ವದ ಹಬ್ಬ. ದೇಶಕ್ಕೆ ಪ್ರಧಾನ ಮಂತ್ರಿಯನ್ನ ಆರಿಸೋಕೆ ಜನಪ್ರತಿನಿಧಿಗಳನ್ನು ಚುನಾಯಿಸಿ ಕಳುಹಿಸುವ ಗುರುತರವಾದ ಕೆಲಸ. ಕಾನೂನು, ಆಡಳಿತ ಮತ್ತು ಸಂವಿಧಾನಬದ್ಧ ಸಂಸದರ ಚುನಾವಣೆಯಲ್ಲಿ ಭಾಗಿಯಾಗುವುದು ಜವಾಬ್ದಾರಿ ಮತ್ತು ಹೊಣೆಗಾರಿಕೆ ಕೂಡ. ಸಂಸದರೆಂಬುದೇ ಮಹತ್ವದ ಗೌರವ ಮತ್ತು ತನ್ನದೇ ಆದ ಘನತೆಯನ್ನ ಉಳಿಸಿಕೊಂಡಿರುವ ಸಂವಿಧಾನಬದ್ಧ ಅಧಿಕಾರ. ಹೀಗಾಗಿ ಸಂಸದರನ್ನ ಆಯ್ಕೆ ಮಾಡಲು ಮತದಾರ ಪ್ರಭುಗಳು ಕೂಡ ಬಹು ಎಚ್ಚರಿಕೆಯಿಂದ ಸೈದ್ಧಾಂತಿಕ ಮತ್ತು ಅಭಿವೃದ್ಧಿಯ ಮಾನದಂಡಗಳನ್ನು ಬಳಸಿ ಹಕ್ಕನ್ನು ಚಲಾಯಿಸುತ್ತಾನೆ. ಇಲ್ಲಿ ಒಮ್ಮೆ ಮತದಾರನ ನಾಡಿಮಿಡಿತ ಅರಿತ ವ್ಯಕ್ತಿ ದೆಹಲಿ ಪ್ರವೇಶಿಸಿ 5 ವರ್ಷ ಸಂಸದರಾಗಿ ಅಧಿಕಾರ ಚಲಾಯಿಸುತ್ತಾರೆ. ಈ ರೀತಿಯ ಸಂಸತ್‌ ಅಭ್ಯರ್ಥಿ, ಮತದಾರರ ಮನದಾಳ ಮತ್ತು ಕ್ಷೇತ್ರಗಳ ಲೆಕ್ಕಾಚಾರದ ಸಮಗ್ರ ಮಾಹಿತಿಯನ್ನು ವೀಕ್ಷಕರ ಮುಂದಿಡುವುದೇ ಲೋಕ ಲೆಕ್ಕಾಚಾರ, ಸಂಸದರ ರಿಪೋರ್ಟ್‌ ಕಾರ್ಡ್‌.

ಲೋಕಸಭೆ ಚುನಾವಣೆಗೆ ಕೆಲವು ದಿನಗಳು ಮಾತ್ರ ಬಾಕಿಯಿದೆ. ದಿನಾಂಕ ಘೋಷಣೆಗೆ ದಿನಗಳು ಸಮೀಪಿಸುತ್ತಿರುವಂತೆ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ  ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಲೇ ಇದೆ. ಉತ್ತರ ಕರ್ನಾಟಕದ ಹೆಬ್ಬಾಗಿಲು ಸಾಹಿತ್ಯ ಸಂಗೀತದ ತವರೂರು ಅಂತಲೇ ಫೇಮಸ್‌. ಜೊತೆಗೆ ವಿದ್ಯಾಕಾಶಿ, ಪೇಡಾನಗರಿ ಅನ್ನೋ ಕಿರೀಟವೂ ಧಾರವಾಡಕ್ಕಿದೆ. ಕಾಂಗ್ರೆಸ್, ಬಿಜೆಪಿಯಲ್ಲಿ ಅಕಾಂಕ್ಷಿಗಳು ಟಿಕೆಟ್‌ ಪಡೆಯಲು ತೆರೆಮರೆಯಲ್ಲಿ ಭಾರಿ ಪೈಪೋಟಿಯೂ ನಡೆಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಲಿಂಗಾಯತರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದು ಕುರುಬ ಮತ್ತು ಮುಸ್ಲಿಂ ಮತದಾರರು ಕೂಡ ನಿರ್ಣಾಯಕ.. ಧಾರವಾಡದ 8 ಕ್ಷೇತ್ರಗಳು ಲೋಕಸಭಾ ವ್ಯಾಪ್ತಿಗೆ ಬರಲಿದೆ. ಅಂದ್‌ ಹಾಗೆ ಬಿಜೆಪಿ ಭದ್ರಕೋಟೆಯಾಗಿದ್ದು ಭದ್ರಕೋಟೆ ಒಡೆಯಲು ಕಾಂಗ್ರೆಸ್ ಭಾರೀ ರಣತಂತ್ರ ಮಾಡಿಕೊಂಡಿದೆ.

