ಏಕದಿನ ಮತ್ತು ಟಿ20ಯಲ್ಲಿ ಇದುವರೆಗೆ ಒಂದೇ ಒಂದು ಸಿಕ್ಸರ್‌ ಬಾರಿಸದ ಟೀಂ ಇಂಡಿಯಾದ ಮೂವರು ಸ್ಟಾರ್‌ ಕ್ರಿಕೆಟಿಗರು ಇವರೇ

Cricketers of Team India who did not hit a six: ಇಲ್ಲಿಯವರೆಗೂ ಟಿ20 ಹಾಗೂ ಏಕದಿನ ಕ್ರಿಕೆಟ್‌ʼನಲ್ಲಿ ಒಂದೇ ಒಂದು ಸಿಕ್ಸರ್ ಬಾರಿಸಲು ಸಾಧ್ಯವಾಗದ ಮೂವರು ಸ್ಟಾರ್ ಕ್ರಿಕೆಟಿಗರು ಯಾರೆಂದು ತಿಳಿಯೋಣ  

Written by - Bhavishya Shetty | Last Updated : Aug 25, 2024, 05:22 PM IST
    • ಭಾರತೀಯ ಕ್ರಿಕೆಟ್ ಲೋಕದಲ್ಲಿ ಅನೇಕ ಶ್ರೇಷ್ಠ ಆಟಗಾರರಿದ್ದಾರೆ
    • ಟೀಂ ಇಂಡಿಯಾದ ಮೂವರು ಆಟಗಾರರು ಯಾರೆಂಬುದು ನಿಮಗೆ ತಿಳಿದಿದೆಯೇ?
    • ಸಿಕ್ಸರ್‌ ಬಾರಿಸದಿದ್ದರೂ ಈ ಮೂವರು ಟೀಂ ಇಂಡಿಯಾದ ಸ್ಟಾರ್‌ ಪ್ಲೇಯರ್ಸ್‌
ಏಕದಿನ ಮತ್ತು ಟಿ20ಯಲ್ಲಿ ಇದುವರೆಗೆ ಒಂದೇ ಒಂದು ಸಿಕ್ಸರ್‌ ಬಾರಿಸದ ಟೀಂ ಇಂಡಿಯಾದ ಮೂವರು ಸ್ಟಾರ್‌ ಕ್ರಿಕೆಟಿಗರು ಇವರೇ title=
File Photo

Team India: ಭಾರತೀಯ ಕ್ರಿಕೆಟ್ ಲೋಕದಲ್ಲಿ ಅನೇಕ ಶ್ರೇಷ್ಠ ಆಟಗಾರರಿದ್ದಾರೆ. ಆದರೆ ಏಕದಿನ ಹಾಗೂ ಟಿ20 ಕ್ರಿಕೆಟ್‌ʼನಲ್ಲಿ ಒಂದೇ ಒಂದು ಸಿಕ್ಸರ್ ಬಾರಿಸಲಾಗದ ಟೀಂ ಇಂಡಿಯಾದ ಮೂವರು ಆಟಗಾರರು ಯಾರೆಂಬುದು ನಿಮಗೆ ತಿಳಿದಿದೆಯೇ? ಸಿಕ್ಸರ್‌ ಬಾರಿಸದಿದ್ದರೂ ಈ ಮೂವರು ಟೀಂ ಇಂಡಿಯಾದ ಸ್ಟಾರ್‌ ಪ್ಲೇಯರ್ಸ್‌ ಎಂಬುದನ್ನು ಇಲ್ಲಿ ಗಮನಿಸಲೇ ಬೇಕು.

ಇದನ್ನೂ ಓದಿ: ರಾತ್ರಿ ವೇಳೆ ತಪ್ಪಿಯೂ ಸಹ ಈ ದಿಕ್ಕಿಗೆ ಕಾಲು ಹಾಕಿ ಮಲಗಬೇಡಿ: ಮನೆ ಹಿರಿಯನ ಆಯಸ್ಸಿಗೆ ಬರುತ್ತೆ ಆಪತ್ತು; ಬಡತನ ಹೆಚ್ಚುತ್ತೆ!

