ನವದೆಹಲಿ: ನ್ಯೂಜಿಲೆಂಡ್ ಪ್ರಧಾನಿ ಜಸಿಂದಾ ಆಡ್ರೆನ್ ಅವರು ಎರಡು ವರ್ಷಗಳಲ್ಲಿ ಮಾಡಿದ ಸಾಧನೆಯನ್ನು ಎರಡು ನಿಮಿಷಗಳಲ್ಲಿ ವಿವರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಈಗ ಅವರು ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
This is leadership! New Zealand Prime Minister Jacinda Ardern (aged 39) talks through achievements Government has made in the past 2 years. pic.twitter.com/jXcVVYYoWU
— nelson chamisa (@nelsonchamisa) November 3, 2019
ಅರ್ಡೆರ್ನ್ ಅವರು ತಮ್ಮ 37ನೇ ವಯಸ್ಸಿನಲ್ಲಿ ಲೇಬರ್ ಪಕ್ಷದ ಮೂಲಕ ನ್ಯೂಜಿಲೆಂಡ್ನ ಪ್ರಧಾನ ಮಂತ್ರಿಯಾದ ಅತಿ ಕಿರಿಯ ನಾಯಕಿ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. ಈಗ ಅವರು ತಮ್ಮ ಕಳೆದ ಎರಡು ವರ್ಷಗಳಲ್ಲಿ ಸರ್ಕಾರದ ಎಲ್ಲ ಸಾಧನೆಗಳನ್ನು ಕೇವಲ ಎರಡು ನಿಮಿಷಗಳಲ್ಲಿ ವಿವರಿಸುವ ಪ್ರಯತ್ನ ಮಾಡಿದ್ದಾರೆ. ಅದರಲ್ಲಿ ಅವರು ಯಶಸ್ವಿ ಕೂಡ ಆಗಿದ್ದಾರೆ.
ಈಗ ಅವರು ತಮ್ಮ ಸಾಧನೆಗಳನ್ನು ಎರಡು ನಿಮಿಷದಲ್ಲಿ ವಿವರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಇದುವರೆಗೆ ಈ ವಿಡಿಯೋವನ್ನು 2.4 ಮಿಲಿಯನ್ ಬಾರಿ ವಿಕ್ಷಿಸಲಾಗಿದೆ. ಈ ವಿಡಿಯೋದಲ್ಲಿ ಅವರು ತಮ್ಮ ಸರ್ಕಾರವು 92,000 ಉದ್ಯೋಗಗಳನ್ನು ಹೇಗೆ ಸೃಷ್ಟಿಸಿತು, 2200 ಕ್ಕೂ ಹೆಚ್ಚು ರಾಜ್ಯ ಮನೆಗಳನ್ನು ಹೇಗೆ ನಿರ್ಮಿಸಿತು, ಶೂನ್ಯ ಇಂಗಾಲದ ಮಸೂದೆಯನ್ನು ಪರಿಚಯಿಸಿತು, ಹೆದ್ದಾರಿಗಳನ್ನು ಸುರಕ್ಷಿತಗೊಳಿಸಿತು ಮತ್ತು ಜೈಲು ಜನಸಂಖ್ಯೆಯನ್ನು ಕಡಿಮೆಗೊಳಿದೆ ಎನ್ನುವ ಅಂಶಗಳನ್ನು ಅವರು ಪಟ್ಟಿ ಮಾಡಿದ್ದಾರೆ.