ಸತತ 4ನೇ ದಿನವೂ ಬೆಲೆ ಏರಿಕೆ, ದೆಹಲಿಯಲ್ಲಿ 73 ರೂ. ದಾಟಿದ ಪೆಟ್ರೋಲ್

ದೆಹಲಿ, ಕೋಲ್ಕತಾ ಮತ್ತು ಮುಂಬೈಗಳಲ್ಲಿ ತೈಲ ಕಂಪನಿಗಳು ಪೆಟ್ರೋಲ್ ಬೆಲೆಯನ್ನು 20 ಪೈಸೆ ಹೆಚ್ಚಿಸಿವೆ.

Last Updated : Nov 11, 2019, 08:02 AM IST
ಸತತ 4ನೇ ದಿನವೂ ಬೆಲೆ ಏರಿಕೆ, ದೆಹಲಿಯಲ್ಲಿ 73 ರೂ. ದಾಟಿದ ಪೆಟ್ರೋಲ್ title=

ನವದೆಹಲಿ: ದೇಶದ ರಾಜಧಾನಿಯಾದ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಮತ್ತೆ ಲೀಟರ್‌ಗೆ 73 ರೂ.ಗಿಂತ ಹೆಚ್ಚಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು ಸೋಮವಾರ ಸತತ ನಾಲ್ಕನೇ ದಿನವೂ ಪೆಟ್ರೋಲ್ ಬೆಲೆಯನ್ನು ಹೆಚ್ಚಿಸಿವೆ. ಆದಾಗ್ಯೂ, ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ನಾಲ್ಕು ದಿನಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 45 ಪೈಸೆ ಹೆಚ್ಚಾಗಿದೆ.

ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತಿದೆ. ಪ್ರಪಂಚದಾದ್ಯಂತ ತೈಲ ಪೂರೈಕೆ ಕುಸಿಯುತ್ತಿರುವ ಕಾರಣ, ಏಷ್ಯಾದ ಮಾರುಕಟ್ಟೆಗಳಲ್ಲಿ ತೈಲ ದರದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ.

ಇಂದು ಪರಿಷ್ಕರಿಸಲಾದ ಪೆಟ್ರೋಲ್-ಡೀಸೆಲ್ ದರದಲ್ಲಿ ಏರಿಕೆ ಕಂಡಿದ್ದು, ದೆಹಲಿ, ಕೋಲ್ಕತಾ ಮತ್ತು ಮುಂಬೈಗಳಲ್ಲಿ ತೈಲ ಕಂಪನಿಗಳು ಪೆಟ್ರೋಲ್ ಬೆಲೆಯನ್ನು 20 ಪೈಸೆ ಹೆಚ್ಚಿಸಿವೆ. ಇದರೊಂದಿಗೆ ದೆಹಲಿಯಲ್ಲಿ ಪೆಟ್ರೋಲ್ 73.05 ರೂ. ಮತ್ತು ಡೀಸೆಲ್ ಲೀಟರ್‌ಗೆ 65.91 ರೂ. ಆಗಿದೆ. 

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 75.55 ರೂ. ಮತ್ತು ಡೀಸೆಲ್ ಬೆಲೆ 68.15 ರೂ. ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ

ನಗರಗಳು

ಪೆಟ್ರೋಲ್ 

(ರೂ./ಲೀ)

ಡೀಸೆಲ್

(ರೂ./ಲೀ)

ದೆಹಲಿ 73.05 65.91
ಕೊಲ್ಕತ್ತಾ 75.76 68.32
ಮುಂಬೈ 78.72 69.13
ಚೆನ್ನೈ 76.11 69.84
ಬೆಂಗಳೂರು 75.55 68.15
ಹೈದರಾಬಾದ್ 77.74 71.93
ತಿರುವನಂತಪುರಂ 76.26 70.77

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: 

https://www.iocl.com/TotalProductList.aspx

Trending News