Optical illusion: ಒಗಟನ್ನು ಸಾಲ್ವ್ ಮಾಡಲು ನಿಮಗೆ ಇಷ್ಟಾನಾ? ಹಾಗಾದರೆ ಈ ಸ್ಟೋರಿ ಓದಿ..ನಿಮಗೆ ಈ ಆಪ್ಟಿಕಲ್ ಇಲ್ಯೂಶನ್ ಚಿತ್ರವನ್ನು ಸಾಲ್ವ್ ಮಾಡುವುದು ಒಳ್ಳೆ ಕಿಕ್ ಕೊಡುತ್ತೆ. ನೋಡುವುದಕ್ಕೆ ಈ ಚಿತ್ರ ಸರ್ವೇ ಸಾಮಾನ್ಯವಾಗಿ ಕಾಣಿಸುತ್ತದೆ, ಬಹಳ ಸುಲಭವಾಗಿ ಇದನ್ನು ಪರಿಹರಿಸಿ ಬಿಡಬಹುದು ಎಂದು ನೀವು ಭಾವಿಸಬಹುದು, ಆದರೆ ಇದು ನೀವು ಅಂದುಕೊಂಡಷ್ಟು ಸುಲಭವಲ್ಲ. ಹಾಗೂ ಇದು ನಿಮಗೆ ಅಷ್ಟು ಸುಲಭ ಎನಿಸಿದರೆ, 10 ಸೆಕೆಂಡುಗಳಲ್ಲಿ ಈ ಒಗಟನ್ನು ಪರಿಹರಿಸಿ.
ಇದೊಂದು ಕಾರ್ಟೂನ್ ಚಿತ್ರ. ಒಬ್ಬ ವ್ಯಕ್ತಿ ದೊಡ್ಡ ಮನೆಯ ಹಾಲ್‌ನಲ್ಲಿದ್ದಾನೆ. ಆ ಹಾಲ್‌ನಲ್ಲಿ ಅನೇಕ ರೀತಿಯ ವಸ್ತುಗಳಿವೆ. ದುಂಡು ಮೇಜು, ಅದರ ಮೇಲೆ ಒಂದಿಷ್ಟು ವಸ್ತುಗಳು, ಪಕ್ಕದಲ್ಲಿ ದೊಡ್ಡ ಸೋಫಾ, ಪಕ್ಕದಲ್ಲಿ ದೊಡ್ಡ ಕುರ್ಚಿ ಹೀಗೆ ಹಲವು ವಸ್ತುಗಳು ಇರುವುದು ಈ ಚಿತ್ರದಲ್ಲಿ ಕಾಣಬಹುದು. ಆದರೆ ಈ ಕಾರ್ಟೂನ್ ಚಿತ್ರದಲ್ಲಿ ಒಬ್ಬ ಮನುಷ್ಯ ನಟಯಿ ಮರಿಯನ್ನು ಹುಡುಕುತ್ತಿರುವುದನ್ನು ಕಾಣಬಹುದು.ಈ ಚಿತ್ರದಲ್ಲಿ ನಾಯಿ ಮರಿ ಎಲ್ಲಿಯೋ ಅವಿತು ಕುಳಿತಿದೆ. ಕೈಯಲ್ಲಿ ಸರಪಳಿ ಹಿಡಿದಿರುವ ಮನುಷ್ಯ ನಾಯಿ ಮರಿಯನ್ನು ಹುಡುಕಾಡುತ್ತಿದ್ದಾನೆ. ಹೀಗೆ ಕಾಣೆಯಾಗಿರುವ, ಈ ಚಿತ್ರದಲ್ಲಿ ಅಡಗಿರುವ ನಾಯಿಮರಿಯನ್ನು 10 ಸೆಕೆಂಡುಗಳಲ್ಲಿ ಹುಡುಕಿ ಕೊಡುವುದೇ ನಿಮ್ಮ ಮುಂದಿರುವ ಚಾಲೆಂಜ್.
ಈ ರೀತಿಯ ಆಪ್ಟಿಕಲ್ ಭ್ರಮೆಗಳು ಮಾನವನ ಮೆದುಳನ್ನು ಪರೀಕ್ಷಿಸುತ್ತವೆ. ಇವು ನಮ್ಮ ಕಣ್ಣೆದುರಿನ ವಸ್ತುಗಳನ್ನು ಗುರುತಿಸದಂತೆ ಮಾಡುವ ಭ್ರಮೆಯನ್ನು ನೀಡುತ್ತವೆ. ಹೆಚ್ಚಿನ ಮಾನಸಿಕ ಸಾಮರ್ಥ್ಯಗಳು, ವೀಕ್ಷಣಾ ಕೌಶಲ್ಯ ಮತ್ತು ಗಮನವನ್ನು ಹೊಂದಿರುವವರು ಮಾತ್ರ ಈ ಪ್ರಶ್ನೆಗಳಿಗೆ ಉತ್ತರಿಸಬಹುದು. ಚಿತ್ರದಲ್ಲಿ ನಾಯಿಮರಿಯನ್ನು ಹುಡುಕಲು, ಅದು ಎಲ್ಲಿ ಅಡಗಿಕೊಂಡಿರಬಹುದು ಎಂಬುದನ್ನು ನೋಡಿ. ಅಂತಹ ಪ್ರದೇಶಗಳನ್ನು ಹುಡುಕಿ.
ನಿರ್ದಿಷ್ಟ ಸಮಯದಲ್ಲಿ ನೀವು ಒಗಟು ಪರಿಹರಿಸಿದರೆ, ಅಭಿನಂದನೆಗಳು. ನೀವು ಇನ್ನೂ ನಾಯಿಮರಿಯನ್ನು ನೋಡದಿದ್ದರೆ, ಸಮಯವನ್ನು ಲೆಕ್ಕಿಸದೆ ಮತ್ತೆ ಮತ್ತೆ ನೋಡಿ. ಈ ಚಿತ್ರದಲ್ಲಿ ಅನೇಕ ವಸ್ತುಗಳು ಗೋಚರಿಸುತ್ತವೆ. ಹತ್ತೇ ಸೆಕೆಂಡ್ ಗಳಲ್ಲಿ ನಾಯಿ ಮರಿ ಎಲ್ಲಿ ಅಡಗಿದೆ ಎಂದು ಹೇಳುವುದು ಸ್ವಲ್ಪ ಕಷ್ಟ. ಅದಕ್ಕಾಗಿಯೇ ನಾವು ನಿಮಗೆ ಸುಳಿವು ನೀಡುತ್ತಿದ್ದೇವೆ. ಅದೇನೆಂದರೆ.. ಚಿತ್ರದಲ್ಲಿ ನಾಯಿ ಮರಿ ಹಳದಿಯಾಗಿದೆ.
ಈ ಸುಳಿವುಗಳೊಂದಿಗೆ ಒಗಟು ಸುಲಭವಾಗಿ ಪರಿಹರಿಸಬಹುದು. ಹಲವಾರು ಪ್ರಯತ್ನಗಳ ನಂತರ ನಾಯಿಮರಿ ಈ ಮನೆಯಲ್ಲಿ ಎಲ್ಲಿ ಅಡಗಿದೆ ಎಂಬುದನ್ನು ನೀವು ಕಂಡುಹಿಡಿಯಲಾಗದಿದ್ದರೆ, ಕೆಳಗಿನ ಪರಿಹಾರ ಚಿತ್ರವನ್ನು ನೋಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.