ಧಾರವಾಡ ಕ್ಷೇತ್ರಕ್ಕೆ ಮೂಲವೇ 2008ರ ಕ್ಷೇತ್ರ ವಿಂಗಡಣೆ. ಇಲ್ಲಿ ಬಿಜೆಪಿ ಭದ್ರವಾಗಿ ಬಲವೂರಲು ಕಾರಣ 90ರ ದಶಕದ ಹುಬ್ಬಳ್ಳಿ ಈದ್ಗಾ ಮೈದಾನ. ಅಲ್ಲಿಂದ ಹಿಂದುತ್ವ ಮತ್ತು ಧಾರ್ಮಿಕ, ರಾಷ್ಟ್ರೀಯತೆ ಹೆಸರಲ್ಲಿ ಬಿಜೆಪಿ ಬಲಿಷ್ಠವಾಗುತಾ ಸಾಗಿತು. ಆಗಲೇ ಬ್ರಾಹ್ಮಣ ಸಮಾಜದ ಪ್ರಲ್ಹಾದ್‌ ಜೋಶಿ ಸ್ಪರ್ಧಿಸಿ ಲಿಂಗಾತರ ಮತದಾರ ಪ್ರಭುಗಳ ವಿಶ್ವಾಸಗಳಿಸಿ ಈಗಲೂ ಖುಷಿಯಾಗಿದ್ದಾರೆ..

* ಹಾಲಿ ಸಂಸದ-ಪ್ರಲ್ಹಾದ್‌ ಜೋಶಿ
* ಪ್ರಹ್ಲಾದ ಜೋಶಿ, 6,84,837  (ಶೇ.56.41)
* ವಿನಯ ಕುಲಕರ್ಣಿ, 4,79,765  (ಶೇ.39.51)
* ಲಿಂಗಾಯತ-ವೀರಶೈವ, ಕುರುಬ 
* ಮುಸ್ಲಿಂ ಮತಗಳೇ ನಿರ್ಣಾಯಕ 
* 8 ಅಸೆಂಬ್ಲಿ ಕ್ಷೇತ್ರಗಳ ಲೋಕಸಭೆ
* ಒಟ್ಟು ಮತದಾರರು: 17,82,368

ಸಂಸದರ ಸಾಧನೆ

1. 2014 ರಿಂದ 2023 ರವರೆಗೆ 8,300 ಕೋಟಿ ಅನುದಾನ 
2. ರಾಜ್ಯ ರೈಲ್ವೆಗೆ 7,561 ಕೋಟಿ ತರುವಲ್ಲಿ ಪ್ರಮುಖ ಪಾತ್ರ
3. IIT, IIIT, ವಿಧಿ ವಿಜ್ಞಾನ ಪ್ರಯೋಗಾಲಯ ವಿವಿ ಶುರು
4. ಸ್ಮಾರ್ಟ್ ಸಿಟಿ ಸೇರಿ 31ಕಿಮೀ ಚತುಷ್ಪಥ ರಸ್ತೆ ಕಾಮಗಾರಿಗೆ 

