ಬೆಂಗಳೂರು: ಇಂದು ಚಿನ್ನಸ್ವಾಮಿ ಕ್ರೀಡಾಂಗಣದ ವಾತಾವರಣ ಎಂದಿನಂತಿರಲಿಲ್ಲ, ಹೌದು, ಟಾಸ್ ಗೆದ್ದು ರಾಯಲ್ ಚಾಲೆಂಜರ್ಸ್ ತಂಡವು ಸನ್ ರೈಸರ್ಸ್ ಹೈದರಾಬಾದ್ ಗೆ ಮೊದಲು ಬ್ಯಾಟಿಂಗ್ ಅವಕಾಶ ನೀಡಿತು.ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಹೈದರಾಬಾದ್ ಪಡೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಕ್ಷರಶಃ ರನ್ ಗಳ ಸುರಿಮಳೆಯನ್ನೇ ಸುರಿಸಿತು.
ಒಂದೆಡೆ ಸನ್ ರೈಸರ್ಸ್ ಹೈದರಾಬಾದ್ ನ ಟ್ರಾವಿಸ್ ಹೆಡ್ ಹಾಗೂ ಇನ್ನೊಂದೆಡೆಗೆ ಕ್ಲಾಸೆನ್ ಅವರ ಕ್ಲಾಸ್ ಬ್ಯಾಟಿಂಗ್ ನಿಂದಾಗಿ ಅರ್ಸಿಬಿ ತಂಡದ ಬೌಲರ್ ಗಳು ವಿಕೆಟ್ ಪಡೆಯುವಲ್ಲಿ ಹೈರಾಣಾಗಿ ಹೊಗಿದ್ದರು. ಇದರ ಫಲವಾಗಿ 16 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು 287 ರನ್ ಗಳನ್ನು ಗಳಿಸುವ ಮೂಲಕ ಅತ್ಯಧಿಕ ರನ್ ಗಳನ್ನು ಗಳಿಸಿದ ತಂಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಯಿತು.
For smashing the 4th fastest ton in the history of IPL, Travis Head receives the Player of the Match award 🏆
Scorecard ▶️ https://t.co/OOJP7G9bLr#TATAIPL | #RCBvSRH pic.twitter.com/0TPxWhPg1T
— IndianPremierLeague (@IPL) April 15, 2024
ಇದನ್ನೂ ಓದಿ: ನಟಿ ಹೇಮಾಮಾಲಿನಿ ಬಗ್ಗೆ ಅಶ್ಲೀಲ ಟೀಕೆ; ಕಾಂಗ್ರೆಸ್ ನಾಯಕ ರಂದೀಪ್ ಸುರ್ಜೇವಾಲ ವಿರುದ್ಧ ಮಹಿಳಾ ಆಯೋಗಕ್ಕೆ ದೂರು!
ಟ್ರಾವಿಸ್ ಹೆಡ್ ಕೇವಲ 39 ಎಸೆತಗಳಲ್ಲಿ ಎಂಟು ಸಿಕ್ಸರ್ ಹಾಗೂ ಒಂಬತ್ತು ಬೌಂಡರಿಗಳ ನೆರವಿನಿಂದ ನಾಲ್ಕನೆಯ ಅತಿ ವೇಗದ ಶತಕ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾದರು.ಇನ್ನೊಂದೆಡೆಗೆ ಇವರಿಗೆ ಸಾಥ್ ನೀಡಿದ ಕ್ಲಾಸೆನ್ ಕೇವಲ 31 ಎಸೆತಗಳಲ್ಲಿ ಏಳು ಸಿಕ್ಸರ್ ಹಾಗೂ ಎರಡು ಬೌಂಡರಿಗಳ ನೆರವಿನೊಂದಿಗೆ 67 ರನ್ ಗಳನ್ನು ಗಳಿಸಿದರು. ನಂತರ ಮಾರ್ಕ್ರಂ ಅಜೇಯ 32 ಹಾಗೂ ಅಬ್ದುಲ್ ಸಮದ್ 37 ಗಳಿಸುವುದರೊಂದಿಗೆ 20 ಓವರ್ ಗಳಲ್ಲಿ ಸನ್ ರೈಸರ್ಸ್ ತಂಡವು 287 ರನ್ ಗಳನ್ನು ಗಳಿಸಿತು.
83 runs. 35 balls. 7 Sixes 🔥
Dinesh Karthik kept the Bengaluru crowd on their feet with a near perfect knock 🎥🔽#TATAIPL | #RCBvSRHhttps://t.co/oNCDDBM5Of
— IndianPremierLeague (@IPL) April 15, 2024
ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿಗಳ ಮುಂದೆ ಮೋದಿ ಗ್ಯಾರಂಟಿ ಶೂನ್ಯ : ಸಚಿವ ದಿನೇಶ್ ಗುಂಡೂರಾವ್
ಸನ್ ರೈಸರ್ಸ್ ತಂಡವು ನೀಡಿದ 288 ರನ್ ಗಳ ದಾಖಲೆ ಮೊತ್ತವನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ತಂಡವು ಉತ್ತಮ ಆರಂಭವನ್ನೆ ಖಂಡಿತು. 6.2 ಓವರ್ ಗಳಲ್ಲಿ 80 ರನ್ ಗಳಿಸುವ ಮೂಲಕ ಗೆಲುವಿನ ಬೇಟೆ ಆರಂಭಿಸಿತು.ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.ವಿರಾಟ್ ಕೊಹ್ಲಿ 20 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ಆರು ಬೌಂಡರಿಗಳ ನೆರವಿನಿಂದ 42 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.ಇನ್ನೊಂದೆಡೆಗೆ ಫ್ಯಾಫ್ ದುಪ್ಲೆಸಿಸ್ 28 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಗಳ ನೆರವಿನಿಂದ 62 ರನ್ ಗಳಿಸಿ ಔಟಾದರು.
ಈ ಹಂತದಲ್ಲಿ ಕ್ರೀಸ್ ದಿನೇಶ್ ಕಾರ್ತಿಕ್ ಪಂದ್ಯದ ಗತಿಯನ್ನೇ ಬದಲಿಸಿದರು. ಕೇವಲ 35 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಏಳು ಸಿಕ್ಸರ್ ಗಳ ನೆರವಿನಿಂದ 83 ರನ್ ಗಳಿಸುವ ಮೂಲಕ ತಂಡಕ್ಕೆ ಗೆಲುವಿನ ಆಸೆಯನ್ನು ಸಿಗುರಿಸಿದ್ದರು. ಆದರೆ ಅಂತಿಮವಾಗಿ ಆರ್ಸಿಬಿ ತಂಡವು 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 262 ರನ್ ಗಳಿಸಿತು. ಆ ಮೂಲಕ 25 ರನ್ ಗಳ ಅಂತರದಿಂದ ಸೋಲನ್ನು ಅನುಭವಿಸಿತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.