ವಿಶಾಖಪಟ್ಟಣಂ: ಎರಡನೇ ಏಕದಿನ ಪಂದ್ಯದಲ್ಲಿ ಆತಿಥೇಯರು ವೆಸ್ಟ್ ಇಂಡೀಸ್ ತಂಡವನ್ನು ಬುಧವಾರ (ಡಿಸೆಂಬರ್ 18) ಎದುರಿಸಲಿದ್ದಾರೆ. ಚೆನ್ನೈನಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಸೋತಿದ್ದ ಭಾರತೀಯ ತಂಡಕ್ಕೆ ಈ ದಿನದ ಏಕದಿನ ಸರಣಿ ಒಂದು ಸವಾಲಾಗಿದ್ದು, 'ಡು ಆರ್ ಡೈ' ಹೋರಾಟವಾಗಿದೆ. ಅದೇ ಸಮಯದಲ್ಲಿ, ವೆಸ್ಟ್ ಇಂಡೀಸ್ ತಂಡವು ಮೊದಲ ಪಂದ್ಯವನ್ನು ಗೆದ್ದು, ಸರಣಿಯಲ್ಲಿ 1-0 ಅಂಕಗಳೊಂದಿಗೆ ಮುಂದಿದೆ. ಅವರ ಕಣ್ಣುಗಳು ಈಗ ಎರಡನೇ ಪಂದ್ಯವನ್ನು ಗೆದ್ದು ಸರಣಿಯನ್ನು ತಮ್ಮದಾಗಿಸಿಕೊಳ್ಳುವತ್ತ ನೆಟ್ಟಿದೆ. ಇಂದು ವಿಶಾಖಪಟ್ಟಣಂನಲ್ಲಿ ನಡೆಯಲಿರುವ ಏಕದಿನ ಸರಣಿ ಬಗ್ಗೆ ಕ್ರಿಕೆಟ್ ಅಭಿಮಾನಿಗಳಲ್ಲೂ ಕುತೂಹಲ ಹೆಚ್ಚಿದೆ.
ಆತಿಥೇಯ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯ ಮಧ್ಯಾಹ್ನ 1.30 ರಿಂದ ವಿಶಾಖಪಟ್ಟಣಂನ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿರುವ ಭಾರತ ತಂಡ ಈಗ ಅವರು ಎರಡನೇ ಪಂದ್ಯದಲ್ಲಿ ಪ್ರತೀಕಾರ ತೀರಿಸಿಕೊಳ್ಳಲು ಸಜ್ಜಾಗಿದೆ. ಮೊದಲ ಪಂದ್ಯದಲ್ಲಿ ತಂಡದ ಬೌಲಿಂಗ್ ದುರ್ಬಲವಾಗಿತ್ತು ಎಂಬುದನ್ನು ಅರಿತಿರುವ ಟೀಂ ಇಂಡಿಯಾ ಈ ಪಂದ್ಯದಲ್ಲಿ ಪ್ರತ್ಯುತ್ತರ ನೀಡುವ ನಿರೀಕ್ಷೆಯಿದೆ.
IND vs WI: ಚೆನ್ನೈ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲಿಗೆ 5 ಕಾರಣಗಳಿವು!
ಚೆನ್ನೈನಲ್ಲಿ ನಡೆದ ಮೊದಲ ಎಕದಿನದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ನ ಶಿಮ್ರಾನ್ ಹೆಟ್ಮಿಯರ್ ಮತ್ತು ಶೈ ಹೋಪ್ ಮೊದಲ ಏಕದಿನ ಪಂದ್ಯಗಳಲ್ಲಿ ಶತಕಗಳನ್ನು ಗಳಿಸಿದರು. ಮತ್ತೊಂದೆಡೆ, ಭಾರತದ ವೇಗದ ಬೌಲರ್ ದೀಪಕ್ ಚಹರ್, ಶಿವಂ ದುಬೆ ಅವರಿಗೆ ಅಗತ್ಯವಾದ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಮೊಹಮ್ಮದ್ ಶಮಿ ಕೂಡ ಅದಕ್ಕೆ ಹೊರತಾಗಿರಲಿಲ್ಲ. ಸ್ಪಿನ್ನರ್ಗಳಲ್ಲಿ ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಕೂಡ ಯಾವುದೇ ಪರಿಣಾಮ ಬೀರಲು ಸಾಧ್ಯವಾಗಲಿಲ್ಲ. ಬ್ಯಾಟ್ಸ್ಮನ್ಗಳಲ್ಲಿ, ರಿಷಭ್ ಪಂತ್ (71), ಶ್ರೇಯಸ್ ಅಯ್ಯರ್ (70) ಮತ್ತು ಕೇದಾರ್ ಜಾಧವ್ (40) ಹೊರತುಪಡಿಸಿ ಉಳಿದವರು ಉತ್ತಮ ಪ್ರದರ್ಶನ ನೀಡಲಿಲ್ಲ.