ಸಂಸದರ ಪ್ಲಸ್

* ಜಗದೀಶ ಶೆಟ್ಟರ್ ಬಿಜೆಪಿಗೆ ವಾಪಸ್ಸಾತಿ
* ಕ್ಷೇತ್ರದಲ್ಲಿ ನಾಲ್ವರು BJP ಶಾಸಕರು
* ಕೇಂದ್ರದಲ್ಲಿ ಉನ್ನತ ಸ್ಥಾನ, ಮೋದಿ ಆಪ್ತ
* ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರುವಲ್ಲಿ ಸಫಲ
* ಬೆಂಗಳೂರಿಗೆ ವಿಶೇಷ ವಂದೇ ಭಾರತ್ ರೈಲು
* IIT, IIIT  ವಿಧಿ ವಿಜ್ಞಾನ ಪ್ರಯೋಗಾಲಯ 

ಸಂಸದರ ಮೈನಸ್‌

* ಮಹಾದಾಯಿ ನೀರು ತರುವಲ್ಲಿ ವಿಫಲ
* ಪ್ರತಿ ತಾಲೂಕಲ್ಲೂ ಸಂಸದರ ಕಾರ್ಯ ಅಲ್ಪ
* ರೌಡಿಶೀಟರ್ ಎದುರು ಪೊಲೀಸ್ ಅಧಿಕಾರಿಗೆ ತರಾಟೆ
* ಪ್ರತಿ ಬಾರಿ ಕಳಸಾ ಬಂಡೂರಿ ನೀರು ತರುವ ಭರವಸೆ
* ಲಿಂಗಾಯತ ಮತಗಳು ಬಿಜೆಪಿಗೆ ವಿರುದ್ಧ ಸಾಧ್ಯತೆ
* ಕ್ಷೇತ್ರದಲ್ಲಿ ಲಿಂಗಾಯತ ಪರವಾದ ಅಲೆ ಸೃಷ್ಟಿ
* ಮೂವರು ಕಾಂಗ್ರೆಸ್ ಶಾಸಕರು, ಓರ್ವ ಸಚಿವ

ಇನ್ನು ಭಾರತೀಯ ಜನತಾ ಪಾರ್ಟಿಗೆ ಈ ಸಲ ತುತ್ತು ಸುಲಭವಾಗಿಲ್ಲ. ಟೈಮ್‌ ಕಷ್ಟವಾಗಿದೆ. ಇಷ್ಟು ದಿನ ಕೇಸರಿ ಬಾವುಟ ಎದೆಗಪ್ಪಿಕೊಂಡಿದ್ದ ಪ್ರಮುಖ ಲಿಂಗಾಯತ-ವೀರಶೈವ ಸಮುದಾಯ ಈ ಬಾರಿ ಜೋಶಿಗೆ ಎಚ್ಚರಿಕೆ ನೀಡೋ ಸಂಭವ ಜಾಸ್ತಿಯಿದೆ ಅಂತಿದೆ ಗ್ರೌಂಡ್‌ ರಿಪೋರ್ಟ್‌.. ಆದರೂ ಮೋದಿ ನಾಮಬಲ ಮತ್ತು ಅಯೋಧ್ಯೆಯ ಶ್ರೀರಾಮನ ಪ್ರಭಾವಳಿ ಹೆಚ್ಚಾಗಿ ಕಾಣಿಸಿಕೊಂಡಿದೆ.

ಕಾಂಗ್ರೆಸ್ ಪ್ಲಸ್ 

* ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ
* ಸಚಿವ ಸಂತೋಷ ಲಾಡ್ ಬಲ, ವರ್ಚಸ್ಸು
* ಶಾಸಕರಾದ ವಿನಯ್ ಕುಲಕರ್ಣಿ, ಕೋನರೆಡ್ಡಿ 
* ಮತ ಬಿಜೆಪಿಗೆ ಹೋಗದಂತೆ ನೋಡಿಕೊಳ್ಳುವುದು
* ಲಿಂಗಾಯತ ಮತ ಕಾಂಗ್ರೆಸ್ ಹಿಡಿದು ಇಟ್ಟಿರುವುದು

ಕಾಂಗ್ರೆಸ್ ಮೈನಸ್‌

 * ಸೂಕ್ತವಾದ ಅಭ್ಯರ್ಥಿ ಆಯ್ಕೆ ಮಾಡದಿರುವುದು
* ಅಸಮಾಧಾನದ ಹೊಗೆ, ಬಂಡಾಯ ಸಾಧ್ಯತೆ
* ಬಣ ರಾಜಕೀಯ, ಗುಂಪುಗಾರಿಕೆ ಸೃಷ್ಟಿ ಸಂಭವ
* ಜೋಶಿ ಎದುರು ಪ್ರಬಲ ಅಭ್ಯರ್ಥಿ ಹಾಕದಿರುವುದು

