Shani Dev: ಶನಿದೇವನನ್ನು ನ್ಯಾಯದ ದೇವರು, ಕರ್ಮ ನೀಡುವವನು ಮತ್ತು ಗ್ರಹಗಳ ರಾಜ ಎಂದು ಪರಿಗಣಿಸಲಾಗಿದೆ. ೯ ಗ್ರಹಗಳಲ್ಲಿ ಶನಿಯನ್ನು ಅತ್ಯಂತ ಶಕ್ತಿಶಾಲಿ ಗ್ರಹವೆಂದು ಪರಿಗಣಿಸಲಾಗಿದೆ. ಶನಿದೇವನ ಹೆಸರನ್ನು ಕೇಳಿದಾಗ ಜನರು ಭಯಭೀತರಾಗುತ್ತಾರೆ. ಏಕೆಂದರೆ ಶನಿದೇವನನ್ನು ಕಠೋರ ಶಿಕ್ಷಕ ಎಂದು ಕರೆಯುತ್ತಾರೆ. ಆದರೆ ಶನಿದೇವನು ಶಿಕ್ಷಿಸುವುದಲ್ಲದೆ, ಕರ್ಮಗಳ ಫಲವನ್ನೂ ನೀಡುತ್ತಾನೆ. ನೀವು ಒಳ್ಳೆಯ ಕಾರ್ಯಗಳನ್ನು ಮಾಡಿದ್ದರೆ, ಶನಿದೇವನು ನಿಮಗೆ ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತಾನೆ. ನೀವು ಕೆಟ್ಟ ಕೆಲಸಗಳನ್ನು ಮಾಡಿದರೆ, ನೀವು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಶನಿದೇವನು ನ್ಯಾಯಾಧೀಶನಂತೆ ಯಾವುದೇ ಒಬ್ಬ ವ್ಯಕ್ತಿಗೆ ಅವನ ಕಾರ್ಯಗಳಿಗೆ ಅನುಗುಣವಾಗಿ ಫಲಿತಾಂಶವನ್ನು ನೀಡುತ್ತಾನೆ.
ಶನಿದೇವನಿಗೆ ಎಣ್ಣೆಯನ್ನು ಏಕೆ ಅರ್ಪಿಸಲಾಗುತ್ತದೆ?
ಧಾರ್ಮಿಕ ನಂಬಿಕೆಗಳ ಪ್ರಕಾರ, ಶನಿವಾರವನ್ನು ಶನಿ ದೇವರಿಗೆ ಸಮರ್ಪಿಸಲಾಗಿದೆ. ಶನಿದೇವನಿಗೆ ಎಣ್ಣೆಯನ್ನು ಅರ್ಪಿಸುವುದರಿಂದ ವ್ಯಕ್ತಿಯ ಇಷ್ಟಾರ್ಥಗಳು ಈಡೇರುತ್ತವೆ ಮತ್ತು ಜೀವನದ ತೊಂದರೆಗಳು ಕಡಿಮೆಯಾಗುತ್ತವೆ ಎಂದು ನಂಬಲಾಗಿದೆ. ಶನಿದೇವನಿಗೆ ಎಣ್ಣೆಯನ್ನು ಏಕೆ ನೈವೇದ್ಯ ಮಾಡುತ್ತಾರೆ ಗೊತ್ತಾ? ಇದರ ಹಿಂದಿರುವ ಧಾರ್ಮಿಕ ಮಹತ್ವ ಮತ್ತು ಪುರಾಣವನ್ನು ತಿಳಿಯಿರಿ.
ಇದನ್ನೂ ಓದಿ: ವಿಶ್ವದ ಅತಿ ದೊಡ್ಡ ಶ್ರೀಮಂತನಾದರೂ ಈ ಒಂದು ವಿಷಯದ ಬಗ್ಗೆ ಬಹಳ ಭಯ ಪಡುತ್ತಾರಂತೆ ಮುಖೇಶ್ ಅಂಬಾನಿ !
ಶನಿದೇವರಿಂದ ಹನುಮಂತನಿಗೆ ಯುದ್ಧಕ್ಕೆ ಸವಾಲು!
