/kannada/photo-gallery/anchor-anushree-marriage-video-goes-viral-on-social-media-249530  Anchor Anushree: ಸದ್ದಿಲ್ಲದೇ ನಡೆದೇ ಹೋಯ್ತು ಆಂಕರ್‌ ಅನುಶ್ರೀ ಮದುವೆ.. ಕನ್ನಡದ ʼಈʼ ಸ್ಟಾರ್‌ ನಟನನ್ನು ವರಿಸಿದ ಖ್ಯಾತ ನಿರೂಪಕಿ! ಆತ ಯಾರು ಗೊತ್ತೇ?! Anchor Anushree: ಸದ್ದಿಲ್ಲದೇ ನಡೆದೇ ಹೋಯ್ತು ಆಂಕರ್‌ ಅನುಶ್ರೀ ಮದುವೆ.. ಕನ್ನಡದ ʼಈʼ ಸ್ಟಾರ್‌ ನಟನನ್ನು ವರಿಸಿದ ಖ್ಯಾತ ನಿರೂಪಕಿ! ಆತ ಯಾರು ಗೊತ್ತೇ?! 249530

hardik Pandya: ಹಾರ್ದಿಕ್ ಆಟಿಟ್ಯೂಡ್ ಶಾಟ್ ನೋಡಿದ್ದೀರಾ? ನೆವರ್ ಬಿಫೋರ್.. ನೆವರ್ ಆಫ್ಟರ್.. ವಿಡಿಯೋ ಫುಲ್‌ ವೈರಲ್!!‌

India vs Bangladesh: ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಮೂರು ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಸರಣಿಯ ಮೊದಲ ಪಂದ್ಯ ಭಾನುವಾರ (ಅಕ್ಟೋಬರ್ 07) ಗ್ವಾಲಿಯರ್‌ನ ನ್ಯೂ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯವನ್ನು ಭಾರತ ತಂಡ 7 ವಿಕೆಟ್‌ಗಳಿಂದ ಗೆದ್ದುಕೊಂಡಿತು. 

Written by - Savita M B | Last Updated : Oct 7, 2024, 07:56 AM IST
  • ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಮೂರು ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.
  • ಗ್ವಾಲಿಯರ್‌ನ ನ್ಯೂ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಿತು.
hardik Pandya: ಹಾರ್ದಿಕ್ ಆಟಿಟ್ಯೂಡ್ ಶಾಟ್ ನೋಡಿದ್ದೀರಾ? ನೆವರ್ ಬಿಫೋರ್.. ನೆವರ್ ಆಫ್ಟರ್.. ವಿಡಿಯೋ ಫುಲ್‌ ವೈರಲ್!!‌ title=

IND vs BAN: ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಮೂರು ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಸರಣಿಯ ಮೊದಲ ಪಂದ್ಯ ಭಾನುವಾರ (ಅಕ್ಟೋಬರ್ 07) ಗ್ವಾಲಿಯರ್‌ನ ನ್ಯೂ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಿತು. 

ಈ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ಗಳ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಭಾರತ ತಂಡದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅದ್ಭುತ ಪ್ರದರ್ಶನ ನೀಡಿದರು. ಅವರು ಚೆಂಡಿನ ಜೊತೆಗೆ ಬ್ಯಾಟ್‌ನಲ್ಲೂ ವಿಜೃಂಭಿಸಿದರು. ಪಂದ್ಯದಲ್ಲಿ ಅವರು ಆಡಿದ ಒಂದು ಶಾಟ್ ಎಲ್ಲರನ್ನೂ ಅಚ್ಚರಿಗೊಳಿಸಿತು. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. 

ಈ ಇನಿಂಗ್ಸ್ ನ 12ನೇ ಓವರ್ ನಲ್ಲಿ ಹಾರ್ದಿಕ್ ಅತ್ಯುತ್ತಮ ಶಾಟ್ ಆಡಿದರು. ಬಾಂಗ್ಲಾದೇಶದ ಅನುಭವಿ ಬೌಲರ್ ತಸ್ಕಿನ್ ಅಹ್ಮದ್ ಚೆಂಡನ್ನು ಬೌನ್ಸರ್ ಆಗಿ ಎಸೆದರು. ಹಾರ್ದಿಕ್ ತನ್ನ ಆಟಿಟ್ಯೂಡ್‌ನಿಂದ ನೆವರ್‌ ಬೀಪೋರ್‌ ಎನ್ನುವಂತೆ ಬ್ಯಾಟ್‌ ಬೀಸಿದರು.. ಇದರಿಂದ ಬಾಲ್‌ ಬೌಂಡರಿ ಬಾರಿಸಿತು.. ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಋತುವಿನಲ್ಲಿ ಹಾರ್ದಿಕ್ ಪಾಂಡ್ಯ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅಮೋಘ ಬ್ಯಾಟಿಂಗ್ ನಡೆಸಿ ಟೀಂ ಇಂಡಿಯಾಗೆ ಸುಲಭ ಜಯ ತಂದುಕೊಟ್ಟರು. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಕೇವಲ 16 ಎಸೆತಗಳಲ್ಲಿ 243.75 ಸ್ಟ್ರೈಕ್ ರೇಟ್‌ನಲ್ಲಿ ಅಜೇಯ 39 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಹಾರ್ದಿಕ್ ಪಾಂಡ್ಯ 5 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದರು. ಪಾಂಡ್ಯ ಸಿಕ್ಸರ್ ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಹಾರ್ದಿಕ್ ಸಿಕ್ಸರ್ ನೊಂದಿಗೆ ಪಂದ್ಯವನ್ನು ಅಂತ್ಯಗೊಳಿಸಿದ್ದು ಇದು ಐದನೇ ಬಾರಿ. ಪಾಂಡ್ಯ ಬಿಟ್ಟರೆ ಬೇರೆ ಯಾವುದೇ ಭಾರತೀಯ ಬ್ಯಾಟ್ಸ್‌ಮನ್‌ಗಳು ತಂಡವನ್ನು ಇಷ್ಟು ಬಾರಿ ಸಿಕ್ಸರ್ ಬಾರಿಸಲಿಲ್ಲ.

ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅವರ ನಿರ್ಧಾರವೂ ಸರಿಯೆಂದು ಸಾಬೀತಾಯಿತು. ಬಾಂಗ್ಲಾದೇಶ ತಂಡ 19.4 ಓವರ್‌ಗಳಲ್ಲಿ 127 ರನ್‌ಗಳಿಗೆ ಆಲೌಟಾಯಿತು. ಭಾರತದ ಪರವಾಗಿ ವರುಣ್ ಚಕ್ರವರ್ತಿ ಮತ್ತು ಅರ್ಷದೀಪ್ ಸಿಂಗ್ ಅದ್ಭುತ ಬೌಲಿಂಗ್ ಮಾಡಿ ತಲಾ 3 ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ, ಮಯಾಂಕ್ ಯಾದವ್ ಮತ್ತು ವಾಷಿಂಗ್ಟನ್ ಸುಂದರ್ ಕೂಡ ವಿಕೆಟ್ ಪಡೆದರು. 128 ರನ್‌ಗಳ ಗುರಿಯನ್ನು ಟೀಂ ಇಂಡಿಯಾ 11.5 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಸಾಧಿಸಿತು. ಪಾಂಡ್ಯ ಜೊತೆಗೆ ಸಂಜು ಸ್ಯಾಮ್ಸನ್ ಮತ್ತು ಸೂರ್ಯಕುಮಾರ್ ಯಾದವ್ ಕೂಡ ತಲಾ 29 ರನ್ ನೀಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.