 ಅಸಲಿಗೆ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ ಸರ್ಕಾರ, ಸಿದ್ದರಾಮಯ್ಯರ ಪಂಚ ಗ್ಯಾರಂಟಿ ಯೋಜನೆಗಳು ವರದಾನವಾಗೋ ಥರ ಕಾಣ್ತಿದೆ. ಅದೇ ರೀತಿ.. ಪ್ರಬಲ ನಾಯಕರ ಕೊರತೆ ಖುಷಿಯ ಜೊತೆಗೆ ಸ್ವಲ್ಪ ಕಹಿಯನ್ನೂ ಮುಂದಿಟ್ಟಿದೆ.

ಯಾರು ರಣಕಲಿಗಳು..?

1. ಪ್ರಹ್ಲಾದ್ ಜೋಶಿ-ಬಿಜೆಪಿ
2. ವಿಜಯ್ ಕುಲಕರ್ಣಿ, ವಿನಯ್ ಸೋದರ-ಕಾಂಗ್ರೆಸ್‌
3. ಬಸವರಾಜ್ ಗುರಿಕಾರ, ಶಿಕ್ಷಕರ ಸಂಘ - ಕಾಂಗ್ರೆಸ್‌
4. ಶಿವಲೀಲಾ ಕುಲಕರ್ಣಿ, ವಿನಯ್ ಪತ್ನಿ- ಕಾಂಗ್ರೆಸ್‌
5. ರಜತ್ ಉಳ್ಳಾಗಡ್ಡಿಮಠ, ಸಚಿವೆ ಹೆಬ್ಬಾಳ್ಕರ್‌ ಅಳಿಯ
6. ಮಯೂರ್ ಮೋರೆ, ಕಾಂಗ್ರೆಸ್ ಯುವ ನಾಯಕ

 ಏನೇ ಆಗಲಿ. ಧಾರವಾಡ ಲೋಕಸಭಾ ಕ್ಷೇತ್ರ ಹೈವೋಲ್ಟೇಜ್‌ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದೆ. ಈಗೆಲ್ಲಾ ಕೇವಲ ಉಭಯ ಪಕ್ಷಗಳ ನಾಯಕರಲ್ಲೂ ಹಲವು ರೀತಿಯ ಚರ್ಚೆ, ಲೆಕ್ಕಾಚಾರ ನಡೀತಿದೆ. ಯಾವುದೇ ಪ್ರಮುಖ ತೀರ್ಮಾನ

(2014)

ಪ್ರಹ್ಲಾದ ಜೋಶಿ, ಬಿಜೆಪಿ - 5,45,935 ಶೇ. 34.56
ವಿನಯ ಕುಲಕರ್ಣಿ- ಕಾಂಗ್ರೆಸ್ - 4,31,738 ಶೇ. 27.36
ಹನುಮಂತಪ್ಪ ಬಂಕಾಪುರ- ಜೆಡಿಎಸ್, 8836 ಶೇ. 0.56
ಅಂತರ:1,14,197     ಬಿಜೆಪಿ: ಪ್ರಹ್ಲಾದ ಜೋಶಿ, ಗೆಲವು
--------------------------------------------
(2009)

