ಅಗಸೆ ಎಣ್ಣೆಯ ಪ್ರಯೋಜನಗಳು: ಭಾರತದಲ್ಲಿ ಅನೇಕ ಜನರು ಅಧಿಕ ಕೊಲೆಸ್ಟ್ರಾಲ್ಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಏಕೆಂದರೆ ಇಲ್ಲಿ ಎಣ್ಣೆಯುಕ್ತ ಆಹಾರವನ್ನು ಸೇವಿಸುವ ಪ್ರವೃತ್ತಿ ತುಂಬಾ ಹೆಚ್ಚಾಗಿದೆ. ನಮ್ಮ ಮನೆಗಳು ಮತ್ತು ಮಾರುಕಟ್ಟೆಗಳಲ್ಲಿ ಬಳಸಲಾಗುವ ಹೆಚ್ಚಿನ ಅಡುಗೆ ಎಣ್ಣೆಯು ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹಕ್ಕೆ ಕಾರಣವಾಗುತ್ತದೆ. ಇದು ಮಧುಮೇಹ ಮತ್ತು ಹೃದಯಾಘಾತಕ್ಕೆ ಕಾರಣವಾಗಬಹುದು. ಇದನ್ನು ತಪ್ಪಿಸಲು ಸರಿಯಾದ ಎಣ್ಣೆಯನ್ನು ಆಯ್ಕೆ ಮಾಡುವುದು ಮುಖ್ಯ. ನಮ್ಮ ಆರೋಗ್ಯಕ್ಕೆ ಯಾವ ಎಣ್ಣೆ ಒಳ್ಳೆಯದು ಎಂದು ತಿಳಿಯಿರಿ..
ಕೆಟ್ಟ ಕೊಲೆಸ್ಟ್ರಾಲ್ನಿಂದ ದೇಹಕ್ಕೆ ಅಪಾಯ
ನೀವು ಹೆಚ್ಚು ಎಣ್ಣೆಯನ್ನು ಹೊಂದಿರುವ ಆಹಾರ ಸೇವಿಸಿದರೆ ಅದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಅತಿಯಾದ ಕೊಬ್ಬು ಹೆಚ್ಚಾದಾಗ, ಅದು ರಕ್ತದಲ್ಲಿನ ಇತರ ಪದಾರ್ಥಗಳೊಂದಿಗೆ ಬೆರೆತು ಅಪಧಮನಿಗಳಿಗೆ ಅಂಟಿಕೊಳ್ಳುವ ಪ್ಲೇಕ್ ಅನ್ನು ರೂಪಿಸಲು ಪ್ರಾರಂಭಿಸುತ್ತದೆ. ನಮ್ಮ ಅಪಧಮನಿಗಳಲ್ಲಿ ಹೆಚ್ಚು ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾದಾಗ, ರಕ್ತನಾಳಗಳು ನಿರ್ಬಂಧಿಸಲು ಪ್ರಾರಂಭಿಸುತ್ತವೆ. ಇದರಿಂದ ಹೃದಯಕ್ಕೆ ರಕ್ತವನ್ನು ತಲುಪಿಸಲು ಕಷ್ಟವಾಗುತ್ತದೆ. ರಕ್ತ ಪರಿಚಲನೆಯಲ್ಲಿ ಒತ್ತಡ ಉಂಟಾದಾಗ ಅಧಿಕ ರಕ್ತದೊತ್ತಡದಿಂದ ಬಳಲುವುದು ಸಹಜ.
ಇದನ್ನೂ ಓದಿ: ಪಾಪ್ ಕಾರ್ನ್ ಮೆದುಳು ಎಂದರೇನು? ಈ ಕಾಯಿಲೆ ಬಗ್ಗೆ ನಿಮಗೆಷ್ಟು ಗೊತ್ತು?
ಅಧಿಕ ಕೊಲೆಸ್ಟ್ರಾಲ್ ಇದ್ದಲ್ಲಿ ಈ ಎಣ್ಣೆ ಸೇವಿಸಿ
ಈ ಬಗ್ಗೆ ಮಾಹಿತಿ ನೀಡಿರುವ ಖ್ಯಾತ ಪೌಷ್ಟಿಕಾಂಶ ತಜ್ಞ ನಿಖಿಲ್ ವಾಟ್ಸ್, ಅಧಿಕ ಕೊಲೆಸ್ಟ್ರಾಲ್ನಿಂದ ಬಳಲುತ್ತಿರುವವರಿಗೆ ಅಗಸೆಬೀಜದ ಎಣ್ಣೆ ಒಳ್ಳೆಯದು. ಇದನ್ನು ಸಲಾಡ್ ಜೊತೆ ಕೂಡ ಸೇವಿಸಬಹುದು. ಸ್ವಲ್ಪ ಬಿಸಿ ಮಾಡಿ ಕೂಡ ತಿನ್ನಬಹುದು. ಲಿನ್ಸೆಡ್ ಎಣ್ಣೆಯನ್ನು ಅಗಸೆ ಸಸ್ಯದ ಬೀಜಗಳಿಂದ ಹೊರತೆಗೆಯಲಾಗುತ್ತದೆ. ಇದು ಕೊಬ್ಬಿನಾಮ್ಲಗಳ ಸಮೃದ್ಧ ಮೂಲವಾಗಿದೆ. ಒಲೀಕ್ ಆಮ್ಲ, ಲಿನೋಲಿಕ್ ಆಮ್ಲ ಮತ್ತು ಆಲ್ಫಾ-ಲಿನೋಲೆನಿಕ್ ಆಮ್ಲಗಳು ಇದರಲ್ಲಿ ಹೇರಳವಾಗಿ ಕಂಡುಬರುತ್ತವೆ. ಈ ಎಣ್ಣೆಯು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಇತರ ಅಡುಗೆ ಎಣ್ಣೆಗಳಿಗಿಂತ ಹೆಚ್ಚಾಗಿ ಅಗಸೆ ಬೀಜಗಳಿಂದ ತಯಾರಿಸಿದ ಎಣ್ಣೆಯನ್ನು ಸೇವಿಸುವುದು ಆರೋಗ್ಯ ದೃಷ್ಟಿಯಿಂದ ಉತ್ತಮವೆಂದು ಹೇಳಲಾಗಿದೆ.
ಇದನ್ನೂ ಓದಿ: ಮಲಬದ್ಧತೆ ನಿವಾರಣೆಗೆ ಸಹಾಯ ಮಾಡುತ್ತವೆ ಈ 5 ಹಣ್ಣುಗಳು
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.