ಅಂದಹಾಗೆ ಇಲ್ಲಿಯವರೆಗೂ ಟಿ20 ಹಾಗೂ ಏಕದಿನ ಕ್ರಿಕೆಟ್‌ʼನಲ್ಲಿ ಒಂದೇ ಒಂದು ಸಿಕ್ಸರ್ ಬಾರಿಸಲು ಸಾಧ್ಯವಾಗದ ಮೂವರು ಸ್ಟಾರ್ ಕ್ರಿಕೆಟಿಗರು ಯಾರೆಂದು ತಿಳಿಯೋಣ

ಕುಲದೀಪ್ ಯಾದವ್: ಟೀಂ ಇಂಡಿಯಾದ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರು ಭಾರತದ ಪರ ಟೆಸ್ಟ್, ODI ಮತ್ತು T20 ಅಂತರಾಷ್ಟ್ರೀಯ ಕ್ರಿಕೆಟ್‌ʼನ ಎಲ್ಲಾ ಮೂರು ಸ್ವರೂಪಗಳನ್ನು ಆಡುತ್ತಾರೆ. ಟೆಸ್ಟ್ ಕ್ರಿಕೆಟ್‌ʼನಿಂದ ಅಂತರಾಷ್ಟ್ರೀಯ ಕ್ರಿಕೆಟ್ ಆರಂಭಿಸಿರುವ ಕುಲದೀಪ್ ಯಾದವ್, ಏಕದಿನ ಹಾಗೂ ಟಿ20ಯಲ್ಲಿ ಇನ್ನೂ ಒಂದೇ ಒಂದು ಸಿಕ್ಸರ್ ಬಾರಿಸಿಲ್ಲ. ಏಕದಿನದಲ್ಲಿ 106 ಮತ್ತು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ 40 ಪಂದ್ಯಗಳನ್ನು ಆಡಿದ್ದಾರೆ.

ಯುಜ್ವೇಂದ್ರ ಚಹಾಲ್: ಯುಜ್ವೇಂದ್ರ ಚಹಾಲ್ 2016 ರಲ್ಲಿ ಭಾರತದ ಪರ ಏಕದಿನ ಕ್ರಿಕೆಟ್‌ʼಗೆ ಪಾದಾರ್ಪಣೆ ಮಾಡಿದರು. ಅಲ್ಲಿಂದ ಇಲ್ಲಿಯವರೆಗೂ ಚಾಹಲ್ ಒಂದೇ ಒಂದು ಸಿಕ್ಸರ್ ಬಾರಿಸಲು ಸಾಧ್ಯವಾಗಿಲ್ಲ. ಇದುವರೆಗೆ ಟಿ20 ಕ್ರಿಕೆಟ್‌ʼನಲ್ಲಿ 13 ಎಸೆತಗಳನ್ನು ಆಡಿರುವ ಅವರು ಏಕದಿನದಲ್ಲಿ 141 ಎಸೆತಗಳನ್ನು ಎದುರಿಸಿದ್ದಾರೆ. ಮತ್ತೊಂದು ವಿಶೇಷವೆಂದರೆ, ಚಹಾಲ್ ಲಿಸ್ಟ್ ಎ ಮತ್ತು ಪ್ರಥಮ ದರ್ಜೆ ಕ್ರಿಕೆಟ್ʼನಲ್ಲಿ ಒಟ್ಟು 3 ಸಿಕ್ಸರ್ ಬಾರಿಸಿದ್ದಾರೆ.

ಇಶಾಂತ್ ಶರ್ಮಾ: ಇಶಾಂತ್ ಶರ್ಮಾ ಕೂಡ ಇದುವರೆಗೆ ಟಿ20 ಮತ್ತು ಏಕದಿನ ಕ್ರಿಕೆಟ್‌ʼನಲ್ಲಿ ಭಾರತದ ಪರ ಒಂದೇ ಒಂದು ಸಿಕ್ಸರ್ ಬಾರಿಸಿಲ್ಲ. ಸದ್ಯ ಭಾರತ ಪರ ಇಶಾಂತ್ ಶರ್ಮಾ ಯಾವುದೇ ಮಾದರಿಯಲ್ಲಿ ಕ್ರಿಕೆಟ್ ಆಡುತ್ತಿಲ್ಲ. 2007 ರಲ್ಲಿ ಭಾರತ ಟೆಸ್ಟ್ ಕ್ರಿಕೆಟ್‌ʼಗೆ ಪಾದಾರ್ಪಣೆ ಮಾಡಿದ ಇಶಾಂತ್ ಶರ್ಮಾ, ಸುದೀರ್ಘ ಸ್ವರೂಪದಲ್ಲಿ ಒಮ್ಮೆ ಸಿಕ್ಸರ್ ಬಾರಿಸಿದ್ದಾರೆ.

ಇದನ್ನೂ ಓದಿ: ಮಲಗುವಾಗ ದಿಂಬಿನ ಕೆಳಗೆ ಈ ಹೂವಿನ ದಳ ಇಟ್ಟರೆ ಅದೃಷ್ಟವೇ ಖುಲಾಯಿಸಿದಂತೆ! ಕೈ ತುಂಬಾ ದುಡ್ಡು... ಕೋಟ್ಯಾಂತರ ಆಸ್ತಿಗೆ ವಾರಸ್ದಾರರಾಗ್ತೀರಿ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News