ಪ್ರಹ್ಲಾದ ಜೋಶಿ, ಬಿಜೆಪಿ - 4,46,786 ಶೇ. 31.65

ಎಂ.ಸಿ. ಕುನ್ನೂರ, ಕಾಂಗ್ರೆಸ್ - 3,09,123 ಶೇ. 21.9

ಎಂ.ಸಿ. ತಳಕಲ್ಲಮಠ- ಎನ್ಸಿಪಿ _ 7176 ಶೇ. 0.46

ಅಂತರ: 1,37,663
ಬಿಜೆಪಿ: ಪ್ರಹ್ಲಾದ ಜೋಶಿ, ಗೆಲವು
-----------------------------------------------------------------
ಯಾವ ಪಕ್ಷ ಎಷ್ಟು ಸಲ ಗೆಲುವು..?
1. ಕಾಂಗ್ರೆಸ್: 9 ಗೆಲುವು
2. ಬಿಜೆಪಿ: 7 ಗೆಲುವು  
3. ಜನತಾದಳ - 0
---------------------------------------------
ವಿಧಾನಸಭಾ ಕ್ಷೇತ್ರಗಳ ಬಲಾಬಲ
ಒಟ್ಟು ವಿಧಾಸಭಾ ಕ್ಷೇತ್ರಗಳು 8
ಬಿಜೆಪಿ: 4
ಕಾಂಗ್ರೆಸ್: 4
---------------------------------------------
ಮತದಾರರ ವಿವರ
ಪುರುಷ ಮತದಾರರು: 8,95,562
ಮಹಿಳಾ ಮತದಾರರು: 8,86,716
ಇತರೆ: 90
ಒಟ್ಟು ಮತದಾರರು: 17,82,368
-----------------------------------------­-----
ಜಾತಿವಾರು ಮತದಾರರು
ಲಿಂಗಾಯತ: 5,90,000

ಎಸ್ಸಿ ಮತ್ತು ಎಸ್ಟಿ:  2,60,000

ಮುಸ್ಲಿಂ: 3,65,000

ಕುರುಬ: 1,30,000      
ಬ್ರಾಹ್ಮಣ: 85,000
ಮರಾಠಾ: 1,60,000  
ಇತರೆ: 1,92,368
(ರೆಡ್ಡಿ, ಎಸ್.ಎಸ್.ಕೆ., ಲಂಬಾಣಿ, ಕ್ರಿಶ್ಚಿಯನ್ ಸೇರಿದಂತೆ)
-----------------------------------------
ಸಂಭಾವ್ಯ ಅಭ್ಯರ್ಥಿಗಳು

ಬಿಜೆಪಿ: ಪ್ರಹ್ಲಾದ ಜೋಶಿ

ಕಾಂಗ್ರೆಸ್ ಆಕಾಂಕ್ಷೆಗಳು

ರಜತ್ ಉಳ್ಳಾಗಡ್ಡಿಮಠ
ವಿಜಯ ಕುಲಕರ್ಣಿ
ಮೋಹನ ಲಿಂಬಿಕಾಯಿ
ಸಂತೋಷ ಲಾಡ್

ಇದುವರೆಗೆ ಗೆದ್ದವರು

1952- ಡಿ.ಪಿ. ಕರಮಕರ (ಕಾಂಗ್ರೆಸ್)
1957- ಸರೋಜಿನಿ ಮಹಿಷಿ(ಕಾಂಗ್ರೆಸ್)
1967- ಸರೋಜಿನಿ ಮಹಿಷಿ(ಕಾಂಗ್ರೆಸ್)
1971- ಸರೋಜಿನಿ ಮಹಿಷಿ(ಕಾಂಗ್ರೆಸ್)
1977- ಸರೋಜಿನಿ ಮಹಿಷಿ(ಕಾಂಗ್ರೆಸ್)
1980 - ಡಿ.ಕೆ. ನಾಯ್ಕರ(ಕಾಂಗ್ರೆಸ್)
1984 - ಡಿ.ಕೆ. ನಾಯ್ಕರ (ಕಾಂಗ್ರೆಸ್)
1989 - ಡಿ.ಕೆ. ನಾಯ್ಕರ (ಕಾಂಗ್ರೆಸ್)
1991 - ಡಿ.ಕೆ. ನಾಯ್ಕರ (ಕಾಂಗ್ರೆಸ್)
1996 - ವಿಜಯ ಸಂಕೇಶ್ವರ (ಬಿಜೆಪಿ)
1998 - ವಿಜಯ ಸಂಕೇಶ್ವರ (ಬಿಜೆಪಿ)
1999 - ವಿಜಯ ಸಂಕೇಶ್ವರ (ಬಿಜೆಪಿ)
2004 - ಪ್ರಹ್ಲಾದ ಜೋಶಿ (ಬಿಜೆಪಿ)
2009 - ಪ್ರಹ್ಲಾದ ಜೋಶಿ(ಬಿಜೆಪಿ)
2014 -  ಪ್ರಹ್ಲಾದ ಜೋಶಿ(ಬಿಜೆಪಿ)
2019 - ಪ್ರಹ್ಲಾದ ಜೋಶಿ(ಬಿಜೆಪಿ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News