Renukaswamy murder case : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಪೂರ್ಣಗೊಂಡಿದೆ.ಇನ್ನೆರಡು ದಿನದಲ್ಲಿ ಚಾರ್ಜ್ ಶೀಟ್ ಸಾಧ್ಯತೆ ಇದೆ. ಕೊಲೆಗೆ ಪ್ರಮುಖ ಕಾರಣ ಏನೂ ಎಂಬುದು ಸಾಕ್ಷಿ ಸಮೇತ ಪೊಲೀಸರಿಗೆ ಗೊತ್ತಾಗಿದೆ. ಹಾಗಾದ್ರೆ ಕೊಲೆ ಕೇಸಲ್ಲಿ ಇವತ್ತಾಗಿರುವ ಡೆವಲಪ್ಮೆಂಟ್ ಏನೂ ಎಂಬುದನ್ನು ಹೇಳ್ತಿವಿ ನೋಡಿ.
ಕೊನೆಗೂ ರೇಣುಕಾಸ್ವಾಮಿ ಕೊಲೆಗೆ ಅಸಲಿ ಕಾರಣ ಏನೆಂಬುದು ಬಯಲಾಗಿದೆ. ದರ್ಶನ್ ಗೆಳತಿ ಪವಿತ್ರಾ ಗೌಡಗೆ ಇನ್ಸಟಾಗ್ರಾಂ ಮೂಲಕ ಚಿತ್ರದುರ್ಗದ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಗಳನ್ನು ಕಳುಹಿಸಿದ್ದು ಕನ್ಫರ್ಮ್ ಆಗಿದೆ. ಸ್ವಾಮಿಯ ಕೊಲೆ ನಂತರ ಆತನ ಮೊಬೈಲ್ ನ್ನ ಆರೋಪಿಗಳು ನಾಶ ಮಾಡಿದ್ರು. ಹೀಗಾಗಿ ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಕಳುಹಿಸಿದ್ದ ಮೆಸೇಜ್ ಗಳ ಬಗ್ಗೆ ಮಾಹಿತಿ ಕೊಡುವಂತೆ ಕಾಮಾಕ್ಷಿಪಾಳ್ಯ ಪೊಲೀಸರು ಇನ್ಸ್ಸ್ಟಾಂಗ್ರಾಂಗೆ ಪತ್ರ ಬರೆದಿದ್ರು. ಈಗ ಆ ಮೆಸೇಜ್ ಗಳು, ಫೋಟೋ ಗಳನ್ನ ಪೊಲೀಸರಿಗೆ ಇನ್ಸ್ಸ್ಟಾಗ್ರಾಂ ನೀಡಿದೆ. ಇನ್ನೂ ಕೊಲೆ ಕೇಸಲ್ಲಿ ಪೊಲೀಸರ ತನಿಖೆ ಮುಕ್ತಾಯವಾಗಿದ್ದು ಹೈದರಾಬಾದ್ ನಿಂದ ಕೆಲ ಮಾಹಿತಿ ಮಾತ್ರ ಬರಬೇಕಿದೆ. ಆದರೆ ಇಲ್ಲಿಯವರೆಗೂ ನಡೆದಿರುವ ತನಿಖೆಯ ಸಾರಾಂಶ, ಸಾಕ್ಷಿಗಳನ್ನು ಇಟ್ಟುಕೊಂಡು ಇನ್ನೆರಡು ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸೋದಕ್ಕೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಇದನ್ನೂ ಓದಿ:NTR ದೇಗುಲ ದರ್ಶನ ಹಿಂದಿನ ನಿಜವಾದ ಕಾರಣ.? ಅಸಲಿಗೆ ಕರ್ನಾಟಕಕ್ಕೆ ಯಂಗ್ ಟೈಗರ್ ಬಂದಿದ್ದೇಕೆ ಗೊತ್ತೆ..?
ಈಗಾಗಲೇ ಕೊಲೆ ಕೇಸಲ್ಲಿ 17 ಜನ ಆರೋಪಿಗಳನ್ನ ಅರೆಸ್ಟ್ ಮಾಡಿರೋ ಪೋಲಿಸರು ಪ್ರಕರಣದಲ್ಲಿ ಯಾರ್ಯಾರು ನೇರವಾಗಿ ಭಾಗಿಯಾಗಿದ್ದಾರೆ. ಯಾರೆಲ್ಲ ಪರೋಕ್ಷವಾಗಿ ಇನ್ವಾಲ್ ಆಗಿದ್ದಾರೆ ಎನ್ನುವುದರ ಆಧಾರದ ಮೇಲೆ ಆರೋಪಿಗಳ ವಿರುದ್ಧ ಸೆಕ್ಷನ್ ಗಳನ್ನ ಆ್ಯಡ್ ಮಾಡಲು ಮುಂದಾಗಿದ್ದರಂತೆ. ಕೇಶವ್ ಮೂರ್ತಿ,ನಿಖಿಲ್ ನಾಯಕ್, ಕಾರ್ತಿಕ್, ದೀಪಕ್ ಹಾಗೂ ವಿನಯ್ ಅಣತಿಯಂತೆ ಹಣದ ಆಸೆಗಾಗಿ ಮೃತದೇಹವನ್ನು ಮೋರಿಗೆ ಎಸೆಯಲು ಮುಂದಾಗಿದ್ರು ಅಲ್ಲದೇ ಸಾಕ್ಷಿ ನಾಶ ಮಾಡಿವ ಸಲುವಾಗಿ ಕೃತ್ಯ ಎಸಗಿರೋದು ತನಿಖೆಯಲ್ಲಿ ತಿಳಿದುಬಂದಿದೆ. ಹೀಗಾಗಿ ಈ ಮೂವರಿಗೆ ಆದಷ್ಟು ಬೇಗ ಜಾಮೀನು ಸಿಗುತ್ತದೆ ಎಂದು ಹೇಳಲಾಗುತ್ತಿದೆ.
ಇನ್ನೂ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ. ಜಿ ಪರಮೇಶ್ವರ್ ಯಾರನ್ನ ಎ1 ಮಾಡಬೇಕು, ಯಾರನ್ನು ಎ2 ಮಾಡಬೇಕು ಎಂದು ಪೊಲೀಸರು ತೀರ್ಮಾನ ಮಾಡುತ್ತಾರೆ. ಮೃತನ ಕುಟುಂಬಕ್ಕೆ ನ್ಯಾಯ ಸಿಗಬೇಕು, ಅದಕ್ಕೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಚಾರ್ಜ್ ಶೀಟ್ ತಯಾರಿ ಮಾಡಿಕೊಂಡಿದ್ದಾರೆ. ನ್ಯಾಯಾಲಯಕ್ಕೆ ನಾವು ಕೂಡ ಮನವಿ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.
ಒಟ್ಟಾರೆ ಇನ್ನೂ ಎರಡು ಮೂರು ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸೋದಕ್ಕೆ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದು, ಎಸ್ಪಿಪಿ ಯವರು ಸಹ ಸ್ಪುಟಿನಿ ಮುಗಿಸಿದ್ದಾರೆ. ಇದರಿಂದ ಆರೋಪಿಗಳ ಎದೆಯಲ್ಲಿ ನಡುಕ ಶುರುವಾಗಿದ್ದು, ಎಷ್ಟು ಜನ ಅಪರಾಧಿಗಳಾಗುತ್ತಾರೆ. ಯಾರು ಪ್ರಕರಣದಿಂದ ಬಚಾವ್ ಆಗ್ತಾರೆ ಎಂಬುನ್ನು ಕಾದು ನೋಡಬೇಕು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.