ಬೆಂಗಳೂರು: ಮಹಿಳಾ ಆರ್ಸಿಬಿ ಪಡೆ ಮಹಿಳಾ ಪ್ರೀಮಿಯರ್ ಲೀಗ್ 2024 ರ ಪ್ರಶಸ್ತಿಯನ್ನು ಗೆಲ್ಲುತ್ತಿದ್ದಂತೆ ಇತ್ತಕಡೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಪುರುಷರ ಆರ್ಸಿಬಿಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿದೆ.
ಕಾರಣವಿಷ್ಟೇ ಕಳೆದ 16 ವರ್ಷಗಳಲ್ಲಿ ಮಾಡಲಾಗದ ಸಾಧನೆಯನ್ನು ಈಗ ಮಹಿಳಾ ಪಡೆ ಕೇವಲ ಎರಡು ವರ್ಷಗಳಲ್ಲಿ ಮಾಡಿತೋರಿಸಿದೆ. ಆ ಮೂಲಕ ಪ್ರತಿ ವರ್ಷ ಈ ಸಲಾ ಕಪ್ ನಮ್ಮದೇ ಎನ್ನುವ ಬರಕ್ಕೆ ಕೊನೆಗೂ ತೆರೆ ಬಿದ್ದಿದೆ.ಸ್ಮೃತಿ ಮಂಧಾನ ನೇತೃತ್ವದ ಮಹಿಳಾ ತಂಡವು ಭಾನುವಾರ ಮಹಿಳಾ ಪ್ರೀಮಿಯರ್ ಲೀಗ್ (WPL) 2024 ರ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂತಿಮವಾಗಿ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಯಶಸ್ಸನ್ನು ಕಂಡಿತು. ಆ ಮೂಲಕ ಹೊಸ ಇತಿಹಾಸವನ್ನು ನಿರ್ಮಿಸಿದೆ.
Congrats, @RCBTweets 🔥🏆 pic.twitter.com/j0cAaNe12R
— Rajasthan Royals (@rajasthanroyals) March 17, 2024
ಇತ್ತಕಡೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ರಾಜಸ್ತಾನ್ ರಾಯಲ್ಸ್ ತಂಡವು ಮೀಮ್ಸ್ ಗಳನ್ನು ಹಂಚಿಕೊಳ್ಳುವ ಮೂಲಕ ಪುರುಷರ ತಂಡವನ್ನು ಟ್ರೋಲ್ ಮಾಡಿದೆ ತಮ್ಮ ಪೋಸ್ಟ್‌ನಲ್ಲಿ, ರಾಜಸ್ಥಾನ್ ತಂಡ ಟಿವಿ ಶೋ "ತಾರಕ್ ಮೆಹ್ತಾ ಕಾ ಊಲ್ತಾ ಚಶ್ಮಾ" ದ ದೃಶ್ಯದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ವ್ಯಂಗವಾಡಿದೆ.
RCB men celebrating women's cup😂 pic.twitter.com/YfOrBeLUCb
— Vontari Vaadini Nenu😁 (@telsusir) March 17, 2024
ಇನ್ನೊಂದೆಡೆಗೆ ಮಹಿಳಾ ತಂಡವು ಪ್ರಶಸ್ತಿ ಗೆಲ್ಲುತ್ತಿದ್ದಂತೆ ಶುಭಾಶಯಗಳ ಸುರುಮಳೆಗಳುಗಳು ಬಂದಿವೆ ಅದರಲ್ಲೂ ಪ್ರಮುಖವಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಭಾರತದ ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ದಿಗ್ಗಜ ಆಟಗಾರರು ಅಭಿನಂಧಿಸಿದ್ದಾರೆ.ಇನ್ನೊಂದೆಡೆಗೆ ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಲು RCB ಯ ಪುರುಷರ ತಂಡದ ಭಾಗವಾಗಿರುವ ವಿರಾಟ್ ಕೊಹ್ಲಿ, ತಂಡದ ಯಶಸ್ಸಿನ ನಂತರ ಸ್ಮೃತಿ ಮಂಧಾನ ಮತ್ತು ಇತರರೊಂದಿಗೆ ವೀಡಿಯೊ ಕರೆ ಮಾಡಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.