ಒಮ್ಮೆ ಶನಿದೇವನಿಗೆ ವಾಯುಪುತ್ರ ಹನುಮಂತನ ಶಕ್ತಿ ಮತ್ತು ಶೌರ್ಯದ ಬಗ್ಗೆ ತಿಳಿಯಿತು. ಶನಿದೇವನು ಈ ಮೊದಲೇ ತನ್ನ ಶಕ್ತಿಯ ಬಗ್ಗೆ ಹೆಮ್ಮೆಪಡುತ್ತಿದ್ದರಂತೆ. ಇದಕ್ಕಾಗಿಯೇ ಅವರು ಬಜರಂಗಬಲಿಯೊಂದಿಗೆ ಹೋರಾಡಲು ಹೋದರಂತೆ. ನ್ಯಾಯದ ದೇವರು ಕಪಿವೀರನ ಬಳಿ ತಲುಪಿದರು. ಆಗ ಹನುಮಂತನು ಒಂದು ಸ್ಥಳದಲ್ಲಿ ಕಣ್ಣು ಮುಚ್ಚಿ ಕುಳಿತು ರಾಮನ ಭಕ್ತಿಯಲ್ಲಿ ಮುಳುಗಿರುವುದನ್ನು ನೋಡಿದರಂತೆ. ಆದರೆ ಅಹಂಕಾರದ ಅಮಲಿನಲ್ಲಿ ಶನಿದೇವರು ಹನುಮಂತನಿಗೆ ಯುದ್ಧಕ್ಕೆ ಸವಾಲು ಹಾಕಿದರಂತೆ. ಇದಾದ ನಂತರ ಹನುಮಂತನು ತಾನು ಭಗವಾನ್ ರಾಮನ ಭಕ್ತಿಯಲ್ಲಿ ಮಗ್ನನಾಗಿದ್ದು, ಈಗ ಯುದ್ಧ ಮಾಡುವುದು ಸರಿಯಲ್ಲವೆಂದು ಶನಿದೇವನಿಗೆ ವಿವರಿಸಿದರಂತೆ. ಇದನ್ನು ಹೇಳಿದ ನಂತರವೂ ಶನಿದೇವನು ಹೋರಾಟದ ಬಗ್ಗೆ ಅಚಲವಾಗಿಯೇ ಇದ್ದರಂತೆ. ಶನಿದೇವನು ಒಪ್ಪದ ನಂತರ ಬಜರಂಗಬಲಿಯು ಯುದ್ಧಕ್ಕೆ ಸಿದ್ಧರಾದರಂತೆ.
ತೈಲ ನೈವೇದ್ಯದ ಪ್ರಾಮುಖ್ಯತೆ
ಇಬ್ಬರ ನಡುವೆ ಯುದ್ಧ ಪ್ರಾರಂಭವಾದಾಗ ಹನುಮಂತನು ಶನಿದೇವನನ್ನು ತನ್ನ ಬಾಲದಲ್ಲಿ ಸುತ್ತಿ ಕಲ್ಲುಗಳ ಮೇಲೆ ಪದೇ ಪದೇ ಎಸೆದರಂತೆ. ಪರಿಣಾಮ ಶನಿದೇವರು ಗಂಭೀರವಾಗಿ ಗಾಯಗೊಂಡು ಹನುಮಂತನ ಬಳಿ ಕ್ಷಮೆ ಕೇಳಲು ಪ್ರಾರಂಭಿಸಿದರಂತೆ. ಆಗ ಶನಿದೇವನು ಶ್ರೀರಾಮ ಮತ್ತು ಹನುಮಂತರ ಭಕ್ತರಿಗೆ ಎಂದಿಗೂ ತೊಂದರೆ ಕೊಡುವುದಿಲ್ಲವೆಂದು ಹೇಳಿದರಂತೆ. ಇದರೊಂದಿಗೆ ಶ್ರೀರಾಮ ಮತ್ತು ಹನುಮಂತನನ್ನು ಯಾರು ಪೂಜಿಸುತ್ತಾರೋ ಅವರಿಗೂ ಶನಿದೇವರ ಆಶೀರ್ವಾದವನ್ನು ಧಾರೆಯೆರೆಯುತ್ತಾರಂತೆ. ಯುದ್ಧದ ನಂತರ ಶನಿದೇವ ತುಂಬಾ ನೋವಿನಿಂದ ಬಳಲುತ್ತಿದ್ದರು. ಅವರ ನೋವನ್ನು ನೋಡಿದ ಹನುಮಂತನು ಶನಿದೇವನಿಗೆ ಎಣ್ಣೆಯನ್ನು ಕೊಟ್ಟರಂತೆ. ಅದನ್ನು ಲೇಪಿಸಿಕೊಂಡ ತಕ್ಷಣ ಎಲ್ಲಾ ನೋವು ಮಾಯವಾಯಿತಂತೆ. ಆಗ ಶನಿದೇವನು ಯಾರು ತನಗೆ ಎಣ್ಣೆಯನ್ನು ಭಕ್ತಿಯಿಂದ ಅರ್ಪಿಸುತ್ತಾರೋ ಅವರ ಎಲ್ಲಾ ತೊಂದರೆಗಳು ಪರಿಹಾರವಾಗುತ್ತವೆ ಮತ್ತು ಅವರ ಇಷ್ಟಾರ್ಥಗಳು ಈಡೇರುತ್ತವೆ ಎಂದು ಹೇಳಿದರಂತೆ. ಅಂದಿನಿಂದ ಭಕ್ತರು ಶನಿದೇವನಿಗೆ ಅತ್ಯಂತ ಭಕ್ತಿಯಿಂದ ಎಣ್ಣೆ ನೈವೇದ್ಯ ಮಾಡಿಕೊಂಡು ಬರುತ್ತಿದ್ದಾರೆ.
ಇದನ್ನೂ ಓದಿ: ಕೇವಲ 100 ದಿನಗಳಲ್ಲಿ 10,000 ರೂಪಾಯಿಗಳಷ್ಟು ದುಬಾರಿಯಾದ ಚಿನ್ನ ! ಏರಿಕೆ ಹಿಂದಿನ ಕಾರಣಗಳಿವು ! ಬಂಗಾರದ ದರ ಇಳಿಯುವುದು ಯಾವಾಗ?
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE KANNADA NEWS ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.