ಏಕಕಾಲಕ್ಕೆ ನಾಲ್ಕು ಫ್ಲ್ಯಾಟ್ ಗಳನ್ನು ಖರೀದಿಸಿದ್ದಾರೆ ಈ ಹಿನ್ನೆಲೆ ಗಾಯಕ

ಇತ್ತೀಚೆಗಷ್ಟೇ ಮುಂಬೈನ ವರ್ಸೋವಾ ಪ್ರದೇಶದಲ್ಲಿ ಅರ್ಜಿತ್ ಸಿಂಗ್ ಏಕಕಾಲಕ್ಕೆ ನಾಲ್ಕು ಫ್ಲ್ಯಾಟ್ ಗಳನ್ನು ಖರೀದಿಸಿದ್ದಾರೆ.

Last Updated : Feb 10, 2020, 01:01 PM IST
ಏಕಕಾಲಕ್ಕೆ ನಾಲ್ಕು ಫ್ಲ್ಯಾಟ್ ಗಳನ್ನು ಖರೀದಿಸಿದ್ದಾರೆ ಈ ಹಿನ್ನೆಲೆ ಗಾಯಕ title=

ಮುಂಬೈ: ತಮ್ಮ ರೊಮ್ಯಾಂಟಿಕ್ ಹಾಡುಗಳ ಮೂಲಕ ಅಪಾರ ಖ್ಯಾತಿ ಗಳಿಸಿರುವ ಖ್ಯಾತ ಹಿನ್ನೆಲೆ ಗಾಯಕ ಅರ್ಜಿತ್ ಸಿಂಗ್ ಅವರ ಕಾನ್ಸರ್ಟ್ ಗಳೂ ಕೂಡ ಹೌಸ್ ಫುಲ್ ಆಗಿರುತ್ತವೆ. ಜನರ ಅಪಾರ ಪ್ರೀತಿಗೆ ಪಾತ್ರರಾಗಿರುವ ಅರ್ಜಿತ್ ಸಿಂಗ್ ಮನೆ ಖರೀದಿಸಲು ಮುಂದಾದಾಗ ಒಂದಲ್ಲ, ಎರಡಲ್ಲ ಏಕಕಾಲಕ್ಕೆ ಒಟ್ಟು ನಾಲ್ಕು ಫ್ಲ್ಯಾಟ್ ಗಳನ್ನು ಖರೀದಿಸಿ ಸುದ್ದಿಮಾಡಿದ್ದಾರೆ.

ಇತ್ತೀಚೆಗಷ್ಟೇ ಮುಂಬೈನ ವರ್ಸೋವಾ ಪ್ರದೇಶದಲ್ಲಿ ಅರ್ಜಿತ್ ಸಿಂಗ್ ಏಕಕಾಲಕ್ಕೆ ನಾಲ್ಕು ಫ್ಲ್ಯಾಟ್ ಗಳನ್ನು ಖರೀದಿಸಿದ್ದಾರೆ. ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಈ ನಾಲ್ಕು ಫ್ಲ್ಯಾಟ್ ಗಳು ಕೇವಲ ಒಂದೇ ಜಾಗದಲ್ಲಿರದೆ ಒಂದೇ ಬಿಲ್ಡಿಂಗ್ ನಲ್ಲಿಯೂ ಕೂಡ ಇವೆ ಎನ್ನಲಾಗಿದೆ. ಮುಂಬೈನ ಪಾಶ್ ಪ್ರದೇಶಗಳಲ್ಲಿ ವರ್ಸೋವಾ ಕೂಡ ಒಂದು.  ಇಲ್ಲಿನ ಸಾತ್ ಬಂಗ್ಲಾ ಪ್ರದೇಶದಲ್ಲಿರುವ ಸವಿತಾ ಕೋ-ಆಪರೇಟಿವ್ ಸೊಸೈಟಿಯಲ್ಲಿ ಅರ್ಜಿತ್ ಈ ನಾಲ್ಕು ಫ್ಲ್ಯಾಟ್ ಗಳನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ಜನವರಿ 22ನೇ ತಾರೀಖಿಗೆ ಈ ಎಲ್ಲ ಫ್ಲ್ಯಾಟ್ ಗಳ ರಿಜಿಸ್ಟ್ರೇಷನ್ ಮಾಡಿಸಲಾಗಿದೆ.

ಈ ನಾಲ್ಕೂ ಫ್ಲ್ಯಾಟ್ ಗಳ ಬೆಲೆ ಎಷ್ಟು?
ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಮೊದಲ ಫ್ಲ್ಯಾಟ್ 32 ಸ್ಕ್ವೆಯರ್ ಮೀಟರ್ ವಿಸ್ತೀರ್ಣ ಹೊಂದಿದ್ದು, ಇದರ ಬೆಲೆ 1ಕೋಟಿ 80 ಲಕ್ಷ ರೂ. ಇದೆ ಎನ್ನಲಾಗಿದೆ. ಎರಡನೇ ಫ್ಲ್ಯಾಟ್ 70 ಸ್ಕ್ವೆಯರ್ ಮೀಟರ್ ವಿಸ್ತೀರ್ಣ ಹೊಂದಿದ್ದು, ಇದರ ಬೆಲೆ 2ಕೋಟಿ 20ಲಕ್ಷ ರೂ.ನಷ್ಟಿದೆ. ಮೂರನೇ ಫ್ಲ್ಯಾಟ್ ಮತ್ತು ನಾಲ್ಕನೇ ಫ್ಲ್ಯಾಟ್ ಗಳು ಕ್ರಮೇಣವಾಗಿ 80 ಮತ್ತು 70 ಸ್ಕ್ವೆಯರ್ ಮೀಟರ್ ವಿಸ್ತೀರ್ಣಗಳನ್ನು ಹೊಂದಿದ್ದು, ಇವುಗಳ ಬೆಲೆ 2 ಕೋಟಿ 60 ಲಕ್ಷ ರೂ. ಹಾಗೂ 2 ಕೋಟಿ 60 ಲಕ್ಷ ರೂ.ಗಳಾಗಿದೆ ಎನ್ನಲಾಗಿದೆ.

ಈ ನಾಲ್ಕೂ ಫ್ಲ್ಯಾಟ್ ಗಳಿಗಾಗಿ ಅರ್ಜಿತ್ ಒಟ್ಟು 9 ಕೋಟಿ ರೂ ವ್ಯಯಿಸಿದ್ದಾರೆ ಎನ್ನಲಾಗಿದೆ. ಸಾಮಾನ್ಯವಾಗಿ ತಮ್ಮ ಖಾಸಗಿತನಕ್ಕೆ ಯಾವುದೇ ರೀತಿಯ ಧಕ್ಕೆ ಬಾರದಿರಲು ಸೆಲೆಬ್ರಿಟಿಗಳು ಯಾವುದೇ ಒಂದು ಕಟ್ಟಡದ ಒಂದು ಫ್ಲೋರ್ ಖರೀದಿಸುತ್ತಾರೆ. ಇದೆ ಉದ್ದೇಶದಿಂದ ಅರ್ಜಿತ್ ಕೂಡ ನಾಲ್ಕು ಫ್ಲ್ಯಾಟ್ ಗಳನ್ನು ಖರೀದಿಸಿದ್ದಾರೆ ಎನ್ನಲಾಗಿದೆ.

Trending News