ಎರಡನೇ ಪಂದ್ಯದಲ್ಲಿ ಭಾರತದ ತಂಡವು ಬೌಲಿಂಗ್ ಅನ್ನು ಬದಲಾಯಿಸಬಹುದು. ಇದಕ್ಕಾಗಿ ನಾಯಕ ವಿರಾಟ್ ಕೊಹ್ಲಿ ಬ್ಯಾಟ್ಸ್ಮನ್ಗಳನ್ನು ಕಡಿಮೆ ಮಾಡಬಹುದು. ಒಂದು ವೇಳೆ ಹೀಗೇನಾದರೂ ತೀರ್ಮಾನಿಸಿದರೆ ಕೇದಾರ್ ಜಘವ್ ಅವರನ್ನು ಹೊರಗೆ ಕಳುಹಿಸಬಹುದು. ಭಾರತವು ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಸಂಯೋಜನೆಯನ್ನು ಬದಲಾಯಿಸಬಹುದು. ಇವೆಲ್ಲದಕ್ಕಿಂತ ಮುಖ್ಯವಾಗಿ ಫೀಲ್ಡಿಂಗ್ ಕಾಳಜಿ ಹೆಚ್ಚು ಪರಿಣಾಮಕಾರಿಯಾಗಿದೆ. ಟಿ 20 ಯಿಂದ ಏಕದಿನ ಪಂದ್ಯದವರೆಗೆ ಭಾರತದ ಫೀಲ್ಡಿಂಗ್ ಅಷ್ಟೊಂದು ಉತ್ತಮವಾಗಿಲ್ಲ. ಕಳೆದ ಪಂದ್ಯದಲ್ಲೂ, ಶ್ರೇಯಸ್ ಅವರು ಹೆಟ್ಮಿಯರ್ ಅವರ ಕ್ಯಾಚ್ ಅನ್ನು ತಪ್ಪಿಸಿಕೊಂಡಿದ್ದರು, ಹೀಗಾಗಿಯೇ ತಂಡವು ಸೋಲಿನ ತೀವ್ರತೆಯನ್ನು ಅನುಭವಿಸಬೇಕಾಯಿತು ಎಂಬ ಮಾತುಗಳು ಕೇಳಿಬಂದಿದೆ.
ಅದೇ ಸಮಯದಲ್ಲಿ, ವಿಂಡೀಸ್ ತಾಯ್ನಾಡಲ್ಲೇ ಭಾರತವನ್ನು ಸೋಲಿಸಬಹುದೆಂಬ ವಿಶ್ವಾಸದಿಂದ ಎರಡನೇ ಪಂದ್ಯಕ್ಕೆ ಸಜ್ಜಾಗಿದೆ. ವಿಂಡೀಸ್ 2006 ರಿಂದ ಭಾರತದಲ್ಲಿ ಮೊದಲ ಏಕದಿನ ಸರಣಿಯನ್ನು ಗೆಲ್ಲುವ ಅವಕಾಶವನ್ನು ಪಡೆದುಕೊಂಡಿತು. ನಾಯಕ ಕೀರನ್ ಪೊಲಾರ್ಡ್ ತನ್ನ ನಾಯಕತ್ವದಲ್ಲಿ ಈ ಇತಿಹಾಸವನ್ನು ರಚಿಸಲು ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡಿದ್ದಾರೆ. ಮತ್ತೊಮ್ಮೆ ಹೋಪ್ ಮತ್ತು ಹೆಟ್ಮಿಯರ್ ಬ್ಯಾಟಿಂಗ್ ಮೇಲೆ ವಿಂಡೀಸ್ ನಿರೀಕ್ಷೆ ಹೆಚ್ಚಿದೆ. ಭಾರತವು ಆಂಬ್ರಿಸ್ನಂತಹ ಬ್ಯಾಟ್ಸ್ಮನ್ನನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ರೋಸ್ಟನ್ ಚೇಸ್ ಅವರ ವಿಷಯದಲ್ಲೂ ಕೂಡ ಭಾರತ ಚಾನ್ಸ್ ತೆಗೆದುಕೊಳ್ಳುವುದು ಒಳಿತಲ್ಲ ಎಂಬುದು ತಜ್ಞರ ಅಭಿಪ್ರಾಯ.
ಇಂದಿನ ಪಂದ್ಯದಲ್ಲಿ ಆಟಗಾರರು:
ಭಾರತ: ವಿರಾಟ್ ಕೊಹ್ಲಿ (ಕ್ಯಾಪ್ಟನ್), ರೋಹಿತ್ ಶರ್ಮಾ (ವೈಸ್ ಕ್ಯಾಪ್ಟನ್), ಮಾಯಾಂಕ್ ಅಗರ್ವಾಲ್, ಲೋಕೇಶ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್, ಶಿವಂ ದುಬೆ, ಕೇದಾರ್ ಜಾಧವ್, ರವೀಂದ್ರ ಜಡೇಜಾ, ಯುಜ್ವೇಂದ್ರ ಚಾಹಲ್, ಕುಲದೀಪ್ ಶಾದರ್, , ಶಾರ್ದುಲ್ ಠಾಕೂರ್.
ವೆಸ್ಟ್ ಇಂಡೀಸ್: ಕೀರನ್ ಪೊಲಾರ್ಡ್ (ನಾಯಕ), ಸುನ್ಯೆ ಆಂಬ್ರೋಸ್, ಶೈ ಹೋಪ್, ಖೈರಿ ಪಿಯರೆ, ರೋಸ್ಟನ್ ಚೇಸ್, ಅಲ್ಜಾರಿ ಜೋಸೆಫ್, ಶೆಲ್ಡನ್ ಕಾಟ್ರೆಲ್, ಬ್ರಾಂಡನ್ ಕಿಂಗ್, ನಿಕೋಲಸ್ ಪೂರನ್, ಶಿಮ್ರಾನ್ ಹೆಟ್ಮಿಯರ್, ಎವಿನ್ ಲೂಯಿಸ್, ರೊಮರಿಯಾ ಶೆಫರ್ಡ್, ಜೇಸನ್ ಹೋಲ್ಡರ್, ಕೀಮೋ ಪಾಲ್, ಹೇಡನ್ ವಾಲ್ಷ್ ಜೂನಿಯರ್.